ಈ ಪುಟವನ್ನು ಪರಿಶೀಲಿಸಲಾಗಿಲ್ಲ.

272

               ಕರ್ಣಾಟಕ ಕವಿಚರಿತೆ

[16 ನೆಯ

ಖ್ಯಮಯಮಂ ಶಿವಯೋಗಕಲ್ಪತರುವಂ ಯಧಾರ್ಧ ವಿಜ್ಞಾನಮೆಂಬ ಸಂಗ್ರಹಮಂ ಮೋಕ್ಷದರ್ಶನಮಂ ತತ್ಸಂಗ್ರಹೋತ್ಕರವುಂ ಪಂಚವಿಧತ್ವದಿಂ ಶ್ರೀಸಾರಸಿದ್ದಾಂತಮಂ ” ರಚಿಸಿದ ಆದಿಶಿವಾಗಮಾರ್ಧಸಂದೇಶಿಕನೆಂದು ಕೀರ್ತಿವಡೆದ ಪ್ರಭುದೇಶಿಕ,

ಈ ವರ್ಣನೆಯಿಂದ ಪ್ರಭುದೇಶಿಕನು ದೊಡ್ಡ ಪಂಡಿತನಾಗಿದ್ದಂತೆ ತಿಳಿಯಬಹುದಾಗಿದೆ. ಇವನೂ ಕವಿಯ ಗುರುವಾಗಿದ್ದಂತೆ ತಿಳಿಯುತ್ತದೆ. ತನ್ನ ಗ್ರಂಥವನ್ನು (ರಸಾದ್ರ್ಯಬ್ದೀಂದು) ಶಕವರ್ಷ 1455 ನೆಯ ಆನಂದ ಸಂವತ್ಸರದಲ್ಲಿ.-ಎಂದರೆ 1554 ರಲ್ಲಿ ರಚಿಸಿದಂತ ಕವಿ ಹೇಳುತ್ತಾನೆ' ಇವನಿಗೆ ನವಬಾಣಕವಿ, ವಿಚಿತ್ರವಿದ್ವತ್ಕವಿಕುಲಸಾರ್ವಭೌಮ ಎಂಬ ಬಿರುದುಗಳಿದ್ದಂತೆ ತೋರುತ್ತದೆ.

  ಪೂರ್ವಕವಿಗಳನ್ನು ಈಪದ್ಯದಲ್ಲಿ ಸ್ಮರಿಸಿದ್ದಾನೆ 

ಸೋಮೇಶ್ವರಂ ಸಕಳದೇವಬುಧಂ ಹರೀಶಂ | ಭೀಮಂ ಹಲಾಯುಧನನಾಮಯಕಾಳಿದಾಸಂ | ಕ್ಷೇಮೇಂದ್ರನೀಶಕವಿರಾಘವಪಂಡಿತಾದಿ | ಶ್ರೀಮನ್ಮಹಾಕವಿಗಳೊಲ್ದೆನಗೊಳ್ಳನೀವರ್‌ | ಇವನ ಗ್ರಂಥ

      ರಾಮನಾಥವಿಲಾಸ 

ಇದಕ್ಕೆ ರಾಮನಾಥಗುರುಚರಿತೆ ಎಂಬ ಹೆಸರೂ ಉಂಟು ಇದ ಚಂಪೂರೂಪವಾಗಿದೆ; ಉಲ್ಲಾಸ 16. ಅಲ್ಲಲ್ಲಿ ಪಟ್ಟದಿಗಳೂ ಇವೆ. ಗ್ರಂಥ ಸಂಖ್ಯೆ 4300 ಇದರಲ್ಲಿ

 ಹೊಯಿಸಳದೇಶದೊಳ್ ಮುದ್ರಾಪುರದೊಳ್ ಶ್ರೀರಾಮೇಶ್ವರಲಿಂಗಮೂ ರ್ತಿಯಿಂ ವೀರಶೈವದೀಕ್ಷೆಯಂ ಪಡೆದು ಅದಂ ಪುಸಿಯೆಂದು ತಿಳಿದು ಶಂಕೆಯಂ ಮಾಡಿದ ಶೈವರ್ಗೆ ಆ ರಾಮೇಶ್ವರಲಿಂಗಮಂ ಸಾಕ್ಷಿಯಂ ನುಡಿಯಿಸಿ ಮೆಳೆದು ಭೂಲೋಕದೊಳ್ ವೀರಶೈವಮತಮೆ ವೇದಾಗಮಶಾಸ್ತ್ರ ಪುರಾಣಂಗಳೊಳ್ ಉತ್ತರ ಮೆಂಬುದಂ ಪ್ರಾಚುರ್ಯಂಗೆಯ್ದ ರಾಮನಾಧಾಚಾರ್ಯರ ಚರಿತ್ರವು ಹೇಳಲ್ಪಟ್ಟಿದೆ.

ಈ ಗ್ರಂಥದ ಉತ್ಮಷ್ಟ್ಯತೆಯನ್ನು ಕವಿ ಈ ಪದ್ಯಗಳಲ್ಲಿ ನಿರೂಪಿ ಸಿದ್ದಾನೆ