ಈ ಪುಟವನ್ನು ಪರಿಶೀಲಿಸಲಾಗಿಲ್ಲ.



         ಶತಮಾನ]                       ವಿಜಯಣ್ಣ. 
         ಚಂದ್ರನ ರಾಜಾವಳೀಕಥೆಯಲ್ಲಿ(1838)ವಿಜಯಣ್ಣನು ರತ್ನಾಕರವರ್ಣಿಯ 
         (1557)1  ಸಮಕಾಲದವೆನೆoದು ಹೇಳಿರುವುದು ಭ್ರಾಂತಿಮೂಲವೆಂದು
         ತೋರುತ್ತದೆ.
              ಇವನ ಗ್ರಂಥ
                         ದ್ವಾದಶಾನುಪ್ರೇಕ್ಷೆ 
             ಇದು ಸಾಂಗತ್ಯದಲ್ಲಿ ಬರೆದಿದೆ ; ಪರಿಚ್ಛೇದ 12, ಪದ್ಯ 1448. 
         ಅಲ್ಲಲ್ಲಿ ಕೆಲವು ವೃತ್ತಗಳೂ ಕಂದಗಳೂ ಇವೆ. ಇದರಲ್ಲಿ ಅಧ್ರುವಾನ 
         ಪ್ರೇಕ್ಷೆ, ಶರಣಾನುಪ್ರೇಕ್ಷೆ, ಏಕತ್ವಾನುಪ್ರೇಕ್ಷೆ, ಅನ್ಯತ್ಯಾನುಪ್ರೇಕ್ಷೆ, ಸಂಸಾ 
         ರಾನುಪ್ರೇಕ್ಷೆ , ಲೋಕಾನುಪ್ರೇಕ್ಷೆ , ಅಶುಚಿತ್ವಾನುಪೇಕ್ಷೆ  , ಆಸವಾನು 
         ಪ್ರೇಕ್ಷೆ, ಸಂವರಾನುಪ್ರೇಕ್ಷೆ, ನಿರ್ಜರಾನುಪ್ರೇಕ್ಷೆ, ಧರ್ಮಾನುಪ್ರೇಕ್ಷೆ, ಬೋ 
         ಧಿದುರ್ಲಭಾನುಪ್ರೇಕ್ಷೆ ಎಂಬ 12 ಅನುಪ್ರೇಕ್ಷೆಗಳು ಅಥವಾ ಚಿಂತನೆಗಳು 
         ನಿರೂಪಿಸಲ್ಪಟ್ಟಿವೆ. ಗ್ರಂಥಾವತಾರದಲ್ಲಿ ವೃಷಭಜಿನನ ಸ್ತುತಿ ಇದೆ. ಬಳಿಕ 
         ಕವಿ ಸಿದ್ಧಾದಿಗಳು , ಸರಸ್ವತಿ , ವೃಷಭಸೇನಾದಿಗೌತಮಗಣಧರರು, 
         ವಿಜಯಕೀರ್ತಿ, ಅವನ ಶಿಷ್ಯ ಪಾರ್ಶ್ವಕೀರ್ತಿ ಇವರುಗಳನ್ನು ಹೊಗಳಿದ್ದಾನೆ. 
         ಪರಿಚ್ಛೇದಗಳ ಕೊನೆಯಲ್ಲಿ ಈ ಗದ್ಯವಿದೆ --
                 
                 ಇತಿ ಶ್ರೀಮದ್ದೇವೇಂದ್ರವೃಂದಮಣಿಮಕುಟಕಿರಣರಂಜಿತಪಾದಾರವಿಂದದ್ವಂದ್ವ                                           
            ಭಗವದರ್ಹತ್ಪರಮೇಶ್ವರ ಮುಖಕಮಲವಿನಿರ್ಗತ ದ್ವಾದಶಾನುಪ್ರೇಕ್ಷೆಯೊಳ್.                
               ಈ ಗ್ರಂಧದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ --
             ಧರ್ಮವನೊಲ್ಲದೆ ಭೋಗಕ್ಕೆ ಹರಿವಾತ | ಕರ್ಮವಶದೊಳಮೃತವನು | 
             ನಿರ್ಮಲಸೌಖ್ಯ ಕಾರಣವೆಂದರಿಯದೆ | ದುರ್ಮತಿ ಕಾಲ್ಗೊಳೆವಂತೆ || 
             ಬಾಲಕನೆಂದು ಕೃಪೆಯ ಮಾಡಿ ಬಿಡನವ | ಮೇಲೆನಿಸುವ ಹಿರಿಯರನು |
             ಪಾಲಿಸಬೇಕೆಂಬವನಲ್ಲ ಮನದಲ್ಲಿ | ಕಾಲನೆಂಬವ ಪಾತಕನು || 
             ನಿನ್ನ ನಚ್ಚಿದ ದೇಹ ಹೆಂಡಿರು ಮಕ್ಕಳು | ನಿನ್ನ ಧನವ ತಿನ್ನು ವರು | 
             ನಿನ್ನ ನಂತಕ ಬಂದೆಯದೊಯ್ದ ವೇಳೆಯೊಳ್ | ನುಣ್ಣನೆ ಕೆಲಕೆ ಸಾರುವರು | 
             ಜೀವನು ಪೋಗೆ ತಮ್ಮಣದಲ್ಲಿ ಹೆಣನೆಂದು | ಓವದೆ ಸುಡುವರು ಬೇಗ |
             ತೀವಿದ ಗುಣವಿಲ್ಲದಿರೆ ನಡೆವೆಣನೆಂಬ | ರೀವಿಧ ನೋಡಿರೆ ದೇಹ ||
                ಇವನ ಚರಿತೆಯನ್ನು ನೋಡಿ.