ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ ಕುಮಾರ ಪ್ರಿಯರಿಗಪ್ರಿಯರಿಗೆ ವಿವೇಕಾ | ಕ್ರಯರಿಗತಿಮರ್ಖರಿಗೆ ವಿಜ್ಞಾ। ನಿಯರಿಗಜಾಣರಿಗೆ ಜಡರಿಗಸೂಯಭಾವರಿಗೆ || ನಯವಿದರಿಗಜ್ಜರಿಗೆ ಹರುಷೋದಯದ ಸೆಂಪು ಕುಮಾರವಾಲ್ಮೀ || ಕಿಯ ಪ್ರಬಂಧಪೌಧತರಕವಿತಾಚಮತ್ಕಾರ | - ಗ್ರಂಥಾವತಾರದಲ್ಲಿ ತೊರವೆಯ ನರಸಿಂಹದೇವರ ಸ್ತುತಿ ಇದೆ. ಬಳಿಕ ಕವಿ ಶಿವ, ಲಕ್ಷ್ಮಿ, ಪಾರ್ವತಿ, ಬ್ರಹ್ಮ, ಸರಸ್ವತಿ, ಗಣೇಶ, ಆಂಜ ನೇಯ, ಭಾರದ್ವಾಜಗುರು, ವಾಲ್ಮೀಕಿ ಇವರುಗಳನ್ನು ಪರಿವಿಡಿಯಿಂದ ಹೊ ಗಳಿದ್ದಾನೆ. ಬ್ರಾಹ್ಮಣಕವಿಗಳು ಬರೆದ ರಾಮಾಯಣಗಳಲ್ಲಿ ಇದೇ ಮೊದ ಲನೆಯದು, ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ ಸೀತೆಯ ಸೌಂದಯ್ಯ ಚರಣಕಾಂತಿಗಳಿಂದ ನೂಪುರ | ಗುರುನಿತಂಬದಿ ಕಾಂಚಿ ಕೋಮಲ | ಕರವಿ ಕಂಕಣ ಬೆರಳಿನಿಂದುಂಗುರವು ಕೊರಳಿ೦ದ | ಸರದ ಮುತ್ತುಗಳೊಲೆ ಕದಪಿo | ದಿರದೆ ಮೆದುವು ಸ್ಮರಕರಾಗ್ರ | ಸ್ಟುರಿತಚಾಪಕಲಾಸಶರದಭಿಮಾನದೇವತೆಯ || ಹೊಳೆಹೊಳೆವ ತನುಕಾಂತಿಯಲಿ ಗಜ | ಗಲಿಸಿದುವು ಹೊಂದೆಡವುಗಳು ಧಳ | ಧಳಿಸಿದುವು ಮುತ್ತುಗಳು ದಂತಪ್ರಭೆಯ ಲಹರಿಯಲಿ || ಸುಲಲಿತಾಧರರಾಗದಿಂದು | ಜ್ವಲಿಸಿದುವು ಮಾಣಿಕ್ಯ ಚಯವಾ | ರಳವು ಹೊಗವಡಬುಜಗಂಧಿಯ ವಿಪುಳವಿಭ್ರಮವ || ಸಮುದ್ರಕ್ಕೆ ಪ್ರಯೋಗಿಸಿದ ರಾಮಬಾಣ * ಮದುರಿ ಬಂದಂಬುನಿಧಿಯೊಡ | ಲೋಳೆಗೆ ತೆರೆತೆರೆಡಳಿಯ ಬಗಿಬಗಿ | ದಿಟದಡರಿದುದು ಛಟಛಟಸ್ಕೃತಿಗಳ ಛಡಾಳದಲಿ || ತುಳುಕುತೂಳುವ ತುಂತುರಿನ ಕಿಡಿ | ಹಟಕಿದುವು ಹೊದರೆದ್ದ ವಡಬಾ | ನಳನನೊದೆದುದು ರಾಮಭದ್ರನ ಭೀಮಬಾಣಾಗ್ನಿ | ರಾವಣನ ಸೈನ್ಯ ಈಜಿಗಳ ತೆರೆವಾಲೆಗಳ ರಧ | ರಾಜಿಗಳ ನೆಗಡಗಳ ನಾಗಸ | ಮಾಜಗಳ ನೀರೇಭಗಳ ಪರಚರರ ಜಲಚರರ || ಕಾಜಿಸುವ ನಾನಾಯುಧಂಗಳ | ತೇಜದೌರ್ವಾನಳಸ ಬಗೆಯಲಿ | ರಾಜರಾಜನುಜನ ಬಲಜಲಕಾಸಿ ರಂಜಿಸಿತು |