ಶಶಧನ 213 ಸದಾಶಿವಯೋಗಿ, ನವಭಾವಂ ನವರೀತಿಗಳ್ ಗುಣಗಣಂ ಗಾಂಭೀರ್ಯ ಸಾರಾರ್ಧಗೌ || ರವಮಾಧುರ್ಯ ಪದಪ್ರಯೋಗಫಣಿತಿವ್ಯಂಗ್ಯಂ ಕಲಾಪ್ರೌಢಿಮಾ | ರ್ದವತತ್ಸಂಧಿಸಮಾಸಚಿತ್ರರಚನಾಸೌಕರ್ಯ ಸಂದರ್ಭಸೌ || ಪ್ರವಚಾತುರ್ಯ ಚಮತ್ಕೃತಿಪ್ರಧಿತವಿಾಮತ್ಕಾವ್ಯ ಮುದ್ಯ ದ್ಯ ಶಂ || ಗತಿಲೀಲಾವತಿ ಸುಪ್ರಯೋಗತರವೃತ್ತಿನ್ಯಾಸೆ ಯುಕ್ತಾರ್ಧಸಂ | ಗತಿಸಂಪನ್ನ ಕುಮಾರಸಂಭವೆ ಲಸತ್ಸಂಗೀತರತ್ನಾಕರೆ | ಸ್ತು ತಿಚಿಂತಾಮಣಿವರ್ಧಮಾನಕಿರಣಾವಲ್ಯುಲ್ಲಸತ್ಕಂದಳೀ | ಶ್ರುತನಾನಾಕೃತಿ ಮತ್ಕೃತಿ ಪ್ರಧಿತಮಾಯ್ತೇವಣ್ಣಿ ಸೆಂ ಧಾತ್ರಿಯೊಳ್ | ಇಂದುಜ್ಯೋತ್ಸಾ ರವಿಂದಸ್ಛಟಕಶುಚಿಯಶಃಸ್ಯಂದನಂ ವ್ಯಂಗ್ಯ ತುಂದಂ ! ಛಂದಂ ಸ್ವಂದಾತ್ಯಮಂದಪ್ರಕೃತಿಕೃತಿಮಹಾಮಂದಮಾಲಾಮರಂದಂ || ಒಂದುಂ ಕುಂದಿಲ್ಲದಂದಂದಳೆದ ಕೃತಿ ಮನೋನಂದನಂ ಸ್ವರ್ಧವೃಂದಂ | ಕಂದಂ ಮುದ್ವಲ್ಲಿಕಂದಂ ಮೆತಿದುವವನಿಯೊಳ್ ವಂದಿಕೇ ಕೀಂದ್ರಕಂದಂ || ಗ್ರಂಧಾವತಾರದಲ್ಲಿ ಕವಿ ರಾಮಣಾಚಾರನನ್ನು ಸ್ತುತಿಸಿದ್ದಾನೆ. ಬಳಿಕ ಪಂಡಿತಾರಾಧ್ಯರನ್ನು ಸ್ತುತಿಸಿ ರಾಮಣಾಚಾರವಂಶೋದ್ಭವನಾದ ಪ್ರಭುದೇಶಿಕನನ್ನು ಹೊಗಳಿದ್ದಾನೆ. ರಾಮನಾಧಾಚಾರನ ಕಾಲದಲ್ಲಿ ಕೀರ್ತಿ ಚಂದ್ರರಾಜ ಎಂಬ ಒಬ್ಬ ದೊರೆ ಇದ್ದಂತೆ ತಿಳಿಯುತ್ತದೆ. ಉಲ್ಲಾಸಗಳ ಕೊನೆಯಲ್ಲಿ ಈ ಗದ್ಯವಿದೆ ಇದು ಶ್ರೀಮದಖಿಳಭುವನಭವನಾಂತರ್ಗತಾನಂತವಿಮಲತರವಿಚಿತ್ರ ವಿದ್ವತ್ಕವಿ ಕುಲಸಾರ್ವಭೌಮ ಸರ್ವಜ್ಞ ಸದಾಶಿವಯೋಗೀಶ್ವರವಿರಚಿತವಾದ ರಾಮನಾಧವಿಲಾಸ ಮೆಂಬ ಮಹಾಪ್ರಬಂಧದೊಳ್.! ಈಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ ಚಂಪಕ ರಸಹೀನಂ ಕಠಿನಂ ಸುಗಂಧರಹಿತಂ ಸಂತಪ್ತರೂಪಂ ಪರೀ | ಕ್ಷಿಸಲೆಂತುಂ ಬಹುವರ್ಣಸಂಕರನಿಜವ್ಯಾಪಾರಿಯೆಂದುರ್ವಿಯೊಳ್ | 1 ನಮಗೆ ದೊರೆತ ಪ್ರತಿಯ ಅಂತ್ಯದಲ್ಲಿ ಗ್ರಂಧವು ಹುಟ್ಟಿದ ಮಾರನೆಯ ವರ್ಷದಲ್ಲಿಯೇ, ಎಂದರೆ [555ರಲ್ಲಿ, ಅದನ್ನು ಬ್ರಹ್ಮ ಎಂಬವನು ಪ್ರತಿಮಾಡಿದಂತೆ ಹೇಳಿದೆ 35
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೫೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.