ಈ ಪುಟವನ್ನು ಪರಿಶೀಲಿಸಲಾಗಿದೆ
ಶತಮಾನ] ವೀರಭದ್ರರಾಜ. 221
ಕುಲವಿದು ಗೋತ್ರವಿಂತಿದು ಚರಿತ್ರವಿದೆಂಬುದನಿನ್ನೆಗಂ ರಸಾ | ತಲದಿನಧಾತ್ರಿಯಲ್ಲಿ ನೆಱೆ ಕಂಡವರಿಲ್ಲೆಲೆದೇವ ನಿನ್ನ ನೀ || ಕುಲಯುತೆ ಗೋತ್ರಜಾತೆ ಮಿಗೆ ಕೈವಿಡಿದಿರ್ದುದಱುಂದೆ ನೀಂ ಮಹಾ | ಕುಲಪತಿಯೆಂಬುದಿಂದಱುಯೆಬಂದುದಿದೀಗಳುಮಾಮಹೇಶ್ವರಾ || ಲಲಿತಮೃದೂಕ್ತಿಯಿಂದೆ ಗಿಳಿಯಂ ಮುಡಿಯಿಂದೆ ಮಯೂರನಂ ಚಲ | ದ್ವಿಲಸಿತನೇತ್ರದಿಂದೆ ಮೃಗಿಯಂ ಮಧುರಸ್ವನದಿಂದೆ ಮತ್ತಕೋ || ಕಿಲಮನದಾವಗಂ ಬಿಡದೆ ಪೋಲ್ತಗರಾಜಕುಮಾರಿ ನಿನ್ನ ತೋ | ಳ್ವಲೆಗುಱೆ ಸಿಲ್ಕಿ ರಂಜಿಪುದು ಚೋದ್ಯಮೆ ನೋಡೆಯುಮಾಮಹೇಶ್ವರಾ | ಸುರುಚಿರಪುಣ್ಯದೊಬ್ಬುಳಿಯನಾಶ್ರಯಿಸಿರ್ಪನುರಕ್ತಿಯೇೞ್ಗೆಯೋ | ಸುರಕುಜಮಂ ಸಮಂತಡರ್ದು ಪರ್ವಿದ ವಿದ್ರುಮವಲ್ಲಿಯೋ ಎನಲ್ || ಕರಮೆಸೆದತ್ತು ನಿನ್ನ ಧವಳಾಂಗಸುಸಂಗದೊಳೊಪ್ಪುತಿರ್ಪ ಶಾಂ | ಕರಿಯ ಶರೀರರಾಗರುಚಿ ಕಣ್ಗೆನಿದೀಯುತುಮಾಮಹೇಶ್ವರಾ || 4. ಪ್ರಾಣನಾಥಶತಕ ಇದರಲ್ಲಿ 101 ವೃತ್ತಗಳಿವೆ; ಪ್ರತಿವೃತ್ತವೂ ಪಾರ್ವತೀಪ್ರಾಣನಾಥಾ ಎಂದು ಮುಗಿಯುತ್ತದೆ. ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ- ಸೊದೆಯಂ ತ್ವದ್ಧ್ಯಾನಪೀಯೂಷಮನಜನೊಲವಿಂ ತೂಗಲಾಧ್ಯಾನಪೀಯೂ | ಷದ ಪೆರ್ಚ೦ ಕಾಣ್ಬುದೆಲ್ಲಾಮುನಿತತಿಯಮರ್ದ೦ ಸೇವಿಸಂಗಕ್ಕುಮೇಗಂ || ತ್ರಿದಶಾಂಗಂ ಧ್ಯಾನಪೀಯೂಷಮನುಱೆ ಸವಿವಂಗಕ್ಕುಮಷ್ಟಾಂಗಮೆಯ್ದಿಂ | ತಿದು ಚಿತ್ರಂ ಸೆಂಪುದಾಳ್ದಿರ್ಪುದನಱುತಿವಱೋಳ್ ಪಾರ್ವತೀಪ್ರಾಣನಾಧಾ || ತನುಗಾಸತ್ತಾಗೆ ಸರ್ವೆಂದ್ರಿಯಮವು ಪಟುವಂ ನೀಗೆ ಮುನ್ನರ್ಜಿಸಿರ್ದ | ರ್ಧನಿಕಾಯಂ ಪೋಗೆ ದೇಹಂ ವಲಿತಪಲಿತಕಿಂಬಾಗೆ ಬೆನ್ನೊಪ್ಪದಿಂದಂ || ಧನುವೋಲ್ ಮುಂ ಬಾಗೆ ನೋಡಲ್ ಶಿರಮದು ಭರದಿಂ ತೂಗೆ ಧರ್ಮಕ್ಕೆ ನಿಮ್ಮ| ರ್ಚನೆಗಿಂಬುಂಟೇ ಮನುಷ್ಯರ್ಗಘಹರ ಗಿರಿಶಾ ಪಾರ್ವತೀಪ್ರಾಣನಾಧಾ || 5. ಶ್ರೀಕಂಠಸೋಮೇಶ್ವರಶತಕ ಇದರಲ್ಲಿ 101 ವೃತ್ತಗಳಿವೆ; ಪ್ರತಿವೃತ್ತವೂ ಶ್ರೀಕಂಠಸೋಮೇಶ್ವರಾ ಎಂದು ಮುಗಿಯುತ್ತದೆ, ಇದರಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇನೆ...