ಈ ಪುಟವನ್ನು ಪರಿಶೀಲಿಸಲಾಗಿಲ್ಲ.

260 ಕರ್ಣಾಟಕ ಕವಿಚರಿತೆ. [16 ನೆಯ ತನ್ನ ಟೀಕೆಯ ಉತ್ಕೃ ಷ್ಟತೆಯನ್ನು ಈ ಪದ್ಯದಲ್ಲಿ ಹೇಳಿದ್ದಾನೆ ಇದು ಶಿವಭಕ್ತಚಾತಕಚಯಕ್ಕೆ ಮಹಾಭ್ರ ಶಿವೈಕ್ಯ ಚಂದ್ರಕಾಂ | ತದ ನಿವಹಕ್ಕೆ ಚಂದ್ರಿಕೆ ಮನೋಹರಭಾಕ್ತಿಕಪದ್ಯವೃಂದಸಂ || ಪದಕ ಖರಾಂಶು ಸಜ್ಞನಸುಚಿತ್ರವನಕ್ಕೆ ವಸಂತ ನಾಡೆ ಸೊಂ | ಪೊದವಿದ ವೀರಶೈವಘನತಂತ್ರದ ದೀಪಿಕೆ ಭೂತಳಾಗ್ರದೊಳ್ || ರಾಮಚಂದ್ರಗುರುಶಿಷ್ಯ ಸು 1550 ಇವನು ಆದಿತ್ಯಪುರಾಣವನ್ನು ಬರೆದಿದ್ದಾನೆ. ಈತನು ತನ್ನ ಹಸ ರನ್ನು ಹೇಳಿಕೊಂಡಿಲ್ಲ,ಶೃಂಗೇರಿಯ ರಾಮಚಂದ್ರಗುರುವನ್ನು ಸ್ತುತಿ ಸಿರುವುದರಿಂದ ಆತನ ಶಿಷ್ಯನಾಗಿರಬಹುದೋ ಎಂದು ಇವನ ಹೆಸರನ್ನು ಹಾಗೆ ಮೇಲೆ ಬರೆದಿದ್ದೇವೆ. ಪೂರ್ವಕವಿಗಳಲ್ಲಿ ಕುಮಾರವ್ಯಾಸನನ್ನು (ಸು, 1430) ಸ್ಮರಿಸಿದ್ದಾನೆ. ಶೃಂಗೇರಿಯ ರಾಮಚಂದ್ರಭಾರತಿ 1508 ರಿಂದ 1560 ರ ವರೆಗೆ ಪಟ್ಟದಲ್ಲಿದ್ದಂತೆ ತಿಳಿವುದರಿಂದ ಕವಿಯ ಕಾಲವು ಸುಮಾರು 1550 ಆಗಿರಬಹುದೆಂದು ತೋರುತ್ತದೆ. ಪೂರ್ವಕವಿಗಳಲ್ಲಿ ಹರೀಶ್ವರ, ಉದ್ಭಟ, ಬಾಣ, ವ್ಯಾಸ,ಮಲುಹಣ, ಶುಕ, ಕಾಳಿದಾಸ, ಕುಮಾರವ್ಯಾಸ ಇವರುಗಳನ್ನು ಸ್ಮರಿಸಿದ್ದಾನೆ. ಇವನ ಗ್ರಂಥ ಆದಿತ್ಯಪುರಾಣ. ಇದು ಭಾಮಿನೀಷಟ್ಟದಿಯಲ್ಲಿ ಬರೆದಿದೆ; ಸಂಧಿ 48, ಪದ್ಯ 2668, ಇದು « ಶಿವಕಧಾಮೃತವೆಂಬ ಶಿವಕಾವ್ಯ” ವೆಂದೂ ಈ ಗ್ರಂಥಕ್ಕೆ ಕಾಶೀ ವಿಶ್ವನಾಥನೇ ನಾಯಕನೆಂದೂ ಮೊದಲು ಸೂರ್ನು ವೈವಸ್ವತನಿಗೂ ಆಮೇ ಲೆ ಸೂತನು ಋಷಿಗಳಿಗೂ ಹೇಳಿದ ಈಪುರಾಣವನ್ನು ತಾನು ಕನ್ನಡಿಸಿದೆ ನೆಂದೂ ಕವಿ ಹೇಳುತ್ತಾನೆ, ಶಬ್ದಮಣಿ ಮೊದಲಾದ ಶಾಸ್ತ್ರವು ಹೊದ್ದಿ 1 ಹರವಿರೂಪಾಕ್ಷನನು ನಾಮವ | ಬರೆದು ಬಲ್ಲಾಳಂಗೆ ಲೆಕ್ಕವ | ನೊರೆದು ಭಾನುವ ನಿಲಿಸಿ ಧರೆಯನು ಸುಡುವ ಪಾವಕನ | ಒರಿಸಿ ಪೌರಾತನಚರಿತ್ರವ ನರುಹಿ ಜನ ಕಾಣ್ಬಂತೆ ಲಿಂಗವ | ಬೆರಸಿದಗೆ ಹಂಪೆಯ ಹರೀಶ್ವರದೇವಗೆರಿಗುವೆನು |