ಈ ಪುಟವನ್ನು ಪರಿಶೀಲಿಸಲಾಗಿಲ್ಲ.



88 ಕರ್ಣಾಟಕ ಕವಿಚರಿತೆ. [16 ನೆಯ

         ಸುರಲೋಕಂಗಳ  ಪೊಕ್ಕೊಡಂತಿರದೆ ತಾಂ ಪಾತಾಳಮಂ ಪೊಕ್ಕೊಡಂ | 
         ಗಿರಿದುರ್ಗoಗಳ ಪೊಕ್ಕೊಡಂ ಶರಧಿಯಂ ಪಾಯಲ್ಲಿ ಪೊಕ್ಕಿರ್ದೊಡಂ || 
         ಭರದಿಂ ಪರ್ವತದಗ್ರದಲ್ಲಿ ಗುಹೆಯಂ ಪೊಕ್ಕಿರ್ದೊಡಂತೆಲ್ಲಿಯುಂ | 
         ಶರಣಿಲ್ಲಂ ಪೆಹಿತಾವ ರಾವು ನಿನಗಂ ಸದ್ಧರ್ಮದುರ್ಗಂ ವಿನಾ ||
                       
                         ----------  
                      
                      ಬೊಮ್ಮರಸ ಸು. 1450 
      
           ಈತನು   ಸೌಂದರಪುರಾಣವನ್ನು  ಬರೆದಿದ್ದಾನೆ. ಇವನು ವೀರಶೈವ 
        ಕವಿ . “ ದಿವ್ಯಶಿವಕವೀಂದ್ರರ ಭೃತ್ಯನೆನಿಸ ಕರ್ಣಾಟಕವಿ " ಎಂದು  ಹೇಳಿ 
        ಕೊಂಡಿದ್ದಾನೆ. ಈ  ಗ್ರಂಥವನ್ನು   ಡೆಂಕಣಿಕೋಟೆಪುರವರಾಧೀಶನಾದ 
        ಗುಂಡಬೊಮ್ಮ, ಚೋಳನಾರಾಯಣ, ಚೋಳರ ಭೀಮ ಎಂಬ ಬಿರುದು 
        ಗಳುಳ್ಳ  ಕಾಮನೃಪಸಿರುಮಯಾಂಬಾಪುತ್ರನಾದ  ಪರಮಮಾಹೇಶ್ವರ ವೈಶ್ಯ 
        ಕುಲತಿಲಕ  ಕವಿಕಮಲಭಾಸ್ಕರ  ತಿಪ್ಪರಸನು  ರಚಿಸಹೇಳಲು , ಚೊಕ್ಕದೇ 
        ವಪಾಧ್ಯನ  ಮಗ  ಗುಮ್ಮಳಾಪುರವರಾಧೀಶ  ಚಿಕ್ಕವೀರನಾರನ  ಆಜ್ಞಾನು 
        ಸಾರವಾಗಿ ರಚಿಸಿದಂತೆ  ಹೇಳುತ್ತಾನೆ .  ಅಲ್ಲದೆ  ಒಬ್ಬ ವಿಶ್ವನಾಧಾಚಾರನನ್ನು 
        ವಿಶೇಷವಾಗಿ ಸ್ತುತಿಸಿ ಅವನ ವಂಶಪರಂಪರೆಯನ್ನು ಹೀಗೆ ಹೇಳಿದ್ದಾನೆ --
                
              ಸೋಮಶಂಭು, ಮಗ "ಕಾಮಿಕಂ ಕಾರಣಂ ಸುಪ್ರಛೇದಂ ಸೂಕ್ಷ್ಮ ಸಾಮ 
        ಸುಜ್ಞಾನಸಂತಾನಮುಖ್ಯಾಗನಸ್ತೋಮದರ್ಧವ್ಯಕ್ತಿಯಂ  ಮಾಡಿ  ವೀರಶೈವಾಚಾರ 
        ಪಸರಿಸುತಿರೆ ಪ್ರೇಮದಿಂದುಪದೇಶವಿತ್ತ' ಸಕಲಾಗಮಾಚಾರ್ಯ; ಮಗ ಶಿವಲೆಂಕಮಂಚ 
        ಣ್ಣ ಪಂಡಿತಾರಾಧ್ಯ; ಮಗ ಉರಿಲಿಂಗಪೆದ್ದಣಾಚಾ ರ್ಯ; ಮಗ ವಿಶ್ವೇಶಪೆದ್ದಣ್ಣ ; ಮಗ 
        ವಿಭೂತಿಯ ಸಿದ್ದಮಲ್ಲೇಶ ; ಮಗ ಶಿವಗುರೂತ್ತಮ ಸೋಮನಾಥಾಚಾರ್ಯ ; ಮಗ 
        ಅನಂತಪೆದ್ದಣ್ಣದೇಶಿಕೇಂದ್ರ ; ಮಗ ವಾರಾಣಸಿಯ ಬಲ್ಲಣಾಚಾರ್ಯ ; ಮಗ ವೀರಶೈ 
        ವೋದ್ಧರಣ ನಾಗಿದೇವಾಧ್ಯ; ಮಗ ಸೀಲಕಂಠಾಚಾರ; ಮಗ ವಿಶ್ವನಾಥಾಚಾರ್ಯ; 
        ಮಗ ಮಧುವರಸಗುರುನಾಧ, ಮಗ ನೀಲಕಂಠಾಚಾರ್; ಮಗ ವಿಶ್ವನಾಧಾಚಾರ್ಯ.
              “ಹೃದಯದೊಳು ಭಾವಿಸಿ ನಮಸ್ಕರಿಸುವೆನು ವಿಶ್ವನಾಥಸದ್ದು ರುವ"
        ಎಂಬುದರಿಂದ  ಈ  ವಿಶ್ವನಾಥಾಚಾರ್ಯನು ಕವಿಗೆ  ಗುರುವಾಗಿದ್ದಂತೆ ತೋರು 
        ತ್ತದೆ , ಮೇಲೆ  ಹೇಳಿದ  ಚೊಕ್ಕದೇವಪಾರನು ಶಿವತತ್ವಚಿಂತಾಮಣಿಯನ್ನು 
        ಬರೆದ ಲಕ್ಕಣ್ಣದಣ್ಣಾಯಕನಿಗೆ (1428) ಸ್ವಲ್ಪ ಹೆಚ್ಚು ಕಡಮೆ ಸಮಕಾಲದವ