ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] ಸುಕುಮಾರಭಾರತಿ. 267

ಮುಸುಱು ಪಾಲ್ದೆನೆಗಳ ಪೊಸರಸವೀಂಟಿ ರಾ|ಗಿಸುವ ಶುಕಾಳಿ ರಾಜಿವುದು ||

                ಉದ್ಯಾನವನ 
ಪೂಗಂಪನುಂಡುಂಡು ರಾಗಿಪ ಭ್ರಮರಂಗಳ್ | ಕೇಗುವ ಸೋಗೆ ಸೊಕ್ಕೇರಿ | ಕೂಗುವ ಪಿಕ ಮಂದವೇಗದಂಜೆಗಳಿನಿಂ | ಬಾಗಿ ಕೇಳೀವನಮಿಹುದು ||
                  ಸಮುದ್ರ 

ನೊರೆ ನರೆ ತೆರೆಗಳೆ ತೆರೆ ಕಂಪ ಕಂಪ ಸೀ | ಕರ ಬಾಯಿತುಂತುರಾವರ್ತ| ದರಿಗಣ್ಣುಡುಗಿದಡಿ ಸರ ಘೋಷ ತನು ಮೆತ್ತ | ನಿರೆ ವೃದ್ಧನಂತಿರಂಭೋಧಿ ||

           ಸುಕುಮಾರಭಾರತಿ ಸು. 1550 
      ಈತನು ಭಾರತವನ್ನು ಬರೆದಿದ್ದಾನೆ ; ಇದಕ್ಕೆ ಚಾಯಣ ಭಾರತ ಎಂಬ ಹೆಸರಿರುವಂತೆ ತೋರುವುದರಿಂದ ಇವನ ಹೆಸರು ಚಾಯಣ ಎಂ ದಿರಬಹುದು ; ಸುಕುಮಾರಭಾರತಿ ಎಂಬುದು ಬಿರುದಾಗಿರಬಹುದು. 

ಇವನು ಬ್ರಾಹ್ಮಣಕವಿ ; ಔಬಳದ ನರಸಿಂಹನನ್ನು ಸ್ತುತಿಸುವುದರಿಂದ ಆ'ಪ್ರಾಂತದವನಾಗಿದ್ದರೂ ಇರಬಹುದು. ನಮಗೆ ದೊರೆತ ಪ್ರತಿ ಅಸಮ ಗ್ರವಾದುದರಿಂದ ಕವಿಯ ವಿಷಯವಾಗಿ ಇನ್ನೇನೂ ಹೇಳಲಾರೆವು. ಇವನ ಕಾಲವು ಸುಮಾರು 1550 ಆಗಿರಬಹುದೆಂದು ಊಹಿಸುತ್ತೇವೆ.

  ಇವನ ಗ್ರಂಥ
                 ಭಾರತ 
     ಇದು ವಾರ್ಧಕಷಟ್ಪದಿಯಲ್ಲಿದೆ ; ನಮಗೆ ದೊರೆತ ಅಸಮಗ್ರಪ್ರತಿ 
    ಯಲ್ಲಿ 2 ಆಶ್ವಾಸಗಳು ಮಾತ್ರ ಇವೆ. ಗ್ರಂಥಾವತಾರದಲ್ಲಿ ಔಬಳನರ 
    ಸಿಂಹಸ್ತುತಿ ಇವೆ. ಬಳಿಕ ಕವಿ ಗಣೇಶನನ್ನೂ ವ್ಯಾಸನನ್ನೂ ಸ್ತುತಿಸಿ 
   ದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ--
                 ವಿಷ್ಣು ಸ್ತುತಿ 
   ಶ್ರೀಯನನವರತ ವಕ್ಷೋಭಾಗದೊಳ್ ವಚ | 
   ಶ್ರೀಯನೆಂದುಂ ವದನವಾರಿರುಹದೊಳ್ ಜಯ| 
   ಶ್ರೀಯನಾಗಳು ಭುಜದೊಳೊಪ್ಪೆ ಧರಿಸಿರ್ಪ..ದೌಬಳದ ನರಸಿಂಹನು || 
   ಶ್ರೀಯುಮಂ ವರವಚಶ್ರೀಯುಮಂ ನುತಜಯ |