ಕರ್ನಾಟಕ ಕವಿಚರಿತೆ
102 ಕರ್ಣಾಟಕ ಕವಿಚರಿತ. [15 ನೆಯ ಚಾರಸಂಪನ್ನರ ಸಮಾರೂಢಸಂಗ್ರಹ, ಇದು ಪರಮರಾಜಯೋಗಸಾಧ್ಯ ಸನ್ನಿ ಧಾನ, ಇದು ರಸಾಮೃತಪ್ರಸನ್ನ ಪ್ರಸಾದ, ಇದು ಅಜ್ಞಾನತಿಮಿರಾಂಜನವಪ್ಪ ಮಹಾಪ್ರಸಂಗ ಬಸವರಾಜದೇವರು, ಚೆನ್ನ ಬಸವದೇವರು, ಪ್ರಭುದೇವರು ಮುಖ್ಯವಾದ ಅಸಂಖ್ಯಾತ ಮಹಾಗಣಂಗಳು ನೂಳೊ೦ದಳಲ್ಲಿ ನಡೆದು ನುಡಿದ ವಚನಂಗಳು ಸ್ಥಲಭಿನ್ನವಾಗಿ ರ್ದೊಡೆ ಚಂದವಲ್ಲೆಂದು ಕ೦ರಮಾಲೆಯ ಕೋದು ಹಣಿಗೆಯಳ ದು ಸೇರಿಸಿದೆನು ನಿಮ್ಮ ಕಾರುಣ್ಯದ ಶಿಶು ಗುಬ್ಬಿಯಮಲ್ಲಣ್ಣಗಳು, ಶಿವಗಣಂಗಳ ಶಿವಾನುಭಾವಸ್ತೋತ್ರಮಂ ಮಾಡಿ ಶಿವಗಣಂಗಳ ಮುಖಕ್ಕೆ ನಿರ್ಮಲದರ್ಪಣಮೆನೆ ಸಮರ್ಪಿಸಿದೆನು.
ಇದು ಶ್ರೀಮದನಿರ್ವಾಚ್ಯಸ್ವರೂಪನಪ್ಪ ಪರಶಿವನ ಸಾಕಾರಸ್ವರೂಪರಾದ ಅಸಂಖ್ಯಾತಮಹಾಗಣಂಗಳ್ ಪರಮಕಲ್ಯಾಣಪುರದೊಳ್ ವಿರಚಿಸಿ ಹರಭಕ್ತಿ ಮಾರ್ಗ ಮಂ ಸ್ಥಲವಿಟ್ಟು ನುಡಿದ ವಚನಂಗಳಂ ವಂಗುರುನಾಧನಾಜ್ಞೆಯಿಂ ಧರೆಯ ನೂತನ ಣಂಗಳಳಂಯಲೊರೆದನು ಭಾವಾನಂದಸುಖಾಂಭೋರಾಶಿಪರಮಷಟ್ಸ್ಠಲಮಾರ್ಗದ ಕರುವನು ಪರಮಲಿಂಗಾಂಗಸಂಒಂಧದ ಸಿರಿ ಹರನೊಳೆರವಳಂದಿರ್ಪುದರ್ಕೆ ಪರಮಚಾ ರಿತ್ರವೆನಿಸುವ ಭಾಷ್ಯರತ್ನ ಮಾಲೆಯಂವರವೇದಶಾಸ್ತ್ರಪುರಾಣಾಗಮೇತಿಹಾಸಾದಿನಾ ನಾಧರ್ಮಶಾಸ್ತ್ರೋಕ್ತಗ್ರಂಧಂಳಿಂ ಆದ್ಯರ ವಚನಂಗಳಿಂ ನೂಳೊಂದುಸ್ಥಲ ಮಾಗೆ ಸೇರಿಸಿದಂ ಹರಶರಣರಣುಗಂ ಗುಬ್ಬಿಯಮಲ್ಲಣ್ಣಗಳ್, 1 ಪ್ರತಿಯೊಂದಕ್ಕೂ ಸ್ಥಲ ಎಂಬ ಶಬ್ದ ವನ್ನು ಸೇರಿಸಿ ಓದಬೇಕು ಅಂಗಸ್ಥಲ 44
(1) ಅನುಭವ (2) ಶರಣಸಂಗವಿಯೋಗಾವಸ್ಥಾ (3) ಶರೀರನಿರಸನ (4) ಮನೋನಿರಸನ (5) ಇಂದ್ರಿಯನಿರಸನ (6) ಸಂಸಾರನಿರಸನೆ(7) ಸಂಸಾರವ್ಯಾಪ್ತಿನಿರಸನ (8) ನಿದ್ರಾನಿರಸನ (9) ಆಶಾನಿರಸನ (10) ದ್ವಂದ್ವಕರ್ಮನಿರಸನ (11) ತ್ರಿಬಂಧನಿರಸನ (12) ಮಾಯಾವಿಲಾಸವಿಧಿ (13) ಜರನಭಯ (14) ಜ್ಞಾನಪರಾಮರಿಕೆಯ (15) ಶಿವಕಾ ರುಣ್ಯಾಹ್ವಾನ (16) ದೃಷ್ಟನಷ್ಟ (17 ವೈರಾಗ್ಯ (18) ಆನರ್ಥಜೀವಿತನಿರಸನ (19) ಆನ್ಯದೈವನಿರಸನ (20) ಅನ್ಯದೇವತಾಭಜನನಿರಸನ (21) ಶಿವಲಿಂಗಾರ್ಚನಪ್ರತಿಷ್ಟ (22) ವಾಗದ್ವೆತನಿರಸನ (23) ಶೂನ್ಯ (24) ಸ್ವಯಂಭುಲಿಂಗಉಮಾಪತಿ (25) ವಿಶ್ವೋತ್ಪತ್ತಿ (26) ದೇಹದೇಹಿಗಳುತ್ಪತ್ತಿ (27) ಅಷ್ಟಮೂರ್ತಿನಿರಸನ (28) ಸರ್ವಗತನಿರಸನ (20) ವಿದ್ಯಾವಾದನಿರಸನ (30) ಕರ್ಮವಾದನಿರಸ (31) ಕರ್ಮಯೋಗನಿರಸನ (32) ಊರ್ದ್ವೆವುಂಡ್ರನಿರಸನ (33) ಅದೀಕ್ಷಾಲಿಂಗಾರ್ಚನನಿರಸನ (34) ಶೈವದೀಕ್ಷಾನಿರ ಸನ (35) ಪುನರ್ದೀಕ್ಷಾಪ್ರತಿಷ್ಟಾ (36) ಭವಿಸಂಗನಿರಸನ (37) ಭವಿವಾಕನಿರಸನ (38) ಪರದಾರನಿರಸನ (39) ಕಳವುನಿರಸನ (40) ಹುಸಿನಿರಸನ (41) ಹಿಂಸಾನಿರಸನ (42) ತಾಮಸಭಕ್ತ ಸಂಗನಿರಸನ (43) ತಾಮಸದೀಕ್ಷಾನಿರಸನ (44) ಸಹಜದೀಕ್ಷಾ