ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಪ್ರಭುಗ, 201

    ರಸದ ಪೊಡರ್ವು ಮೈಸಿರಿಯ ನೇರ್ಪುಱೆ ಮೈಮೆಯ ತೋರ್ಪು ಶಾಸ್ತ್ರದೊಂ | 
    ದೆಸಕದ ಸೊಂಪು ಭಾವತತಿಯಿಂಪು ವಿರಾಜಿಪ ಪೆಂಪು ಕೀರ್ತಿಯ ||   
    ಪ್ರಸರದ ಗಾಡಿ ಜಾಣ್ಣುಡಿಯ ಮೋಡಿ ಕವಿತ್ವದ ರೂಢಿಯಾಗಳೊಂ | 
    ದೆಸೆವುವು  ಸತ್ಕಎಪ್ರಭುಗನಲ್ಲೆನೆ ತದ್‍ಜ್ಞರೆ  ಪೇಱ್ದೆನಿಂತಿದಂ ||
    ಇವನ ಗ್ರಂಥಗಳಲ್ಲಿ 
                           1 ಚೂಡನಾಸ್ಥಾನ 
     ಇದು ಚೂಡೆಯಲಿಂಗ, ಶೌಂಡನಾಥ ಎಂದು ಕರೆಯಲ್ಪಡುವ
  ಈಶ್ವರನ ಆಸ್ಥಾನದ ವರ್ಣನಾರೂಪವಾದ ಚಂಪೂಗ್ರಂಥ ; ಪದ್ಯ 101,
  ಇದರ ಉತ್ಕೃಷ್ಟತೆಯನ್ನು ಕವಿ ಈ ಪದ್ಯದಲ್ಲಿ ಹೇಳಿದ್ದಾನೆ__
    ಪುರುಳ ತವರ್ಮನೆ ಸೊಗಸಿನ | ಕರು ಸಕ್ಕ ದಗನ್ನಡಂಗಳಿಕ್ಕಿನಿಗಡಲೊ | 
    ಗ್ಗರ ತೊಂಡುನುಡಿಯ ತಾಣಂ | ಸರಸತಿಯರನೆಲೆಯಿದಾಯ್ತು ಚೆಲ್ವಿನ ಕಬ್ಬಂ ||
      ಗ್ರಂಥಾವತಾರದಲ್ಲಿ ಕೌಂಡೇಶ್ವರನನ್ನು ಸ್ತುತಿಸಿ, ಬಳಿಕ ಪಾರ್ವತಿಯ 
  ನ್ನು ಗಣಪತಿಯನ್ನೂ ಹೊಗಳಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗ 
  ಳನ್ನು ಉದ್ಧರಿಸಿ ಬರೆಯುತ್ತೇವೆ__
                              ಈಶ್ವರ | 
      ಇಂಪಿಗಿದಿಂಪು ಪೊಂಪುೞುಗೆ ಪೊಂಪುೞು ತಟ್ಟೆಗೆ ತಣ್ಪು ನುಣ್ಪಿಗೊ | 
      ಳ್ನುಣ್ಪಸಿ.. ಸೊಗಸಿಗೊಳ್ಸೊಗಸಾರ್ಪಿಗೆಯಾರ್ಪು ಕಂಪಿಗೊ  || 
      ಳ್ಗ೦ಪು ಸೊಗಕ್ಕೆಯೊಳ್ಸೊಗಮಪಾರಕಪಾರಮನಾದಿಗಾದಿಯೆಂ | 
      ದುಂ ಪೊಗೞುತ್ತುಮಿರ್ಪುದು ಸಭಾಜನಮಾವಗಮಲ್ಲಿ ಶಂಭುವಂ ||
                             ಮಲಪ್ರಹಾರಿನದಿ 
     ಪರಿವಿಡಿದುಣ್ಮಿ ಪೊಣ್ಮಿ ಕಡೆಗಣ್ಮುತೆ ಬಿದ್ದು ಧುಡುಮ್ಮನೆಟ್ಟು ತೆ | 
     ಳ್ದೆರೆಗಳನೆತ್ತಿ ಪತ್ತು ವಿಡೆ ಬಿತ್ತರಿಸುತ್ತುಱೆ ಸುತ್ತಿಮುತ್ತಿದಾ || 
     ತರುಗಳನೊತ್ತಿ ಕಿಱ್ತು ಮಿಗೆ ನಿರ್ಭ ರದಾರ್ಭಟಿ ಪರ್ಬಿ ಕೊರ್ಬಿ ಭೋ ||
      ರ್ಗರೆಯೆ ಘುಮುಪ್ರಘುಮ್ಮು ಘುಮುಘುಮ್ಮೆನುತೊಪ್ಪುಗುಮಾನದೀದ್ವಯಂ ||
                          2. ವೈಭೋಗರಾಜಾಸ್ಥಾನ 
      ಇದು ವೈಭೋಗರಾಜ ಎಂದು ಕರೆಯಲ್ಪಡುವ ಈಶ್ವರನ ಆಸ್ಥಾನ 
    ವರ್ಣನಾರೂಪವಾದ ಚಂಪೂಗ್ರಂಥ ; ಪದ್ಯ 101. ಇದು ಹುಟ್ಟುವುದಕ್ಕೆ

ತೆ

      24