ಈ ಪುಟವನ್ನು ಪರಿಶೀಲಿಸಲಾಗಿಲ್ಲ.
84 ಕರ್ಣಾಟಕ ಕವಿಚರಿತೆ. 15 ನೆಯ
ಕಲ್ಯಾಣಕೀರ್ತಿ. 1439 ಈತನು ಜ್ಞಾನಚಂದ್ರಾಭ್ಯುದಯ, ಕಾಮನಕಥೆ, ಅನುಪ್ರೇಕ್ಷೆ, ಜಿನ ಸ್ತುತಿ, ತತ್ವಭೇದಾಷ್ಟಕ ಎಂಬ ಗ್ರಂಥಗಳನ್ನು ಬರೆದಿದ್ದಾನೆ. ಇವನು ಜೈನಕವಿ. ಇವನ ದೀಕ್ಷಾಗುರು ಮೂಲಸಂಘದ ದೇಶೀಯಗಣದ ಲಲಿತ ಕೀರ್ತಿ. ಜ್ಞಾನಚಂದ್ರಾಭ್ಯುದಯವನ್ನು “ಶಕನೃಪನ ರತಿಲೋಕ (1362) ಸಂಖ್ಯೆಯಿಂ ವಿದಿತಸಿದ್ಧಾರ್ಧಿ” ವರ್ಷದಲ್ಲಿ---ಎಂದರೆ 1439 ರಲ್ಲಿ, ಬರೆದಂ ತೆಯೂ ಕಾಮನ ಕಥೆಯನ್ನು ಲಲಿತಕೀರ್ತಿಯ ಶಿಷ್ಯನಾದ ತುಳುವದೇಶದ ದೊರೆ ಭೈರವಸುತಪಾಂಡ್ಯರಾಯನ ಇಷ್ಟಾನುಸಾರವಾಗಿ ಬರೆದಂತೆಯೂ ಕವಿ ಹೇಳುತ್ತಾನೆ. ಸಿದ್ಧರಾಶಿ ಎಂಬ ಗ್ರಂಥವನ್ನೂ ಈತನು ಬರೆದಿರು ವಂತೆ ತೋರುತ್ತದೆ. ಇವನ ಗ್ರಂಥಗಳಲ್ಲಿ 1. ಜ್ಞಾನಚಂದ್ರಾಭ್ಯುದಯ ಇದು ವಾರ್ಧಕ, ಭಾಮಿನಿ, ಪರಿವರ್ಧಿನಿ ಈ ಪಟ್ಪದಿಗಳಲ್ಲಿ ಬರೆ ದಿದೆ; ಸಂಧಿಗಳಾಗಿ ವಿಭಾಗಿಸಿಲ್ಲ; ಒಟ್ಟು 908 ಪದ್ಯಗಳಿವೆ. ಇದಕ್ಕೆ ಜ್ಞಾನಚಂದ್ರಷಟ್ಪದಿ ಎಂಬ ಹೆಸರೂ ಉಂಟು. ಇದರಲ್ಲಿ ಜ್ಞಾನಚಂದ್ರ ನೆಂಬ ರಾಜನು ತಪಸ್ಸು ಮಾಡಿ ಮುಕ್ತಿಯನ್ನು ಪಡೆದ ಕಥೆ ಹೇಳಿದೆ. ಗ್ರಂ ಥಾವತಾರದಲ್ಲಿ ಮಹಾವೀರಸ್ತುತಿ ಇದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ__ ಸ್ತ್ರೀವರ್ಣನೆ
ಅರುಣಮಣಿದ್ಯುತಿರದಸಚ್ಛದನೆಯ|ಮರಕತಮಣಿರುಚಿನಿಭತನುಯಷ್ಟಿಯ | ಹರಿನೀಲದ ಕಿರಣಾಂಕುರಸನ್ನಿಭಕುಂತಳಭಾಸುರೆಯ || ಪರಭೃತವನಿಭಕೋಮಲವಾಣಿಯ | ದರಹಸಿತಾಸ್ಯೆಯ ಮದಗಜಗಮನೆಯ | ತರುಣಿಯ ಜಿತರಂಭೆಯ ರೂಪನು ವರ್ಣಿಪ ಕೋವಿದನಾವಂ || ಅಡಿಗಳ ಚೆಲ್ವಿಂದಸುಕೆಯ ತಳಿರನು | ನಡೆಯಿಂ ವರಹಂಸಿಯ ನಡೆಯನು ಕಿಳು | ದೊಡೆಯಿ೦ ಕಾಮನ ಬಾಣಧಿಯನು ಮೇಣ್ ಕದಳಿಯ ಕಂಭವನು ||
ತೊಡೆಗಳ ಚೆಲ್ವಿಂ ಜಳೆವಳು ಜಘನದ | ಕಡುಚೆಲ್ವಿ ಕರಿಕಂಭಸ್ಥಳವನು | ನಡುವಿಂ ಪವಿಯಂ ಕುಚದಿಂ ಕಳಶವ ಗಳದಿಂ ಶಂಖವನು ||