ಈ ಪುಟವನ್ನು ಪರಿಶೀಲಿಸಲಾಗಿಲ್ಲ.

149 ಕರ್ಣಾಟಕ ಕವಿಚರಿತ. [16 ನೆಯ ನರಹರಿ ಎಂದು ಹೇಳಿಕೊಂಡಿದ್ದಾನೆ, ಕುಮಾರವಾಲ್ಮೀಕಿ ಎಂಬುದು ಬಿರು ದೇಹೊರತು ಹೆಸರಲ್ಲ, ಇವನು ಬ್ರಾಹ್ಮಣಕವಿ, ಇವನ ಸ್ಥಳ ಸೋ ಲಾಪುರದ ಜಿಲ್ಲೆಯಲ್ಲಿರುವ ತೆರವೆಯೆಂಬ ಗ್ರಾವ', ಅಲ್ಲಿಯ ದೇವರಾದ ನರಸಿಂಹನ ಅಂಕಿತದಲ್ಲಿ ತನ್ನ ಗ್ರಂಥಗಳನ್ನು ಬರೆದಿದ್ದಾನೆ. ಈ ರಾಮಾ ಯಣಕ್ಕೆ ಕವಿಯ ಗ್ರಾಮದಿಂದ ತೊರವೆ ರಾಮಾಯಣ ಎಂಬ ಹೆಸರು ರೂಢಿಯಾಗಿದೆ, ಇವನಿಗೆ ಕವಿರಾಜಹಂಸ ಎಂಬ ಬಿರುದಿದ್ದಂತೆ ತೋರು ಇದೆ, ವರ್ಣಕಕವಿಗಳಲ್ಲಿ ಕುಮಾರವ್ಯಾಸನೊಬ್ಬ ತಾನೊಬ್ಬ ಈ ಇಬ್ಬ ಈ ಗಣ್ಯರು ಎಂಬ ಭಾವವನ್ನು “ಸರಸವರ್ಣಕಕವಿಗಳೊಳು ಭಾ | ಸುರ ಕುಮಾರವ್ಯಾಸನೊಬ್ಬನು | ಪರಿಕಿಸುವೊಡಾನೊಬ್ಬ ಮಿಕ್ಕಿನ | ಬರಡು ಕವಿ ಗಳ ಲೆಕ್ಕಿಸುವನೆ ಕುಮಾರವಾಲ್ಮೀಕಿ ಎಂಬ ಪದ್ಯಭಾಗದಲ್ಲಿ ತಿಳಿಸಿದ್ದಾನೆ. ಹೀಗೆ ಕುಮಾರವ್ಯಾಸನನ್ನು (ಸು, 1430) ಹೊಗಳುವುದರಿಂದ ಅವನಿ ಗಿಂತ ಈಚೆಯವನು ಎಂಬುದಂತೂ ಸ್ಪಷ್ಟವಾಗಿದೆ. ಆದರೆ ಎಷ್ಟು ಕಾಲ ಈಚೆಯವನು ಎಂಬುದನ್ನು ನಿರ್ಧರಿಸುವುದು ಕಷ್ಟವಾಗಿದೆ. ಸುಮಾರು 1500 ರಲ್ಲಿ ಇದ್ದಿರಬಹುದೆಂದು ಊಹಿಸುತ್ತೇವೆ. ಈ ಕವಿಯನ್ನು ಬೊ ಬ್ಯೂರ ರಂಗನೇ ಸು. 1760) ಮೊದಲಾದ ಕವಿಗಳು ತಮ್ಮ ಗ್ರಂಥಗಳಲ್ಲಿ ಸ್ಮರಿಸಿದ್ದಾರೆ. ತನ್ನ ಕವಿತಾಶಕ್ತಿಯನ್ನು ಈ ಪದ್ಯದಲ್ಲಿ ಹೇಳಿಕೊಂಡಿದ್ದಾನೆ ಪರರ ಬಗೆ ಪರರು ಪರರು | ಇರುಷ ಪರರುನ್ನ ತಿಯ ಕೃತಿಯಪ || ಹರಣೆ ಪರರುಪಮಾನ ಪರರೊಡ್ಡವದ ಪರುರವದ || ಹರಹು ಹೊಗದಗ್ಗಳಿಕೆ ಪದಸಂ | ಚರಣೆಯಲಿ ಲಿಪಿ ತಿರುಗಿ ನೋಡದ | ಬಿರುದು ಬೇವ ಕುಮಾರವಾಲ್ಮೀಕಿಯ ವಚೋಲಹರಿ || ಇವನ ಗ್ರಂಥಗಳಲ್ಲಿ 1. ತೊರವೆಯರಾಮಾಯಣ ಇದು ಭಾಮಿನೀಷಟ್ಟದಿಯಲ್ಲಿ ಬರೆದಿದೆ; ಸಂಧಿ 112, ಪದ್ಯ 5079. ಇದರ ಉತ್ಮತೆಯನ್ನು ಕವಿ ಈ ಪದ್ಯಗಳಲ್ಲಿ ಹೇಳಿದ್ದಾನೆ ಶುಕಕವಿಯ ಸುಮ್ಮಾನ ಸೂರಿ | ಪ್ರಕರದಮಲಜ್ಞಾನ ಮುನಿಕರ | ಮುಕುರ ಗುಣಿಗಳ ಗೂಢನಿಧಿ ರಸಿಕರ ಸುಧಾಜಲಧಿ || ಆಕುಟಿಲರ ಮನಮೆಚ್ಚು ಸಿರಿಹರಿ | ಭಕುತರುಮ್ಮ ಹದಚ್ಚು ಶಿವಸೇ | ವಕರ ಮೆಚ್ಚ ಕುಮಾರವಾಲ್ಮೀಕಿಯ ಪ್ರಬಂಧಕೃತಿ |