146 ಕರ್ಣಾಟಕ ಕವಿಚರಿತೆ. [18 ನೆಯ ಯವರೆಗೆ ಗುರುಗಳನ್ನು ಸ್ತುತಿಸಿದ್ದಾನೆ. ಈ ಗ್ರಂಥವನ್ನು ಅಭ ಯಸೂರಿಗಳ ಮಕ್ಕಳು ಆಗಮತ್ರಯವೇದಿ ಪ್ರತಿವಾದಿಗಜಕಂಠೀರವ' ಗುಮ್ಮಟಾರರು ಅವಧಾರಿಸಿದರು ಎಂದು ಹೇಳುತ್ತಾನೆ. ಇದರಿಂದ ಕೆಲವುಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ ವಸಂತ ಏಱಿದುದು ತಂಬೆರಲು ಹಿಮ ಪೊಱ | ಮಾಱಿದುದು ಕಾಸಾರದೊಳು ಕಾ | ಲೂಱಿದುವು ರಾಯಂಚೆ ಪದುಮಿನಿ ನಗೆಮೊಗದ ಮಧುವ | ತೂಱಿದುವು ಪರಪಟ್ಟಗಳು ಸರ | ದೋಱಿದುವು ದರ್ಪಕಗೆ ದರ್ಪವು | ಪೇಱಿದುದು ಜಾಳೀದುದು ಜಾತಿಯ ಪೂತ ಸೌಭಾಗ್ಯ || ಬಂದುವಾಮಾಮರನನುತ ನಲ | ವಿಂದ ರಾಗಿಸಿತಸುಕಯಸುಕೆಯ | ದೊಂದುರಾಗಕೆ ಪುಳಕವಾಂತುದು ಸುರಯಿ ಸುರಯಿಗಳು | ಇಂದು ಪುಳಕವನಾಂತುವೆಂದೊಲ | ವಿಂದ ವಿಚಕಿಲವಲರ್ದುವೆನಲಾ | ನಂದಮಂದಿರವಾಯ್ತು ನಂದನ ಕುಸುಮಸಮಯದಲಿ || ಗಿಳಿಗೆ ಭೋಜನಶಾಲೆ ಕೋಗಿಲೆ | ಗಳಿಗೆ ಜೀವಣಶಾಲೆ ಮಧುಪಾ ! ವಳಿಗೆ ಸನ್ಮಧುಪಾನಗೋಷ್ಠೀಶಾಲೆ ಮನಸಿಜಗೆ || ತೊಳಗುವಾಯುಧಶಾಲೆ ಮಂದಾ | ನಿಳಗೆ ನಾಟಕಶಾಲೆಯೆನೆ ಕಂ | ಗೊಳಿಸಿದುದು ಮಧುಮಾಸದೋಲಗಶಾಲೆಯೆನೆ ಬನವು | - - - - ವರ್ಷಾಕಾಲ ಮೀಱಿ ಮುಗಿಲಿದಿರೇಱೆ ಶಿಖಿ ಹರುಷವೇಳೆ ನನೆ | ಯೇಱೆ ಕುಂದವ್ರಜಕೆ ಕಡದಲರ ಸಿರಿಯ ಸೊಂ | 3, ಗೃಧ್ರಪಿಂಛ, ಮಯೂರಪಿಂಛ, ಅರ್ಹದ್ಬಲಿ, ಪುಷ್ಪದಂತ, ಭೂತಬಲಿ, ಜಿನಚಂದ್ರ, ಕುಂಡಕುಂದಾಚಾರ, ತತ್ತ್ವಾರ್ಧಸೂತ್ರಕಾರ ಉಮಾಸ್ವಾತಿ,
ಸಮಂತ ಭದ್ರ, ಕವಿಪರಮೇಷ್ಠಿ, ಪೂಜ್ಯಪಾದ, ವೀರಸೇನ, ಜಿನಸೇನ, ನೇಮಿಚಂದ್ರ, ರಾಮ ಸೇನ, ಅಕಳಂಕದೇವ, ಅನಂತವೀರ, ವಿದ್ಯಾನಂದ, ಮಾಣಿಕ್ಯನಂದಿ, ಪ್ರಭೇಂದು, ರಾಮಚಂದ್ರ, ವಾಸವೇಂದ್ರ, ಗುಣಭದ್ರ, ಮಾಘನಂದಿ, ಚಾರುಕೀರ್ತಿ, ವಿಶಾಲ ಕೀರ್ತಿ, ವಿಜಯಕೀರ್ತಿಸುತಸ್ವಗುರು ಶ್ರುತಕೀರ್ತಿ, ಮಹಿಭೂಷಣ, ಪೋಲಾದಿ ದೇವ, ಮೇರುನಂದಿ, ಸಮಂತಭದ್ರ, ಪಾಲಕೀರ್ತಿ,