ಈ ಪುಟವನ್ನು ಪರಿಶೀಲಿಸಲಾಗಿದೆ

268 ಕರ್ಣಾಟಕ ಕವಿಚರಿತೆ. [16 ನೆಯ ಶ್ರೀಯುಮಂ ಕೊಟ್ಟ ಖಿಳಲೋಕಧವಳಿತಯಶ | ಶ್ರೀಯುಮಂ ಪಾಂಡವಗ್ಗಿ೯ತ್ತವೋಲಿತ್ತು ಸಲಹುಗೆ ಸಕಲಸಜ್ಜನರನು |

                 ಭಾರತಮಹಿಮೆ 

ಶ್ರೀಮದಾಗಮಪಯೋರಾಶಿಯಂ ವ್ಯಾಸಂ ಮ | ನೋಮಂದರದೆ ಕಡೆದು ಪಡೆದಿರ್ದ ಭಾರತಕ | ಧಾಮೃತವನೀವಿಮಲವಾಕ್ಯಕಲಶದೊಳು ಸುಕುಮಾರಭಾರತಿ ತೀವಿದ || ಈಮಹಾಸುಧೆಯನೀಂಟಿದ ಪತಿತನಾದೊಡಂ | ಧೀಮಾನುಗಳಿಗೆ ಮುರಹರಚರಣತತ್ಪರ | ಶ್ರೀಮಾನುಗಳಿಗೆ ಸರಿಯಪ್ಪನದುಕಾರಣದಿನೊರೆವೆನಾಸತ್ಕೃತಿಯನು ||

               ರಾಮೇಂದ್ರ ಸು.1550 
   ಈತನು ಸೌಂದರ್ಯಕಥಾರತ್ನವನ್ನು ಬರೆದಿದ್ದಾನೆ. ಇವನು ರಾಜ ವಂಶಕ್ಕೆ ಸೇರಿದವನಂತೆ ಕಾಣುತ್ತಾನೆ ; ಇವನ ಪಿತಾಮಹನು ಚೆನ್ನಪ ನೃಪ, ತಂದೆ ರಾಮಭೂಪತಿ, ಕಾಕೊಳಲಧಿಪ ಎಂಬುದರಿಂದ ಇವನು ಅವೂರಿಗೆ ದೊರೆಯಾಗಿದ್ದಂತೆ ತೋರುತ್ತದೆ. ಕಾಕೊಳಲ ಸೋಮೇಶ್ವ ರನ ಭೃತ್ಯ ಎಂದು ಹೇಳಿಕೊಂಡಿದ್ದಾನೆ, “ರಾಘವಾಂಕಾದಿಗಳು ಪ್ರಾಸ ತಗಿಟ್ಟ 

ಱರಳಲಗಳು ದುಷ್ಟ” ಎಂಬ ಪದ್ಯಭಾಗದಲ್ಲಿ ರಾಘವಾಂಕನ ಹೆಸರನ್ನು ಹೇಳಿದ್ದಾನೆ. ಇವನ ಕಾಲವು ಸುಮಾರು 1550 ಆಗಿರ ಬಹುದು.

  ಇವನ ಗ್ರಂಥ
               ಸೌಂದರ್ಯಕಥಾರತ್ನ 

ಇದು ತ್ರಿಪದಿಯಲ್ಲಿ ಬರೆದಿದೆ ; ನಮಗೆ ದೊರೆತ ಅಸಮಗ್ರಪ್ರತಿ ಯಲ್ಲಿ 34 ಸಂಧಿಗಳೂ 1932 ಪದ್ಯಗಳೂ ಇವೆ. ಈ ಗ್ರಂಥದಲ್ಲಿ ಬತ್ತೀಸಪುತ್ತಳಿಯ ಕಥೆ ಹೇಳಿದೆ. ಅಲ್ಲಲ್ಲಿ ಕೆಲವು ಕಂದವೃತ್ತಗಳೂ ಇವೆ. ಹೇಮೇಂದ್ರನು ಪೂರ್ವದಲ್ಲಿ ಹೇಳಿದ ಕಥೆಯನ್ನು ತಾನು ಕನ್ನಡಿಸಿದಂತೆ ಷೇಮೇಂದ್ರ ಪೇಱುದ ಪೂರ್ವಕಧೆಯ| ಪ್ರೇಮದಿಂ ಕಾಕೊಳಲಧಿಪ |