ಈ ಪುಟವನ್ನು ಪರಿಶೀಲಿಸಲಾಗಿದೆ

ಕರ್ನಾಟಕ ಕವಿಚರಿತೆ

104


[೧೫ ನೆಯ ಯರ ಸಂಗವ ಮಾಡಲಾಗದೆಂಬುದಂ ಪ್ರತಿಷ್ಠೆ ಯಂ ಮಾಡಿ ನುಡಿದರ್ ಮಹಾಪುರಾ ತನರ್‌, ಇಂತಾ ಪರದಾರಮಂ ಬಿಟ್ಟು ಲಿಂಗಸಾಹಿತ್ಯವಾದೇನೆಂಬಾತಂಗೆ ಕಳವು ಶೌಚಮಂ ಕೆಡಿಸುವುದೆಂಬುದನಳಿದು ಇನ್ನು ಕಳವ ಶಿವಭಕ್ತರು ಬಿಡಬೇಕೆಂಬುದಂ ಪ್ರತಿಷ್ಠೆ ಯಂ ಮಾಡಿ ನುಡಿದ ವಚನಂಗಳಿಂ ಮುಂದೆ ಕಳವುನಿರಸನಸ್ಥಲವಾದುದು. ಶಿವಧರ್ಮೆ-ತೃಣಂ ವಾ ಯದಿ ವಾಕಾಶಂ ಮೃದಂ ವಾ ಜಲಮೇವ ಚ | ಪರಸ್ಯಾಪಹರೇಜ್ಜಂತುರ್ನರಕಂ ಚ ಪ್ರಪದ್ಯತೇ ||

ಟೀಕೆ-ಹುಲ್ಲುಕಡ್ಡಿಯಷ್ಟಾದೊಡಂ ಆಕಾಶದಷ್ಟಾದೊಡಂ ಒಪ್ಪಿಡಿಮಣ್ಣಾ ದೊಡಂ ಒಕ್ಕುಡಿತೆಯುದಕವಾದೊಡಂ ಲೋಗರ ಸೊಮ್ಮ ಕಾಣಲೀಯದೆ ಬಲುಹಿಂದೆ ಕೊಂಡವಂಗೆ ಎಂದೂ ಕೇಡಿಲ್ಲದ ನರಕವಹುದು. (ಹೀಗೆಯೇ ಇನ್ನೂ 3 ಶ್ಲೋಕ ಗಳನ್ನು ಟೀಕೆಯೊಡನೆ ಹೇಳಿದಮೇಲೆ), ಇಂತೀ ಪುರಾಣವಾಕ್ಯಂಗಳನು ಶ್ರೀಗುರು ಪು ರಾತನರಿಗೆ ಉಪದೇಶವಿತ್ತ ರಾವು ಇನ್ನು ಆ ಪುರಾತನರು ಗುರುವಾಕ್ಯ ತಪ್ಪದೆ ನಡೆದು ನುಡಿದ ವಚನಂಗಳು.


(1) ಕುಳಿತು ಲಿಂಗವ ಪೂಜಿಸಿ ಅಲ್ಲದಾಟವನಾಡುವರಯ್ಯಾ, ಬೆಳ್ಳಿತ್ತಿನ ಮಳೆಯಲ್ಲಿ ಹುಲ್ಲೆ ಗಂಬ ತೊಡಚುವಂತೆ ಲೋಗರರ್ಧವ ಕಳುವ ಕಳ್ಳರಕೆಯ ಪೂಜೆ ಯನೊಲ್ಲ ನೋದಾ ನಮ್ಮ ಕೂಡಲಸಂಗಮದೇವ. (2) ತೋಳೆಯ ಮೀವಣ್ಣಗಲಿರಾ ತೊಳೆಯಿರೆ ಪರಧನವ, ಪರದ್ರವ್ಯವ ಬಿಡದೆ ಹೋಗಿ ತೊಳೆಯಲ್ಲಿ ಮಿಂದರೆ ಆತೊಳೆಯೆಲ್ಲಾ ಬಳುದೊಳೆಕಾಣಿರಯ್ಯ, ಕಳವ ತೋಟದು ತೊಳೆಯ ಮಿಂದರೆ ಒಲಿದು ಕೂಡಿಕೊಂಬ ನಮ್ಮ ಕೂಡಲಸಂಗಮ ದೇವ. (3) ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ ನಾನು ಕೈಮುಟ್ಟಿಯೆತ್ತಿದೆನಾ ದರೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಅದೇನು ಕಾರಣವೆಂದರೆ--ನೀವಿಕ್ಕಿದ ಭಿಕ್ಷ ದಲ್ಲಿಪ್ಪೆನಾಗಿ ಇಂತಲ್ಲದೆ ನಾನು ಲೀಖಿಮನವಮಾಡಿ ಪರದ್ರವ್ಯಕ್ಕೆ ಆಶೆಮಾಡಿದೆನಾದರೆ ನೀನಾಗಲೇ ಎನ್ನ ನರಕದಲ್ಲಿ ಅದ್ದಿ ನೀನೆದ್ದು ಹೋಗಾ ಶಂಭುಜಕ್ಕೇಶ್ವರ. 2. ವಾತುಲತಂತ್ರಟೀಕೆ ಇದು ನಾತುಲತಂತ್ರ ಎಂಬ ಶೈವಾಗಮಕ್ಕೆ ಕನ್ನಡವ್ಯಾಖ್ಯಾನವು, ಆರಂಭದಲ್ಲಿ ಈ ಶ್ಲೋಕವಿದೆ ಶ್ರೀಮಚ್ಚುದ್ಧಾಖ್ಯತಂತ್ರೇರ್ಸ್ಮಿ ಮಲ್ಲಿಕಾರ್ಜುನಧೀಮತಾ |

ಕರ್ಣಾಟಭಾಷಯಾ ಟೀಕಾ ಕ್ರಿಯತೇದ್ಯ ಮಯಾ ಸ್ಪುಟಂ ||