ಈ ಪುಟವನ್ನು ಪರಿಶೀಲಿಸಲಾಗಿಲ್ಲ.
216 ಕರ್ಣಾಟಕ ಕವಿಚರಿತೆ. [16ನೆಯ
ಭಿಕ್ಷಾ ಟನಚರಿತೆಯನ್ನು ಬರೆದಿರುವ ಗುರುಲಿಂಗವಿಭು ಇವನೇ ಆಗಿರಬಹುದೋ ಎಂಬ ಸಂಶಯವುಂಟಾಗುತ್ತದೆ. ಮಂತ್ರಿಯಾದುದರಿಂದ ವಿಭು ಎಂಬ ವಿಶೇಷಣವು ಯುಕ್ತವಾಗಿ ತೋರಬಹುದು, ಆದರೆ ಗುರು ಎಂಬ ಉಪಪದವಿಲ್ಲದಿರುವುದರಿಂದಲೂ ಭಿಕ್ಷಾಟನಚರಿತೆಯಲ್ಲಿ ಕವಿಯ ವಿಷಯವಾಗಿ ಆವ ಅಂಶಗಳೂ ಹೇಳಿಲ್ಲವಾದುದರಿಂ ದಲೂ ಆ ಕವಿ ಬೇರೊಬ್ಬನಾಗಿರಬಹುದೆಂದು ತೋರುತ್ತದೆ. ಇವನ ಗ್ರಂಥ ಕಬ್ಬಿಗರ ಕೈಪಿಡಿ ಇದು ವಾರ್ಧಕಪಟ್ಟದಿಯಲ್ಲಿ ಬರೆದಿದೆ; ಪದ್ಯ 100, ಇದರಲ್ಲಿ ಮುಖ್ಯವಾಗಿ ಹಳಗನ್ನಡಪದಗಳ ಅರ್ಥವು ಹೇಳಿದೆ. ಇಲ್ಲಿ ಪ್ರತಿಪಾದಿತವಾದ ವಿಷಯವನ್ನು ಕವಿ ಈ ಪದ್ಯಭಾಗದಲ್ಲಿ ಹೇಳಿದ್ದಾನೆ____ ಮಿಸುವ ಗೂಢಪದಪ್ರಯೋಗದೊಳ್ವಂ ರಸಮ | ನೊಸರ್ವಚ್ಚಗನ್ನಡದ ಚೆಲ್ವುಮಂ ತದ್ಭವದ | ಬೆಸುಗೆಯಂ ದೇಶ್ಯಕ್ಕೆಮರ್ದ್ದ ಸೊಂಪಂ ತೊಳಪ ತತ್ಸಮದ ಬಿನ್ನಣವನು || ಉಸಿರೆಂದು ಕೋವಿದರ ಬೆಸಸಲಾನಿದಕೆ ಶೋ | ಭಿಸುವ ಕಬ್ಬಿಗರಕೈಪಿಡಿಯೆಂದು ಪೆಸರನಿ | ತ್ತೊಸೆದು ಪೇೞ್ದಪೆನು. ಗ್ರಂಥಾವತಾರದಲ್ಲಿ ಸಂಭಾವಿರೂಪಾಕ್ಷಸ್ತುತಿಯಿದೆ. ಈ ಗ್ರಂಥ ದಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ____ ವಂಚನೆಗೆ ಮಾಜೆಂದು ಪೆಸರಕ್ಕು ವಂಶಮಂ | ಬಂಚಮೆನಲಕ್ಕು ಗಾವಿಲನೆಂದು ಗ್ರಾಮಣಿ ಪ | ಳಂಚೆಂದು ತಾಗೆಂದು ಸಂಘಟ್ಟನಾರ್ಧ ಪಾಗದಮೆನಲ್ ಪ್ರಾಕೃತಾಖ್ಯಂ || ಉಂಡಮೆಂದುದ್ದಮಪ್ಪುದು ಮೇಣಪೂರ್ವಮಂ | ಪಂಚವೆಂಬುದು ಅವಸೆಯೆನಲಮಾವಾಸ್ಯೆ ಗುಳ | ವಂಚಿತಂ ಗುಡ ಪಕ್ಕರಕ್ಕೆಯಪ್ಪುದು ನಾಡಿ ನಾಯಿಯೆನೆ ಗೇಟಿಗೆಯಕ್ಕುಂ || ತುೞುಲೆಂದು ಮೋಟ್ಠಂದು ಕುಂಬೆಂದುಮೆಗೆಂದು | ಬೞಿಕ ಮಣಿಯೆನೆ ನಮಸ್ಕಾರಕ್ಕೆ ಪೆಸರಕ್ಕು | ಮಿಳೆಯ ಪಿರಿಯರ್ ನೇರಿದರ್ ದಿಮ್ಮಿದರ್ ಗನಹರುಱೈ ಸೈದರೆನಿಸಿಕೊಳ್ಗುಂ ||