ಈ ಪುಟವನ್ನು ಪರಿಶೀಲಿಸಲಾಗಿಲ್ಲ.
198 ಕರ್ಣಾಟಕ ಕವಿಚರಿತೆ. [16 ನೆಯ
ಇವರ ನಲ್ಪಿನ ದೀಹವುತ್ತಮರ ದಾಹವಿಂ ತಿವರ ನಡೆಯನಘರಸುಗಳಿಗಿದೇ ಕಡೆಯೆಂಬ | ಯುವತಿಯರು ಬಂದರಾದೇವದೇವೇಶನಂ ನೋಡೆ ಮತಮಗೆ ಕೂಡೆ | ಸಾವು ನೆಲದಲಿರ್ದಾತನಾಮಂಚಮಂ ಬಯಸುವಂ |
ಸಲೆ ಖಟ್ಟದಿಂದಿಳೆಯನೆಳಸುವಂ ಪುದಿದಿರ್ದ |
ಮಲಮೂತ್ರದಿಂ ವಿವಸ್ತ್ರದೆ ಲಜ್ಜೆಯಂ ತೊಳೆಯುತಿರ್ದೆಕೊರಲ್ಗಳುಮೊಣಗುತ ||
ಸಲಿಲಮಂ ಬಯಸುತ್ತಲಂತಪ್ಪ ಬಾಧೆಯೊಳು |
ಸಲೆ ಗರುಸಿದರ್ಧಮಂ ನೆನೆನೆನೆದು ದುಃಖದಿಂ | ಮಲಮಲಂಮಳುಗುರಜ್ಞಾನದಿಂ ತನ್ನ ಗೃಹರಕ್ಷಣೆಗೆ ಚಿಂತಿಸುವನು || -
ವಿರುಪರಾಜ 1519 ಈತನು ತ್ರಿಭುವನತಿಲಕವನ್ನು ಬರೆದಿದ್ದಾನೆ. ಇವನು ವೀರಶೈವ ಕವಿ ; ರಾಜವಂಶಕ್ಕೆ ಸೇರಿದವನು. ತನ್ನ ಪರಂಪರೆಯನ್ನು ಹೀಗೆ ಹೇಳಿ ಕೊಂಡಿದ್ದಾನೆ -
ಏರುಬೀಡಿನ ಗೋಸೆ ಚೋಳರಭೀಮ ಚೋಳನಾರಾಯಣ ಹನ್ನೊಂದುಬೀಡಿ ನಮಂಡಲಿಕರಗಂಡ ಹೊನ್ನೊರೆಬಿರುದಾಂಕ ಶ್ರೀಕಂರವಂಶಾಬ್ಧಿ ಹಿಮಕರನಾದ ಚಿಕ್ಕವಿ ರೂಪಾಕ್ಷ , ಮಗ ಸಂಗಭೀಮ ಹೊನ್ನೊರೆಕಾವ ಏರುಬೀಡಿನಗೋಸವೆಸರನು ಶಾಳ್ದ ಕಾಮ , ಇವನ ಹೆಂಡತಿ ವೀರಾಂಬೆ , ಮಗ ನಾನಾಕಲಾರಾಮ ಚೋಳರ ಭೀಮ ಭೋಗನನುಜ ವಿರುಪರಾಜ (ಕವಿ).
ಈ ಗ್ರಂಥವನ್ನು ಶಕ 1441 ಪ್ರಮಾಧಿಯಲ್ಲಿ, ಎಂದರೆ 1519ರಲ್ಲಿ, ರಚಿಸಿದಂತೆ ಹೇಳುತ್ತಾನೆ. ಪೂರ್ವಕವಿಗಳಲ್ಲಿ ಕೆರೆಯಪದ್ಮರಸ, ಹರಿದೇವ, ಪಾಲ್ಕುರಿಕೆಯಾರಾಧ್ಯ, ಮಾಯಿದೇವಪ್ರಭು, ಬಾಣ, ಮಯೂರ, ಕಾಳಿದಾಸ, ರಾಘವಾಂಕ ಇವರುಗಳನ್ನು ಸ್ಮರಿಸಿದ್ದಾನೆ.
ಇವನ ಗ್ರಂಥ
ತ್ರಿಭುವನತಿಲಕ್
ಇದು ಸಾಂಗತ್ಯದಲ್ಲಿದೆ ; ಸಂಧಿ 27, ಪದ್ಯ 1525. ಇದರಲ್ಲಿ 63