ಶತಮಾನ] ಬಸವಾಂಕ . 261 ಕೆಯ ಸಾಹಿತ್ಯಕಲ್ಲದೆ ಹೃದ್ಯಷಟ್ಟದಿಹಾಡುಗಬ್ಬಗಳಿಂಗ ಬೇಡೆಂದು ಒರೆವೆ ಬೆನ್ನುಡಿಯ ಬೆರಕೆಯಲಿ- ಎನ್ನುತ್ತಾನೆ, ತನ್ನ ಕಾವ್ಯದ ಉತ್ಕೃಷ್ಟತೆ ಯನ್ನು ಈ ಪದ್ಯದಲ್ಲಿ ಹೇಳಿದ್ದಾನೆ-- ಆರುಕಾಲುಗಳಿಂದ ನಡೆವಳು | ಮೂರುಹೆಜ್ಜೆಗಳಿಂದ ರಂಜಿಸಿ | ಸಾರು ಡಂಗುರಹೊಯ್ಸಿ ಕವಿಗಳಿಗಾನೆ ನೆರವೆಂದು || ತೋರಿದುಕ್ತಿಯನಧಿಕವೇಗದಿ | ತೋರಿ' ಸೊಗಸನು ಬೀರಿ' ಸುಖವನು | ಸೂಳೆಗೊಟ್ಟಳು ಕೇಳಿದವರಿಗೆ ಭಾರತೀರನೆ || - ಗ್ರಂಥಾವತಾರದಲ್ಲಿ ಶಿವಸ್ತುತಿ ಇದೆ. ಬಳಿಕ ಕವಿ ಅನೇಕದೇವ ತೆಗಳು, ಋಷಿಗಳು ಮುಂತಾದವರನ್ನು ಹೊಗಳಿದ್ದಾನೆ. ಈ ಗ್ರಂಥದಿಂದ ಒಂದು ಪದ್ಯವನ್ನು ತೆಗೆದು ಬರೆಯುತ್ತೇವೆ. ತನ್ನ ನರಿವಡೆ ತಾನೆ ಸಾಧನ | ವಿನ್ನು ಬೇಳೋಂದಿಲ್ಲ ತಾನೇ | ಪೂರ್ಣತೇಜಃಪುಂಜವಿಂತಂತೆಂಬ ಕುರುಹಿಲ್ಲ || ತನ್ನ ತಾನೇ ಬೆಳಗಿ ತನ್ನೊಳು | ತನ್ನ ತಾನೇ ಧಳಧಳಿಸೆ ಹೊಳೆ | ವುನ್ನ ತಜ್ಯೋತಿಸ್ವರೂಪವದೆಂದನಾದಿನಪ | ಬಸವಾಂಕ ಸು 1550 - ಈತನು ಉದ್ಭಟದೇವಚರಿತೆಯನ್ನು ಬರೆದಿದ್ದಾನೆ, ಇವನು ವೀರ 1 ವರದಕರಿನಾಧ, ಶಂಕರನಾರಾಯಣ, ಧುಂಡಿರಾಜನೆಂಬ ಗಣಪತಿ, ಸರ ಸ್ವತಿ, ಶೃಂಗಪುರಗುರುವರ ರಾಮಚಂದ್ರ, ವಿಷ್ಣು, ಆದಿಬ್ರಹ್ಮ, ವೀರೇಶ, ಷಣ್ಮುಖ, ನಂದಿ, ಭೈಂಗಿ, ರೇಣುಕ, ವೀರೇಶವಲ್ಲಭೆ, ಅನ್ನಪೂರ್ಣಭವಾನಿ, ಕಾಶೀದೇವಿ, ಕಾಲಭೈ ರವ ಕಾಶೀಲಿಂಗಗಳು, ಮಣಿಕರ್ಣಿಕಾದಿತೀರ್ಧಗಳು, ಗಣಕೋಟಿಗಳು, ಸನತ್ಕು ಮಾರನಾರದಾದಿಮುನಿಗಳು, ವಾಲಖಿಲ್ಯರು, 18 ಪುರಾಣಗಳು (ಶಿವನ ಪೊಗಳಿದ 10 ವಿಷ್ಣು ವ ಪೊಗಳಿದ 4, ಬ್ರಹ್ಮನ ಪೊಗಳಿದ 2, ಅರ್ಕನ ಪೊಗಳಿದ ೧, ಅಗ್ನಿಯ ಪೊಗಳಿದ 1), ನವಗ್ರಹಗಳು, ಪಿತೃಗಳು, ವಿಶ್ವೇದೇವರು, ವಸುಗಳು, ಪುರಾತನನೂ ತನಶಿವಶರಣರು, ಬಾದರಾಯಣ, ಸೂತಪೌರಾಣಿಕ, ಶಿವಕಧೆಯನಾದಿತ್ಯವುರಾಣವ ಪೇಳ್ದ ಸೂರ್ಯ, ಅವನ ಮಗ ವೈವಸ್ವತ.
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೪೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.