ಈ ಪುಟವನ್ನು ಪರಿಶೀಲಿಸಲಾಗಿಲ್ಲ.

101 ಶತಮಾನ] ಗುಬ್ಬಿಯ ಮಲ್ಲಣ್ಣ. ಗುಬ್ಬಿಯ ಮಲ್ಲಣ್ಣ, ಸು. 1475 ಇವನು ಗಣಭಾವ್ಯರತ್ನಮಾಲೆ, ನಾತುಲತಂತ್ರತೀಕೆ ಇವುಗಳನ್ನು ಬರೆದಿದ್ದಾನೆ. ಇತನು ವೀರಶೈವಕವಿ; ಭಾವಚಿ೦ತಾರತ್ನವನ್ನೂ (1513) ವೀರಶೈವಾಮೃತಪುರಾಣವನ (1530) ಬರೆದ ಬಸವವುರಾಣದ ಮಲ್ಲಿಕಾ ರನ ಪಿತಾಮಹನು, ಇವನ ಸ್ಥಳ ಗುಬ್ಬಿ ವೀರಶೈವಾಮೃತ ಪುರಾಣದಲ್ಲಿ ಇವನ ಪರಂಪರೆ ಹೀಗೆ ಹೇಳಿದೆ.-ಅಮರಗುಂಡದ ಮಲ್ಲಿಕಾರ್ಜುನ; ಇವನ ಶಿಷ್ಯ ಶೂಲವೇರಿದ ಮಹತ್ವವುಳ್ಳ ಗುರುಭಕ್ತ, ಇವನ ಮಗ ದೇ ಶಿಕಪಟ್ಟವರ್ಧನನಾದ ಸೌಂದಯ್ಯಮಲ್ಲಿಕಾರ್ಜುನಪಂಡಿತ; ಇವನ ಮಗ ನಾಗನಾಥಾರ್; ಇವನ ಮಗ ಅಮರಗುಂಡಾರ್; ಇವನ ವಂಶೋದ್ಧೂತ ಕವಿ ಗುಬ್ಬಿ ಯಮಲ್ಲಣ್ಣ, ಕವಿ ಹರಶರಣರಣುಗ ಹರಶರಣರ ಕಾರುಣ ದಶಿಶು ಎಂದು ತನ್ನನ್ನು ಹೇಳಿಕೊಂಡಿದ್ದಾನೆ. ಇವನ ಪ್ರಪೌತ್ರನಾದ ಶಾಂತೇಶನ (1561) ಸಿದ್ದೇಶ್ವರಪುರಾಣದಿಂದ ಈತನು ತೋಂಟದ ಸಿದ್ದ ಲಿಂಗಯತಿಯ (ಸು, 1470) ಶಿಷ್ಯನಾಗಿದ್ದಂತೆ ತಿಳಿಯುತ್ತದೆ. ಇವನ ಕಾಲವು ಸುಮಾರು 1475 ಆಗಬಹುದು. ಈತನ ಗ್ರಂಥಗಳಲ್ಲಿ | 1. ಗಣಭಾಷ್ಯರತ್ನ ಮಾಲೆ ಇದು ವಚನಗ್ರಂಥ. ಇದಕ್ಕೆ ಗಣಭಾಷಿತರತ್ನಮಾಲೆ ಎಂಬ ಹೆಸರೂ ಉಂಟು. ಇದರಲ್ಲಿ ಕವಿ ಅಂಗಸ್ಥಲ 44, ಲಂಗಸ್ಥಲ 57 ಈ 101 ಸ್ಪಲಗಳಲ್ಲಿ ವೀರ ಶೈವರು ಆಚರಿಸಬೇಕಾದ ಆಚರಣೆಗಳನ್ನು ಅನುಭವಾದಿಸದ್ರ ಮಹಿಮಾಂತವಾದ 101 ಸ್ಥಲಗಳಂದು ಸಂಗ್ರಹಿಸಿ ವೇದಾಗಮಪುರಾಣೇತಿಹಾಸಾದಿಗ್ರಂಧಗಳಿಂದ ಪ್ರಮಾ ಣಗಳನ್ನೂ ಪುರಾತನರ ಕನ್ನಡವಚನಗಳನ್ನೂ ಉದಾಹರಿಸಿ ವಿವರಿಸಿದ್ದಾನೆ. ಅಂಗ ಸ್ಥಲಕ್ಕೆ ಸೇರಿದ ಗ್ರಂಧ 237, ವಚನ 227, ಲಿಂಗಸ್ಥಲಕ್ಕೆ ಸೇರಿದ ಗ್ರಂಧ 246, ಪಚನ 264. ಒಟ್ಟು ಗ್ರಂಧವಚನಗಳು 974 ಈ ಗ್ರಂಧದ ವಿಷಯವಾಗಿ ಕವಿ ಹೀಗೆ ಬರೆದಿದ್ದಾನೆ ಇದು ಪರಮವೀರಶೈವಸಿದ್ಧಾಂತತತ್ವಜ್ಞಾನ, ಇದು ವೀರಶೈವಪ್ರತಿಷ್ಠಾ ಸ್ಥಾ ಪನಾಚಾರ್, ಇದು ದಿವ್ಯ ವೇದಾಂತಶಿರೋಮಣಿ, ಇದು ಸಮಸ್ತ ಶಾಸ್ತ್ರ ಮುಖ್ಯ ಮುಖ ದರ್ಪಣ, ಇದು ಮಹಾಜ್ಞಾನವರ್ಧನಪರಮಾನುಭಾವಸಂಬೋಧೆ, ಇದು ಸರ್ವಾ