ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ)

                ಸದಾಶಿವಯೋಗಿ,
                                         ಜ#

ಮೃದುಮಧುರಂ ಗಂಭೀರಂ | ಸದಳಂಕಾರಪ್ರಸಂಗದಿಂ ಸುಭಗಾರ್ಧಂ| ಸದಮಳಮಾಕೃತಿಯೆಂದತಿ | ವಿದಗ್ಗದೈವಜ್ಞರಂದು ಪೆರ್ಚರೆ ಮನದೊಳ್ || -

 ಈ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ-. ಗುರುಭೃಗುಜರ್ ಬ್ರಾಹ್ಮಣರಂ |ಬುರುಹಪ್ರಿಯಭೌಮರರಸುಮಕ್ಕಳ್ ಚಂದ್ರಂ | ಪರದಂ ಬುಧನೊಕ್ಕಲಿಗಂ | ಸರಸಿಜಹಿತನೂನು ಮಿಶ್ರಜಾತಿಯನಾಳ್ಗಂ | `ಧರಣಿಜಶಶಾಂಕರವಿಸುತ | ರಿರುಳೊಳ್ ದಿನಪೇಂದ್ರಮಂತ್ರಿಶುಕ್ರರ್ ಪಗಲೊಳ್ |

ನಿರುತಂ ಬಲ್ಲಿದರಿಂದುಜ | ನಿರುಳುಂ ಪಗಲುಂ ಸಮಂತು ಬಲ್ಲಿದನೆಂಬರ್ | ನರಶುಕ್ಲಮಧಿಕಮಾದೊಡೆ | ಪುರುಷಂ ಸ್ತ್ರೀಯರುಣಮಧಿಕಮಾದೊಡೆ ಪೆಣ್ಣುಂ ! ಎರಡುಂ ಸಮವಾಗಿಯೆ ತಾಂ | ಬೆರಸಲೋಡಂ ಘಡಿ ಗರ್ಭದೊಳ್ ಸಂಭವಿಕುಂ! ದುರಿತಯುತೇಂದು ಮೇಣ್ ಗ್ರಹಣಕಾಲದ ಚಂದ್ರನಕೂಡೆ ಲಗ್ನ ದೊಳ್ | ಧರಣಿಜನಷ್ಟ ಮಾಲಯದೊಳಿರ್ದೊಡೆ ಪುಟ್ಟಿದ ಕೂಸು ತನ್ನ ತಾ | ಯ್ವರಸುಳಿಗುಂ ದಿನಾಧಿಪತಿ ತದ್ವಿಧದಂತಿರೆ ಕೂಸು ತಂದೆಯುಂ | ಬೆರಸಿರೆ ಶಸ್ತ್ರದಿಂ...ದುಡಿಗುಂ ಕವಿತಾಮನೋಹರಾ ||

              ಸದಾಶಿವಯೋಗಿ [1554 

ಈತನು ರಾಮನಾಥವಿಲಾಸವನ್ನು ಬರೆದಿದ್ದಾನೆ. ಇವನು ವೀರ ಶೈವಕವಿ; ಇವನ ಪ್ರಪಿತಾಮಹನು ಶೃಂಗಾರದ ಸೋಮಣಾರ್ಯ, ಪಿತಾಮಹನು ಗಂಗಾಧರ, ತಂದೆ ಸಾಮವೇದಿಗುರು, ಸಾಮವೇದಿಗುರುಹ ಸ್ತಾಂಭೋಜಸಂಭೂತನೆಂದು ಹೇಳಿಕೊಂಡಿರುವುದರಿಂದ ತಂದೆಯೇ ಇವ ನಿಗೆ ಗುರುವಾಗಿದ್ದಂತೆ ತೋರುತ್ತದೆ. ಶಾಂತನ್ನಪಾಖ್ಯ‌ಶೈವಕವಿರಾಜಸ ಭ್ಯೊನ್ನತನಾಗಿದ್ದಂತೆ ಹೇಳಿಕೊಂಡಿದ್ದಾನೆ; ಈ ಶಾಂತನೃಪನಾರೋ ತಿಳಿ ಯದು. ಕಥಾನಾಯಕನಾದ ರಾಮನಾಥನ ಅಧವಾ ರಾಮಣಾರ್ಯನ ವಂಶೋದ್ಭವನಾದ ಪ್ರಭುದೇಶಿಕನು ಕವಿಯ ಸಮಕಾಲದವನಾಗಿದ್ದಂತ ತಿಳಿ ಯುತ್ತದೆ. ಆತನ ವಂಶಪರಂಪರೆಯನ್ನು ಹೀಗೆ ಹೇಳುತ್ತಾನೆ: - ರಾಮಣಾರರ್ಯ; ತದ್ವಂಶೋದ್ಭವ ಪರ್ವತಾಚಾರ್ಯ ; ಅವನ ಮಗ ಮಲ್ಲಿಕಾರ್ಜುನಾಚಾರರ್ಯ : ಅವನ ಮಗ ಲಿಂಗಣಾರ್ಯ : ಅವನ ಮಗ “ ಕ್ರಿಯಾದಿಚರ್ಯಕ್ರಮತ್ರಿಲಿಂಗಾರ್ಧಪ್ರ ಕಾಶಿಕೆಯೆಂಬುತ್ತಮಸಂಗ್ರಹದತಿವಿಸ್ತಾರಮಂ ತ್ರಿಚರಲ್ಲಿಂಗಪೂಜಾ