ಈ ಪುಟವನ್ನು ಪರಿಶೀಲಿಸಲಾಗಿದೆ
ಶತಮಾನ) ಸಂಪಾದನೆಯ ಚೆನ್ನಂಜೆದೇವವ 214
ವಯ್ಯಾ; ಧನ ದೊರಕದೆ ನಿಸ್ಫೃಹನಲ್ಲದೆ ಧನ ದೊರಕಿ ನಿಸ್ಫೃಹನಲ್ಲವಯ್ಯಾ; ಏಕಾಂತದ್ರೋಹಿ ಗುಪ್ತಪಾತಕಿ ಯುಕ್ತಿಶೂನ್ಯಂಗೆ ಸಕಳೇಶ್ವರದೇವ ಒಲಿ ಒಲಿ ಎಂದೊಡೆ ಎಂತೊಲಿವನಯ್ಯಾ.
_____________________ ಲಿಂಗಮಂತ್ರಿ, ಸು. 1530 ಈತನು ಕಬ್ಬಿಗರ ಕೈಪಿಡಿಯನ್ನು ಬರೆದಿದ್ದಾನೆ. ಇವನು ವೀರಶೈವಕವಿ; ವಿರೂಪಾಕ್ಷನ ಮಗನು, ನುಗ್ಗೆಹಳ್ಳಿಯ ರಾಯಭೂವರನ ಪ್ರಧಾನಿ. ಸಂಗೀತನಿಪುಣ, ಬಹುಲಿಪಿಜ್ಞ ಎಂದು ಹೇಳಿಕೊಂಡಿದ್ದಾನೆ. ಹಾಸನದ 117ನೆಯ ಶಾಸನದಿಂದ (1573) ವಿಜಯನಗರದ ರಾಜನಾದ ವೀರಪ್ರತಾಪಪ್ರೌಢದೇವಮಹಾರಾಯನ (1419-1446) ಅಳಿಯನಾದ ಆತ್ರೇಯ ಗೋತ್ರದ ಆಪಸ್ತಂಬಸೂತ್ರದ ಶಾವಾಶ್ವಪ್ರವರದ ಯಜುಶ್ಶಾಖೆಯ ಸೋಮವಂಶದ ತಿರುಮಲರಾಜನಿಗೆ ನುಗ್ಗೆಹಳ್ಳಿಯ ರಾಯೊಡೆಯನೆಂಬ ಮಗನಿದ್ದಂತೆ ತಿಳಿಯುತ್ತದೆ. ಮತ್ತೊಂದು ಶಾಸನದಲ್ಲಿ ನುಗ್ಗೆಹಳ್ಳಿಯ ರಾಯಣರಾಜನು ವಿಜಯನಗರದ ಅಚ್ಯುತರಾಯನ (1530-1542) ಸಾಮಂತನಾಗಿದ್ದನೆಂದು ಹೇಳಿದೆ. ಈತನೇ ಕವಿ ಹೇಳುವ ನುಗ್ಗೆಹಳ್ಳಿಯ ರಾಯಭೂವರನು. ಇವನ ಕಾಲವು ಸುಮಾರು 1530 ಆಗಬಹುದು ಕವಿಯಕಾಲವೂ ಅದೇ. ಕವಿ ತನ್ನ ಗುಣಾದಿಗಳನ್ನು ಈ ಪದ್ಯಭಾಗಗಳಲ್ಲಿ ಹೇಳಿಕೊಂಡಿದ್ದಾನೆ___ ಶಿವಚರಣಯುಗಸಮಾಕಲಿತಾಂತರಂಗ ಶಿವ| ಕವಿನಿಕರಪಾದಪಂಕೇಜಾತಭೃಂಗ ಸ| ದ್ವಿವಿಧಮೃದುಶಬ್ದ ಸಾಹಿತ್ಯಪೀಯೂಷಾಬ್ಧಿಲಲಿತಲಹರೀತರಂಗ || ಅವಿರಳಾನಂದಯೋಗಿವ್ರಾತಸಂಗ ದು|ಷ್ಕ ವಿನಿಚಯಹೃದಯಾಂಧಕಾರದೂರಪತಂಗ| ನವಮದನರೂಪ ವಿರೂಪಾಲಿಂಗ. ಧುರಧೀರನುಗ್ಗೆಹಳ್ಳಿಯರಾಯಭೂವರನ |ಪರಮಪ್ರಧಾನಸುಕಲಾಪ್ರವೀಣಂಕೀರ್ತಿ| ಭರಿತದಿಗ್ವಳಯಂ ವಿರೂಪಾಕ್ಷಪಾದಾರವಿಂದಮಕರಂದಭೃಂಗಂ || ಸರಸಸಂಗೀತನಿಪುಣಂ ಬಹುಲಿಪಿಜ್ಞ ಭೂ | ಸುರವರವಿರೂಪಾಕ್ಷಸುತ ಲಿಂಗಮಂತ್ರಿಪಂ.