ಈ ಪುಟವನ್ನು ಪರಿಶೀಲಿಸಲಾಗಿದೆ

21೦ ಕರ್ಣಾಟಕ ಕವಿಚರಿತೆ. [16 ನೆಯ

 ಪೊಸಬಗೆಯಿದೆಂದು ಕೊಂಡಾಡೆ ಲಾಕ್ಷಣಿಕರಾ |
 ಲಿಸಲು ವಿದ್ವಜ್ಜನಂ ನೇೞ್ದೀಕಾವ್ಯ

ಎಂಬ ಪದ್ಯಗಳಲ್ಲಿ ಹೇಳಿದ್ದಾನೆ. ಈ ಗ್ರಂಥವನ್ನು

     ವೇದಾಂತಸಿದ್ಧಾಂತಲಕ್ಷಣವೈದ್ಯಭರತಸಾಮುದ್ರಿಕಜ್ಯೋತಿಷಾಲಂಕಾರಸರಸ ಗೀತಂ ವಾದ್ಯಶಕುನಸದಾವ್ಯಕರಣಶಾಸ್ತ್ರದೊಳಗೆ ಪರಿಣತನೆನಿಪ್ಪ ಸತ್ಕವಿಮಲ್ಲ

ಣಾರ್ಯಗುರುವರನ ಕೃಪೆಯಂ ಪಡೆದು ಬರೆದಂತೆ ಹೇಳುತ್ತಾನೆ. ಗ್ರಂಥಾವತಾರದಲ್ಲಿ ಭೋಗಮಲ್ಲೇಶ್ವರಸ್ತುತಿ ಇದೆ. ಬಳಿಕ ಕವಿ ಪಾರ್ವತಿ, ಗಣೇಶ, ಷಣ್ಮುಖ, ನಂದಿ, ಭೃಂಗಿ, ವೀರಭದ್ರ ಇವರುಗಳನ್ನು ಹೊಗಳಿ ಆಮೇಲೆ ತನ್ನ ಗುರು ಚನ್ನವೀ ರೇಶ, “ ಗುಬ್ಬಿಯಮಲ್ಲಣಾಚಾರ್ಯಪೌತ್ರೆ, ಸಂಸ್ಕೃತಕರ್ಣಾಟಕಕವಿತಾ ವಿಶಾರದ, ಬಸವೇಶ್ವರಪುರಾಣಾರ್ಥಭೋಗಿ ” ಯಾದ ಮಲ್ಲಣಾರ್ಯ, ಸೋ ಲೂರಚಿಕ್ಕಬಸವ ಇವರುಗಳನ್ನು ಸ್ತುತಿಸುತ್ತಾನೆ.

      ಇವನ ಬಂಧವು ಪ್ರೌಢವಾಗಿದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ___
                        ಸಮುದ್ರ

ಕರಿಯ ವನವೋ ಹರಿಯ ತಲ್ಪವೋ ಭಾವಿಸಲ್ | ಸಿರಿವೆಣ್ಣ ಸೂತಿಕಾಗೇಹವೋ ರನ್ನಂಗ | ಳಿರಿಸಿದ ಕರಂಡವೋ ಮಕರಮಿಾನಾಳಿಕರ್ಕಾಟಕಂಗಳ ರಾಸಿಯ || ಸುರಿದ ಕಳನೋ ವಾಡಬಂ ಪೊರೆವ ಕೊಯಿಗುೞುಯೊ | ಸುರಪಗಾಗೋಡಿದಹಿತರು ಬಲಿದ ಜಲದುರ್ಗ | ದಿರವೊ ಪೇಱೆನೆ ಮೆಱೆದುದರರೆ ಬಹುಬಂಧು ಭೂಪರಿವೃತ್ತವಾದ ಸಿಂಧು ||

                         ಮಳೆ 

ಬೇಸಗೆಯ ಬಿಸಿಲುರಿಗೆ ಬಾಯಾಱು ಮೇಘವಂ | ದಾಸಮುದ್ರೊದಕವನತೃಷ್ಣೆಯಿಂ ಕೊಂಡು | ದೋಸದೆ ಜಲೋದರದರೋಗವಾಗಲ್ಕೊಂದು ಮೋ‍‍‍ಱಂಬ ಮೊರೆಯನಿಡಲು || ಆಸುರದೆ ಕಾರೆಂಬ ವೈದ್ಯನಾಮಿಂಚೆಂಬ | ಭಾಸುರದ ಶಸ್ತ್ರಮುಮನಲ್ಲಲ್ಲಿಗಿಡೆ ಪೊಳೆದು || ಸೂಸುತಿಹ ರಕ್ತಕಣವೊಗುವ ನೀರೆನಲಿಂದ್ರಗೋಪದೊಳ್ಮಱೆ ಕಱೆದವು ||