ಈ ಪುಟವನ್ನು ಪರಿಶೀಲಿಸಲಾಗಿದೆ

 292 ಕರ್ಣಾಟಕ ಕವಿಚರಿತೆ. [16ನೆಯ

   ತನ್ನ ಗ್ರಂಥದ ಉತ್ಕೃಷ್ವತೆಯನ್ನು ಕವಿಹೀಗೆ ಹೇಳಿಕೊಂಡಿದಾನೆ: ರಸಭಾವಚಿತ್ರವರ್ಣಿತ | ದಸಮಾಯತತಂತ್ರದೃಷ್ಟಿನೀತಿವಿಶಾಲೋ | ಲ್ಲಸದುತ್ವ್ರೇಕ್ಷಾರ್ಧಂಗಳ | ಪಸರಂ ಹಮ್ಮಿಾರವೀರಕಾವ್ಯಂ ಭವ್ಯಂ || ಪದಿನೆಂಟುದೋಷದೂರಂ | ಪದಿನೆಂಟುಂ ವರ್ಣಮಿಳಿತನವರಸಭರಿತಂ | ಸದಮಳಯುಕ್ತಿಗೆ ಯತ್ನಂ | ಪದಬಂಧದ ಮಂತ್ರಶಕ್ತಿ ಕೃತಿರತಿರತ್ನಂ |
   ಗ್ರಂಥಾವತಾರದಲ್ಲಿ ಶಿವಸ್ತುತಿ ಇದೆ. ಬಳಿಕ ಕವಿ ವೃಷೇಂದ್ರ, ಭೃಂಗಿ,ವೀರಭದ್ರ, ಷಣ್ಮುಖ, ಬಸವ, ಚೆನ್ನಬಸವ, ಪ್ರಭುದೇವ, ನೀ ಲಾಂಬಿಕೆ ಇವರುಗಳನ್ನು ಹೊಗಳಿದ್ದಾನೆ, ಪ್ರಕರಣಗಳ ಕೊನೆಯಲ್ಲಿ

ಈ ಗದ್ಯವಿದೆ-

   ಇದು ಮಧುಭಂಜನಾಜು೯ನೋದರಪುರಂದರಪುರೋಗಮನಾನಾಸುರೋರಗನಿಕರ ನವೀನಸುರುಚಿರಪ್ರಚುರಾನರ್ಘಮಣಿಗಣಖಚಿತರಚನೋತ್ತುಂಗಶೃಂಗಾರಸಾರಕೋಟೀಕೋಟೀರಸ್ಛಾರರುಚಿಕದಂಬಪ್ರತಿಬಿಂಬಿತವಿಮಳವಿಳಸಿತನಖಮುಕುರರಾಜಿರಾಜಿತಸ್ಛುರಣಚರಣಾರವಿಂದಚಂದ್ರಶೇಖರಪರಮಶಿವಶರಣ ರಾಜೇಂದ್ರಹಮ್ಮಿಾರವಿಕ್ರಮಾತುಳಪ್ರ ಬಂಧದೊಳ್.
   ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ-
                   ಸಮುದ್ರ 

ವರನಿಧಿಪಂಚಕಮಂ ಸು | ಸ್ಥಿರದಿಂದಂ ತಳೆದುಮುೞುದ ನಾಲ್ಕಂ ಬಯಸೀ | ಶ್ವರಸ೩'ನೂರ್ಗಂ ದಾೞುಯ | ನಿರದೆಯ್ದು ವತೆ ಱದೊಳಬ್ಬಿ ಮೊರೆದುದು ಪೆಂಪಿo |

                   ನಾಡು

ಓಡೆಂಬುದು ಬೇಡೆಂಬುದು | ಕಾಡೆಂಬುದು ಭಾಂಡಶಕಲಪಕ್ಕಣದವದೊಳ್ | ಕೂಡಿದ ನುಡಿಯಲ್ಲದೆಯಾ | ನಾಡೊಳಗಿಲ್ಲದಱ ಸೊಬಗು ಕಡುಚೋದ್ಯತರಂ |

                   ನಕ್ಷತ್ರ 

ಗಗನಾರವಿಂದವೃಂದಮೊ | ಮಿಗೆ ಗಗನದ ಬಹುಳಲೋಚನೌಘಮೊ ಗಗನಾ | ಪಗೆಯ ಜಲಕಣಕದಂಬಮೊ | ಮುಗುಳಾದುದೊ ಗಗನಮೆಂಬ ಕಡಬದ ಮರನೇಂ||

                   ಶ್ರೀವೈಷ್ಣವರು 

ಅಣಿಯರದ ತೊಳಚಿಗೊರಪಿನ | ಮಣಿದೊಡವಿನ ಹೆಡಗೆಪಾಗುದಡಿದೋತ್ರದ•ರು | ಕ್ಕಿಣಿಯೆಱೆಯಗುಱುಪಿನಗ್ಗದ | ಪಣೆಗೋಡಿನ ಹಂಡಹುಂಡಮಟ್ಟಿಗರೆಸೆದರ್ ||