ಈ ಪುಟವನ್ನು ಪರಿಶೀಲಿಸಲಾಗಿದೆ

196 ಕರ್ಣಾಟಕ ಕವಿಚರಿತೆ [16 ನೆಯ ಗಳು ಈ ಗ್ರಂಥದಲ್ಲಿ ಉಕ್ತವಾಗಿವೆ. ಶೀಲವಂತಾರ್ಯನ

ಕರಜಾತನಾದ 

ಹಲಗೆಯಾರ್ಯನು ತನ್ನ ಶಿಷ್ಯ ಕೆಂಚವೀರನಿಗೆ ಬೋಧಿಸಿದ ಉಪದೇಶ ವನ್ನು ಪದ್ಯರೂಪವಾಗಿ ರಚಿಸು ಎಂದು ಹೇಳಲು ತಾನು ಅವನ ಆಜ್ಞಾನು ಸಾರವಾಗಿ ಈ ಕೃತಿಯನ್ನು ಬರೆದಂತೆ ಹೇಳುತ್ತಾನೆ. “ ಭೂಲೋಕಪಾ ವನಕಕುದ್ಗಿ ರಿಸುದಾಕ್ಷಿಣ್ಯ ಕೈಲಾಸನರಮೇಲಣಗವಿಯ ಸಿಂಹಾಸನಾಲಂಕೃ ತದ ಶಾಂತನಂಜೇಶ್ವರಾಂಘ್ರಿಸಂಕಜಭೃಂಗ” ಎಂಬುದರಿಂದ ಶಿವಗಂಗೆಯ ಮೇಲಣಗವಿಯ ಸಿಂಹಾಸನದ ಶಾಂತನಂಜೇಶನು ಈತನ ಗುರು ಎಂದು ತಿಳಿಯುತ್ತದೆ.

                 ಈಶಾಂತನಂಜೇಶನೆ ಗುರುಪರಂಪರೆ ಹೀಗೆ ಹೇಳಿದೆ-- ಮಲೆಯಶಾಂತೇಶ ; ಶಿಷ್ಯ ಶಂಭುಗುರು ; ಶಿಷ್ಯ ಮಲೆಯವೀರೇಶ , ಶಿಷ್ಯ ಸಿದ್ದರಾಮೇಶ , ಶಿಷ್ಯ ಶಾಂತನಂಬೇಶ. 

ಇವನ ಶಿಷ್ಯ ಚಿಕ್ಕ ಶಾಂತೇಶ್ವರನು ಯುವರಾಜಪಟ್ಟವನ್ನು ಹೊಂದಿರುವಂತೆ ಕವಿ ಹೇಳುತ್ತಾನೆ. ಹಲಗೆಯಾರ್ಯನು ಜ್ಯೋತಿಯಮ್ಮನ ಮನೆಯಲ್ಲಿ ಕಲ್ಲೇಶ್ವರ, ಸೈಂಧ ವದಶಾಂತದೇವ ಕಲ್ಯಾಣಮಲ್ಲೇಶ್ವರ, ನಂಜಯ್ಯ, ಸಪ್ಪೆಯಮಲ್ಲಿಕಾರ್ಜುನವಿಭು, ಸಮಾಧಿಸಿದ್ದಮ್ಮ, ಸಪ್ಪೆಯಮ್ಮ ಈ ವಿವೇಕಿಗಳಮಧ್ಯೇ ಕೆಂಚವೀರನಿಗೆ ಉಪದೇಶಿಸಿ ದಂತೆ ತಿಳಿಯುತ್ತದೆ. ಪೂರ್ವದಲ್ಲಿ ಲಕ್ಕಣ್ಣದಣ್ಣಾಯಕರು, ಭಂಡಾರಿಜಕ್ಕಪ್ಪ, ಕಲ್ಲೆ ಹದಕೇತಿಸೆಟ್ಟಿ ಇವರುಗಳು ಲಕ್ಷ ಸಂಖ್ಯೆಯ ವಿತ್ತಮಂ ವೆಚ್ಚಿಸುತ್ತ, ಮಾಡಿದರೆಂಬುದು ಹೆಚ್ಚಲ್ಲ ; ನಿಸ್ಪೃಹನಾಗಿ ಈ ಕಾವ್ಯ ಮಂ ಮಾಡಿ ಸಕಲಮಾಹೇಶ್ವರರ ಕೃಪೆಗೆ ಪಾತ್ರ ನಾದ ಮಲ್ಲಣಾರ್ಯನ ಭಾಗ್ಯಕ್ಕೆ ಎಣೆಯುಂಟೇ-ಎಂದು ಶರಣರು ಕವಿಯನ್ನು ಹೊಗಳಿದಂತೆ ಹೇಳಿದೆ.

                  ಈ ಗ್ರಂಥದಲ್ಲಿ ಕವಿ ಹಿಂದೆ ತಾನು ಸತ್ಯೇಂದ್ರಚೋಳಕಥೆಯನ್ನು 

ರಚಿಸಿದಂತೆಯೂ ಲಕ್ಕಣ್ಣದಣ್ಣಾಯಕರ (1428) ಶಿವತತ್ವಚಿಂತಾ ಮಣೆಯಿಂದ ನೂತನಶರಣರ ವಿಷಯವಾದ ಕಥೆಗಳನ್ನು ಸಂಗ್ರಹಿಸಿದಂತೆ ಯೂ ಹೇಳುತ್ತಾನೆ. ಇದರಿಂದ ಕೆಲವು ವಿಷಯಗಳನ್ನು ತಾನು ಸಂಗ್ರಹಿ ಸಿದಂತೆ ನಿದ್ದನಂಜೇಶನು (ಸು. 1650) ತನ್ನ ಗುರುರಾಜಚಾರಿತ್ರದ ಈ ಭಾಗದಲ್ಲಿ ಹೇಳುತ್ತಾನೆ--

                 ವಿಮಲಸತ್ಕ ನಿಮ್ಲೇಣಾರ್ಯರಿಂದುದಿತಶ್ರೀವೀರಶೈವಾಮೃತಪುರಾಣದೊಳು ಸೂತನ ಪುರಾತನರ ಪುರಾಣದೊಳಗೊರೆದ ವಿಸ್ತಾರವಾದ ನೂತನಪುರಾತನವಾದ ಸತ್ಕಧೆಗಳಂ' 

ಸಂಗ್ರಹಿಸಿ ಪೇಳ್ವಿಂ.