ಈ ಪುಟವನ್ನು ಪರಿಶೀಲಿಸಲಾಗಿಲ್ಲ.

259 ಶತಮಾನ ಶ್ರೀಧರಾ೦ಕ. ಬಿಡುವೆನೆ ದೇವ ನಿಮ್ಮ ಪದಮಂ ತರುಯಲ್ ಕೊಳೆಯಲ್ ಸಮಂತು ಕೇಳ್ | ನುಡಿ ಜಗಿ ತಿಂದುತೇಗು ಪತಿ ನೀಂ ಸತಿಯಾಂ ಪೆರಿತುಂಟೆ ಶಂಭು ನೀo || ಪಿಡಿ ಬಿಡು ಕೊಲ್ ಕರಂ ಪೊರೆ ವಲಂ ಚಲದಿಂ ಬಲದಿಂದೆ ನಿನ್ನನಾ | ನೆಡೆವಿಡದೀಗಳೆನ್ನ ಮನದೊಳ್ ನೆರೆವೆಂ ಗಿರಿಮಲ್ಲಿಕಾರ್ಜುನಾ || 1 ಉಜ್ಜಿನೀಶ- ಸು, 1550 ಈತನು ವೀರಶೈವಸಿದ್ಧಾಂತಶಿಖಾಮಣಿಗೂ ಮಗ್ಗೆ ಯಮಾಯಿದೇ ವನ ವಿಶೇಷಾರ್ಥಪ್ರಕಾಶಿಕೆಗೂ ಕನ್ನಡಟೀಕೆಯನ್ನು ಬರೆದಿದ್ದಾನೆ. ಇ ವನು ವೀರಶೈವಕವಿ, ಗೊರಕೋಡ ಮಲ್ಲಿಕಾರ್ಜುನಾಚಾರನ ಶಿಷ್ಯನು' ಶ್ರೀಮದಭಿನ್ನ ಶಾಂತೇಶ್ವರಪ್ರಸಾದಪ್ರಾಸ್ತ್ರ ಪ್ರಸನ್ನ ಸ್ವಾಂತ, ಷಟ್ಸ್,ಲಬ್ರ ಹ್ಮಜ್ಞಾನ ಶಿವಸಿದ್ಧಾಂತಶಿಕ್ಷಾಚಾರ, ಶ್ರೀಮದಭಿನ್ನ ಪ್ರಸನ್ನ ಶಾಂತೇಶ್ವರಪರಾವತಾರ ಶ್ರೀ ಮದ್ದೂರಕೊಡಮಲ್ಲಿಕಾರ್ಜುನಾಚಾರ ಪ್ರಾಸ್ತ್ರ ಪ್ರಸಾದ ಎಂದು ತನ್ನನ್ನು ವಿಶೇ ಷಿಸಿ ಹೇಳಿಕೊಂಡಿದ್ದಾನೆ. ಇವನು ಮಗ್ಗೆಯ ಮಾಯಿದೇವನ(ಸು, 1430) . ಕಾಲಕ್ಕೆ ಈಚೆಯವನು ಎಂಬುದಂತೂ ವ್ಯಕ್ತವಾಗಿಯೇ ಇದೆ;ಸುಮಾರು 1550 ರಲ್ಲಿ ಇದ್ದಿರಬಹುದು. ಶ್ರೀಧರಾಂಕ- ಸು 1550. ಈತನು ನೀಲಕಂಠನಾಗನಾಥಾಚಾರನ ವೀರಮಾಹೇಶ್ವರಾಚಾರ ಸಂಗ್ರಹಕ್ಕೆ ಕನ್ನಡಟೀಕೆಯನ್ನು ಬರೆದಿದ್ದಾನೆ. ಇವನು ವೀರಶೈವಕವಿ. " ಪದವಾಕ್ಯಪ್ರಮಾಣಜ್ಞ, ವಿಬುಧಜನಕರ್ಣಾಮೃತಸ್ಯಂದಿ ” ಎಂದು ತನ್ನನ್ನು ವಿಶೇಷಿಸಿ ಹೇಳಿಕೊಂಡಿದ್ದಾನೆ. ಈಟೀಕೆಯನ್ನು “ಪಟ್ಸ್ಥ ಲಬ್ರಹ್ಮ ವಾದಿ ವೀರಶೈವಾಗಮಸುಧಾರ್ಣವಪೂರ್ಣಚಂದ್ರ ಕರ್ಣಾಟದೇಶಜನಾ ಜ್ಞಾನನಿರ್ಹರಣಾರಾಧ್ಯವರ್ಯ ಗೊರಕೋಡಪುರವರಾಥೀಶ್ವರ ಬೊಪ್ಪಣದೇಶಿ ಕೇಂದ್ರತನೂಭವ' ಮಲ್ಲಿಕಾರ್ಜುನಾಚಾರನ ಆಜ್ಞಾನುಸಾರವಾಗಿ ರಚಿಸಿ ದಂತ ಕವಿ ಹೇಳುತ್ತಾನೆ. ವೀರಶೈವಸಿದ್ಧಾಂತಶಿಖಾಮಣಿವ್ಯಾಖ್ಯಾಕಾರ ನಾದ ಉಜೆನೀಶನು (ಸು. 1550) ಈ ಮಲ್ಲಿಕಾರ್ಜುನಾಚಾರ್ನ ಸಮ ಕಾಲದವನೆಂದು ತಿಳಿವುದರಿಂದ ಈ ಕವಿಯ ಕಾಲವೂ ಸುಮಾರು 1550 ಆಗಬಹುದು. 1 ಗುಬ್ಬಿ 29ನೆಯ ಶಾಸನದಲ್ಲಿ (1470) ಶ್ರೀಗಿರಿಮಲ್ಲಿಕಾರ್ಜುನ ಎಂದು ಮುಗಿವ 3 ಪದ್ಯಗಳು ಉಕ್ತವಾಗಿವೆ ಅವು ಈ ಗ್ರಂಥಕ್ಕೆ ಸೇರಿದುವಲ್ಲ