ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನ ಬೊಮ್ಮರಸ. ೯೧
ಕಳಮಕ್ಷೇತ್ರ ಮಿಸುಪ ಬೆಳುದಿಂಗಳಿಂದೊಸರುತಿಹ ಶಶಿಕಾಂತ | ವಿಸರದ್ದ್ರವಾಂಬುವೇ ಕಾಲುವೆಗಳಾಗಿ ದೆಸೆ | ದೆಸೆಗೆ ಸರಿಯಲು ತೀಡುತಿರ್ಪ ಮಂದಾನಿಲನ ಸಂಚಾರದಿಂದಲುಗುವ || ಕುಸುಮದ ಪರಾಗವೇ ಗೊಬ್ಬರಮದಾಗೆ ತವೆ | ಪಸುರೇಱೆ ಸಾಲ್ವಿಡಿದುವೆನಲು ಕಳಮಕ್ಷೇತ್ರ | ನೆಸೆವ್ರವಾದೇಶದೊಳು ಭೂಮಾತೆ ಧರಿಯಿಸಿದ ವಸುರ್ವರಲ ತೊಡಿಗೆಯಂತೆ || ಆಲಿಕಲ್ಲು ಕುಡಿಮಿಂಚೆನಿಪ್ಪ ನಚ್ಚಣಿ ಗಗನರಂಗದೊಳ್ | ಬೆಡಗುವಡೆವೊಲು ರಿಂಗಣಂಗುಣಿಯಲೆಂದು ಮು | ನ್ನೊಡರಿಚಿದ ಪೂವಲಿಯೊ ನೀಲಾಭ್ರವೆನಿಸುವ ತಮಾಲವೃಕ್ಷದ ಸಬ್ತೆಯ || ಜಡಿಯೆ ಪವಮಾನನಿಳೆಗೊಕ್ಕ ಕುಸುಮಂಗಳೋ | ಕಡಲೊಳುದಕವ ಮೊಗವ ವೇಳೆಯೊಳು ಸಿಲುಕಿದೊ | ಳ್ಪಿಡಿದ ಪೆರ್ಮುತ್ತುಗಱಿದುದೊ ನೀರದೌಘವೆನೆ ಕಡುಸೂಸಿತಾಲಿವರಲು || ನಂಬಿಯಣ್ಣನ ಹೆಂಡತಿ ಪರವೆಯ ಸೌಂದಯ್ಯ ಎಳವಿದರ ಕೋಮಲತ್ವವನಾಂತು ನಳನಳಿಪ | ನಳಿತೋಳು ರಂಜಿಸಿತು ನುಣ್ಣೊ ಲೆಗಳಿಡಿಕಿಱೆದು | ಒಳೆದು ಸೆಳೆನಡುವಿಂಗೆ ಬಿಣ್ಣಾಯ್ತು ತನು ಕನಕಚಂಪಕದ ಪುಷ್ಪದಂತೆ || ಪೊಳೆದು ನೞುಗಂಪ ಬೀಱ'ದುದಿಂದ್ರನೀಲಮಣಿ | ಯೊಳಗಣ ತಿರುಳ್ಗೆ ತೊಣೆಯಾದುವಾ ಕುರುಳ್ಳಳು | ಜ್ವಳಿಸಿದುವು ಕದಪು ಕಣ್ನೊನೆ ಧವಳಕಾಂತಿಯಂ ಪಡೆದುದಂದಾ ಪರವೆಗೆ || ತಳಿರಮೇಲಂಗಜನ ಬತ್ತಳಿಕೆಯದೞಮೇ | ಲೆಳವಾೞಿಗಂಬವದಱಗ್ರದೊಳು ಗಿರಿಯ ತ | ಸ್ಪಲು ತಪ್ಪಲಗ್ರದೊಳು ಲತೆ ಲತೆಯಮೇಲೆ ಪೊಂಗೊಡಮದಱ ಕೆಲಬಲದೊಳು || ಲಲಿತಚಂಪಕಮಾಲೆಯದಱಗ್ರದೊಳು ಶಂಖ | ಬೞಿಕದಱಮೇಲೆ ರನ್ನದ ಮುಕುರಮದಱಮೇ | ಲಳಿಕುಳ ಮಯೂರವಿರ್ದಪುವೆನಲು ಪರವೆಯಾಕಾರ ಕಣ್ಗೆಸೆದಿರ್ದುದು ||