ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಗುಬ್ಬಿಯ ಮಲ್ಲಣಾರ್ಯ 108

                                                                    ಕಾವೇರಿ
ಸೂರಿಜನಹರ್ಷವಿಸ್ತಾರಿ ಸುಖಸಂಕಧಾ | 

ಕಾರಿ ಬರಿನೆರ್ದೆಗಂ ಕರಾರಿ ಬೆಳೆಸಿರಿಯ ಭರ | ಭಾರಿ ಕುಶ್ರಮಸಂಗವೈರಿ ಜಲಚರಸದಾಧಾರಿ ಕಾಲಾರಿಶಿವನ || ನಾರಿಗಂಗಾಂಬಾವತಾರಿ ದುರ್ದೋಷಸಂ | ಹಾರಿಯೆಂದೊದರುತಿಹ ಭೇರಿಯಾರ್ಭಟವೀಚಿ | ವಾರಿ ಬಹುಮಾರ್ಗಪ್ರಚಾರಿಯಾನಾಡ ಕಾವೇರಿ ಭೋರ್ಗರೆದೆಸೆದುದು ||

                                                                 ಶರಚ್ಬಂದ್ರ

ಕಾಲರಜಕಂ ಮಲಿನದಿವಸಾಂಬರವನಾವಿ | ಶಾಲಸಾತಿಯ ಮಳೆಯೊಳೊಗೆದು ದಕ್ಷಂಗೀಯ | ಲಾಲೋಕಿಸುತ್ತೈದೆ ಬೆಳೆಗಳಂ ಸಲಹಿದಳಿಯಂಗೆ ಧವಳಾಂಬರವನು || ಮಲವೈರಂ ಪೋಗೆ ದೀವಳಿಗೆಯೊಳ್ ಕರೆದು | ಮೇಲಿದಂ ಪೊದಿಸಿ ಪರಸುತ್ತಕ್ಷತೆಯನಿಟ್ಟ | ವೋಲೊಪ್ಪಿದಂ ಶರನ್ಮೇಘದೊಳ್ ಚಂದ್ರಮಂ ತಾರಕಾನಿಕರದಿಂದೆ ||

                                                      ಅಮೃತವತಿಯ ಪುತ್ರೋಚ್ಛೆ

ಚೆಲ್ಲೆ ಗಂಗಳ ಮಿನುಗುವರಳೆಲೆಯ ಮಾಂಗಾಯ್ಗ | ಳುಲ್ಲಾಸದಿಂ ಮಿರುಗುವೆನಗೆಯ ನೊಳೆವಲ್ಲ | ಗಲ್ಲದೆಡೆಯೊಳಗೊಸರ್ವ ಲಾಲಾಚಲಾಮೃತದೊಳಬ್ಬೆಂಬ ಸುತನ ತೊದಲ || ಸೊಲ್ಲನಾಲಿಸಿ ನೋಡಿ ತೆಗೆದು ಮೂರ್ಧ್ನಿಘ್ರಾಣ| ದಲ್ಲಿ ತಳ್ಕೈಸಿ ಬಾಯೊಳ್ ಬಾಯನಿಟ್ಟಳ್ಕಿ | ರಲ್ಲಿ ಮುಂಡಾಡುನೆಂ ಪಾಡುವೆಂ ಮುದ್ದುಗಳ ಬೇಡುವೆನೆನುತ್ತೆ ನಲಿದಳ್ ||

                                                       ವೀರಶೈವಾಮೃತಪುರಾಣ

ಇದೂ ವಾರ್ಧಕಷಟ್ಪದಿಯಲ್ಲಿ ಬರೆದಿದೆ ; ಕಾಂಡ 8, ಸಂಧಿ 136, ಪದ್ಯ 7099. ಇದರಲ್ಲಿ ವೀರಶೈವಸಿದ್ಧಾಂತವು ವಿಸ್ತಾರವಾಗಿ ಪ್ರತಿಸಾದಿ ಸಲ್ಪಟ್ಟದೆ. ವೇದಾಗಮಪುರಾಣೇತಿಹಾಸ್ಮ್ರತಿಗಳಿಂದ ವಾಕ್ಯಗಳು

' ಸಾಕ್ಷಿ ' ಎಂದು ಅನುವಾದಮಾಡಲ್ಸಟ್ಟವೆ. ಅಲ್ಲದೆ ಶಿವನ 25 ಲೀಲೆ 

ಗಳು, ಪುರಾತನನೂತನಶರಣರ ಕಥೆಗಳು ಮುಂತಾದ ಅನೇಕವಿಷಯ