ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನ] ಕಲ್ಯಾಣಕೀರ್ತಿ. 85 ನಂದನವನ
ಗಳಪುವ ಗಿಳಿಗಳ ಮೊರೆವಳಿನಿವಹದ | ನಲಿದುಲಿದಾಡುವ ಪಿಕನಿಕರಂಗಳ | ಸುಳೆಸುಳೆದಳಸಾವ ಪುರುಳಿಗಳೋಳಿಯ ಸಲೆ ಪೆಣ್ದುಂಬಿಗಳ || ಸುಲಲಿತಕಳಕಳಕೋಲಾಹಲದಿಂ | ವಿಲಸಿತಕಿನ್ನ ರಜನದಂಪತಿಗಳ | ಕಳಕಳನಿನದಂ ಮಸುಳಿಸುತಿಹುದಾ ನಂದನವನದಲ್ಲಿ ||
2. ಕಾಮನಕಥೆ
ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 4, ಪದ್ಯ 331. ಅಲ್ಲಲ್ಲಿ ಕಂದ ಪಟ್ಪದಿವಚನಗಳೂ ಇವೆ. ಇದರಲ್ಲಿ ಜೈನಮತಾನುಸಾರವಾಗಿ ಕಾಮನ ಕಥೆ ಹೇಳಿದೆ. ಗ್ರಂಧಾವತಾರದಲ್ಲಿ ನೇಮಿಜಿನನನ್ನೂ ಬಳಿಕ ಸರಸ್ವತಿ, ಜಿನಮುನಿಗಳು, ಸ್ವಗುರು ಲಲಿತಕೀರ್ತಿ, ಇವರುಗಳನ್ನೂ ಕವಿ ಹೊಗಳಿದಾ ನೆ. ಈ ಗ್ರಂಥದಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ_
ಮಗುವನ್ನು ರಾಕ್ಷಸನು ಒಯ್ಯಲು ರುಕ್ಮಿಣಿಯ ಪ್ರಲಾವ ಪಕ್ಕವಿಲ್ಲದ ಪಕ್ಕಿಯಂದದಿ ನನ್ನನು | ದೊಕ್ಕನೆ ಮಾಡಿದೆ ಮಗನೆ| ದಿಕ್ಕಾವುದು ಪೇಳೆನಗಿನ್ನು ನಂದನ |ಅಕ್ಕಟ ತಾಯನು ತೊಳೆದೈ|| ಹಾ ಸಜ್ಜನಜನಶೃಂಗಾರಹಾರನೆ | ಹಾ ಸರ್ವಕಳೆಗಳ ನಿಧಿಯೆ | ಹಾ ಸುತ ಸವತಿಯ ಕಣ್ಗೆ ನೀ ಕಸವಾದೆ|ಹಾ ಸರಸೀರುಹನಯನ|| 3. ಅನುಪ್ರೇಕ್ಷೆ ಇದರಲ್ಲಿ 74 ಪದ್ಯಗಳಿವೆ. ಕೊಂಡಕುಂದಾಚಾರ್‍ಯನ ಗಾಹೆಯ ಅರ್ಥವನ್ನು ಭಾವಿಸಿ ಈ ಗ್ರಂಥವನ್ನು ಬರೆದಂತೆ ಕವಿ ಹೇಳುತ್ತಾನೆ. ಇದರಿಂದ ಒಂದೆರಡು ಪದ್ಯಗಳನ್ನು ಉದಾಹರಿಸುತ್ತೇವೆ_ ವಿಲಸದಿಂದ್ರಿಯಪಾಟವಂ | ನೆಲಸಿದಂಗದ ಸೌಷ್ಠವಂ | ತೊಳಪ ಮಿಂಚಿನ ರೀತಿಯಿಂ | ತೊಲಗಿ ಹೋಹುದು ಜೀವನೇ || ನೆನೆದು ಸಂಸೃತಿಜಲಧಿಯೊ | ಳನುದಿನಂ ನೆಳೆ ಮುಳುಗಿದಾ | ನಿನಗೆ ನೀನೆಲೆ ಶೋಕಿಸೈ | ಕನಲಿ ದುಃಖವನುಣದಿರು || 4. ಜಿನಸ್ತುತಿ
ಇದರಲ್ಲಿ 27 ಕಂದಗಳಿವೆ. ಇದರಿಂದ ಒಂದೆರಡು ಪದ್ಯಗಳನ್ನು ತೆಗದು ಬರೆಯುತ್ತೇವೆ__