ಈ ಪುಟವನ್ನು ಪರಿಶೀಲಿಸಲಾಗಿಲ್ಲ.
808 ಕರ್ಣಾಟಕ ಕವಿಚರಿತೆ. [26 ನೆಯ ಯಾಧಿಪತಿಯ ಪಟ್ಟಣವ ಕೊಳ್ಕೊಂಡು ಕೈಲಾಸಕ್ಕೆ ಕೊಂಡೊಯ್ದ ಯತಿ ಸಾನಂದಚರಿತೆ” ಎಂಬ ಪದ್ಯಭಾಗದಲ್ಲಿ ಸೂಚಿಸಿದ್ದಾನೆ.ಗ್ರಂಥಾವತಾರದಲ್ಲಿ ಶ್ರೀಗಿರಿಯಮಲ್ಲೇಶನ ಸ್ತುತಿ ಇದೆ.ಬಳಿಕ ಕವಿ ಗಣೇಶ ಕಂತೆ ಯದೇವ ಇವರುಗಳನ್ನು ಸ್ಮರಿಸಿದ್ದಾನೆ. ಈ ಗ್ರಂಥದಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ--
ವನ ನೆಳಲ ತಂಪಿನ ಕೊಳ ತಳಿರ ಮಂಟಪ ಸಣ್ಣ | ಮುಲುವಟ್ಟಿಯ ರನ್ನ ಜಗಲಿ | ಸುಗಾಳಿ ಸುತ್ತ ಪರ್ಬದ ಲತೆ ಪೂದೋಟ 1 ವಳವಟ್ಟು ಮೆದುವಾವನದಿ|| ನರಕ
ಕಡಿದು ಕಚ್ಚಿ ಹೀರಿ ಹಾಡುವ ಜಿಗುಳೆಯು | ಬಿಡದೆ ಕಡಿವ ವಜ್ರದುಂಬಿ | ಮಡಲಿದಿಹ ಮರಗೆಂಜುಗ ದಾರಿಯೊ | ಳೆಡೆದೆಬಿಹಿಲ್ಲ ಸೋಡಿದರೆ ||
ವಿಷದ ಕಾರ್ಮಡು ಕೆಂಡದ ತೋಟ ದಳ್ಳುರಿ| ಮುಸುಕಿ ಹರಿವ ಪೆದ್ದೂಳಿಯು | ಬಿಸಿನೀರ ಭಾವಿ ಹಾವಸೆಗಲ್ಲುಸೋಪಾನ | ಹೊಸಪರಿಯೆಲ್ಲಿ ನೋಡಿದರೆ || 2, ಹರಿಶ್ಚಂದ್ರಸಾಂಗತ್ಯ ಸಂಧಿ 6, ಪದ್ಯ 441. ಇದರಲ್ಲಿ ಹರಿಶ್ಚಂದ್ರನ ಕಥೆ ಹೇಳಿದೆ. _________________ ಚೇರಮಾಂಕ 1526 ಈತನು ಚೇರಮಕಾವ್ಯವನ್ನು ಬರೆದಿದ್ದಾನೆ. ಇವನು ವೀರಶೈವ ಕವಿ ; ಇವನ ಪಿತಾಮಹನು ಆದಯ್ಯಸಿರಿಯಾಳನನ್ವಯೋದ್ದಾಮನೂ ಚಿಕ್ಕವೀರೇಶಕರಜಾತನೂ ಆದ ನಾಗಲಿಂಗಸೆಟ್ಟ ; ತಂದೆ ರಾಜಪೂಜ್ಯ ನಾದ ಗಂಗಪ್ಪಸೆಟ್ಟ ; ಗುರು ಚನ್ನವೀರೇಶ,ಗುಬ್ಬಿಯಮಾಣಾಕ್ಯನ (1513) ಕೃಪೆಯಿಂದ ತನ್ನ ಗ್ರಂಥವನ್ನು ಬರೆದಂತೆ ಹೇಳುತ್ತಾನೆ. ಈ ಗ್ರಂಥ ನಿರ್ಮಾಣಕಾಲವು ಶಕ 1448ನೆಯ ವ್ಯಯಸಂವತ್ಸರ-ಎಂದರೆ 1526_ಎಂದು ಹೇಳಿದೆ. ಪೂರ್ವಕವಿಗಳಲ್ಲಿ .ವಾಲ್ಮೀಕಿ, ಮಯೂರ, ಹಲಾಯುಧ, ನಾಲ್ಕು ಏಕಸಮ,ಭೋಜ,ಬಾಣ ಇವರುಗಳನ್ನು ಸ್ತುತಿಸಿ
____________________________________________
1 Vol. 1, 2I7.