ಈ ಪುಟವನ್ನು ಪರಿಶೀಲಿಸಲಾಗಿಲ್ಲ.
೯೦ ಕರ್ಣಾಟಕ ಕವಿಚರಿತೆ [15 ನೆಯ
ಕವಿ ಈ ಗ್ರಂಥವನ್ನು ನೀಲಕಂಠನ ಅಂಕಿತದಲ್ಲಿ ಬರೆದಿದ್ದಾನೆ. ತನ್ನ ಕಾವ್ಯದ ಉತ್ಕೃಷ್ಟತೆಯನ್ನು ಈ ಪದ್ಯಗಳಲ್ಲಿ ಹೇಳಿದ್ದಾನೆ-- ಕಣ್ಗೆ ಚೆಲ್ವಾಗೆ ನಸುಬಿರಿದ ಜಾಜಿಯ ನನೆಯ | ತಣ್ಗಂಪನುಂಡು ತಣ್ಣನೆ ತಣಿದು ಕಡುಸೊಕ್ಕಿ | ನುಣ್ಗೊರಲಿನಿಂಚರಂ ಪೊಱಪೊಣ್ಮೆ ಸುೞೆವ ಮಱೆದುಂಬಿಯ ವಿಲಾಸದಂತೆ || ಬಿಣ್ಗೊನರ್‌ಪೇಱೆದಿಮ್ಮೂಮರದ ಪೊದಱ ಮೇ | ಗಣ್ಗೆ ನೆಗೆದೆಳದಳಿರ ಕರ್ದು ಕಿ ಮೆಲ್ಲುಲಿದೋರ್ಸ | ಸೆಣ್ಗೋಗಿಲೆಯ ಲೀಲೆಯಂತೆ ರಸಿಕರ್ಗೆ ನಲವೀವದೀ ದಿವ್ಯಕಾವ್ಯಂ || ಇಂಬುವಡೆದಿರಲಚ್ಚ ಗನ್ನಡದ ನುಡಿ ತದ್ಭ | ವಂ ಬಹಳದೇಶೀಯರಸಭಾವವರ್ಧಚಿ | ತ್ರಂ ಬಗೆಯ ಬಂದಿವಿಡಿವತಿಲಲಿತಪದಬಂಧ ಚದುರು ಬಿನ್ನಣೆ ಬೆಡಂಗು || ತುಂಬಿ ತುಳುಕಾಡುತಿರೆ ನಲವು ಮಿಗೆ ಕಾವ್ಯಮುಖ | ದಿಂ ಬಣ್ಣಿಸುವೆನು ಶಿವಶರಣರಾಹಾ ಎನಲು | ನಂಬಿಯನು ಮಹಿಮಾವಲಂಬಿಯನು ಸಾಕ್ಷಾತ್ತ್ರಿಯಂಬಕಪ್ರತಿಬಿಂಬಿಯ || ಗ್ರಂಥಾವತಾರದಲ್ಲಿ ನೀಲಕಂಠಲಿಂಗಸ್ತುತಿ ಇದೆ. ಬಳಿಕ ಕವಿ ವಿಶ್ವನಾಥಾಚಾರ್ಯನ ವಂಶಪರಂಪರೆಯನ್ನು ಹೇಳಿ ಅವನನ್ನು ವಿಶೇಷವಾಗಿ ಸ್ತುತಿಸಿದ್ದಾನೆ. ಆಮೇಲೆ ಭೃಂಗಿ, ವೀರಭದ್ರ, ತಿರುಜ್ಞಾನಸಂಬಂಧಿಯೆನಿಸಿ ಜಿನಮತವನತಿಗಳದು ಪರಮಶಿವಧರ್ಮಪಥವನು ತೋಱು ಜಗವ ಪಾವ ನವ ಮಾಡಿದ ಷಣ್ಮುಖ, ಇವರನ್ನು ಹೊಗಳಿ, ಮಂಡಗೆಮಾದರಸನಿಂದ ಮಡಿವಳಮಾಚಿಯವರೆಗೆ ಪುರಾತನರನ್ನೂ ರೇವಣಾಸಿದ್ದ, ಮರುಳಸಿದ್ದ, ಏಕೋರಾಮ, ಪಂಡಿತಾರಾಧ್ಯ ಎಂಬ ಮಠಚತುಷ್ಟಯದ ಚರಲಿಂ ಗಮೂರ್ತಿಗಳನ್ನೂ ಗುಮ್ಮಳಾಪುರದ ಮಹಾಮಹತ್ತನ್ನೂ ಸ್ಮರಿಸಿದ್ದಾನೆ. ಇವನ ಬಂಧವು ಲಲಿತವಾಗಿಯೂ ಧಾರಾಳವಾಗಿಯೂ ಇದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ...
1 ಮಂದಗಮಾದರಸ, ಬಸವದಂಡಾಧೀಶ, ಕಲಿಕಾಮದೇವ, ಶಂಕರದಾಸಿಮಯ್ಯ, ಓಹಿಲದೇವ, ಕಣ್ಣಪ್ಪ, ಮಹದೇವಿ, ಮುಕ್ತಾಯಿ, ಸಾಮವೇದಿ, ಭೋಗಣ್ಣ, ಅಜಗಣ್ಣ, ಚೇರಮಾಂಕ, ದೀಪದಕಲಿಯಾರ, ಚನ್ನಬಸವ, ಸಿದ್ಡರಾಮ, ಮಡಿವಾಳ ಮಾಚಿ.