ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನ] ಚೇರಮಾಂಕ. 269
ಅರಸನರ್ಧವನಿತ್ತು ಶರಣಗ್ಗೆ೯ಯಾಕೆಯ | ಮರುಳಿಂದ ಕಟ್ಟಿಸುತ ಬಯಲಾದ ಹಿರಿಯ ಪ | ದ್ಮ ರಸರವರಣುಗನು ವ ರಾಮಾನುಜನ ಶಿಷ್ಯನಂ ಭಂಗಿಸುತ್ತಾತನ || ಪೊರೆದನಂ ವೀರಬಲ್ಲಳನ ಸಭೆಯೊಳಗಿರ್ದು | ಕರಮರ್ದನಂಗೈದ ಮಹಿಮೆಗವನಿಪನೆಗೆ | ಬರುತ ಹಂಪೆಯೊಳೀಶಭಕ್ತರಂ ನುತಿಸಿದ ಹರೀಶನಂ ಬಲಗೊಂಬೆನು ||
ಎಂಬ ಪದ್ಯದಲ್ಲಿ ಕೆರೆಯಪದ್ಮರಸ, ಕುಮಾರಪದ್ಮರಸ, ಹರೀಶ್ವರ ಇವರುಗಳನ್ನು ಸ್ಮರಿಸುತ್ತಾನೆ, “ನವರಸಭಾವಲಕ್ಷಣಾಲಂಕಾರನಿಪುಣ” ಎಂದು ತನ್ನನ್ನು ವಿಶೇಷಿಸಿ ಹೇಳಿಕೊಂಡಿದ್ದಾನೆ.
ಇವನ ಗ್ರಂಥ ಚೇರಮಕಾವ್ಯ ಇದು ವಾರ್ಧಕಸಮ್ಪದಿಯಲ್ಲಿ ಬರೆದಿದೆ , ಸಂಧಿ 11, ಪದ್ಯ 555. ಇದರ ಕಧಾಗರ್ಭವು ಈ ಪದ್ಯದಲ್ಲಿ ಹೇಳಿದೆ__ ನಾರದನ ಬಿನ್ನಪಕೆ ಭಸಿತಕಾಯನ ಶಿವಂ | ಧಾರಿಣಿಗೆ ಕಳುಪೆ ಚೇರಮನೆನಿಸಿ ರಕ್ಷಾವಿ | ಚಾರಮಂ ಪರಕಲಿಸಿ ಭವನನುಜ್ಞೆಯ ಭದ್ರಗಾಯಕಂಗಿಷ್ಟವಿತ್ತು || ಆರುಚಿರನಂಬ್ಯಣ್ಣನೊಡನಿರ್ದು ಒಟಕವಂ | ಮಾರಾರಿಯೂರ್ಗೆಯ್ದೆ ಪಿಂದೆ ಧಾಯಪೋಗಿ | ಚಾರುಕಾವ್ಯವನಲ್ಲಿ ಕೇಳಿಸಿದನೆಂಬಕಥೆ. ಇದರ ಉತ್ಕೃಷ್ಟತೆಯನ್ನು ಕವಿ ಬಿಟ್ಟಕಣ್ಣವರೂರ ಸುಧಯ ಸವಿ ಮನವಲರ್ದು | ನಟ್ಟು ಕೂಡುವ ಲತಾಂಗಿಯ ಸೋಂಕು ಪುಳಕವಳ | ವಟ್ಟು ಹಾಡುವ ಗಾನರಸದಿಂಪು ಜಾಜೆಯೊಳ್ಳರಲ ಕಂಪುಗಳ ಸೊಂಪು || ಕಟ್ಟಕ್ಕಿ ಉನ ಸುತನ ರೂಪು ನಲ್ಲಿನ ಸೈಪು | ಮುಟ್ಟಿ ಪಂಚೇಂದ್ರಿಯಂ ನಲಿವವೋಲ್ ಗಂಗಪ್ಪ | ಸೆಟ್ಟಿಯಾತ್ಮ ಚಚೇರಮಂ ಪೇಲ್ದಿ ರಸಕಾವ್ಯವೆಸವುದಖಿಳರಿಗೆ ಸೇವ್ಯ || ರಸಿಕರಾಹಾ ಎನಲು ಭಾವಕರು ತಲೆದೂಗೆ |
27