ಈ ಪುಟವನ್ನು ಪರಿಶೀಲಿಸಲಾಗಿದೆ

312. ಕರ್ಣಾಟಕ ಕವಿಚರಿತೆ. [16 ನೆಯ ಸ್ತ್ರೀಯರು ನುಡಿವ ಕನ್ನಡಿ ನೋಡುವುತ್ಪಲಂ ಪೂಗಳಂ | ಮುಡಿವ ಕಾಳಾಹಿ ಚಲಿಸದೆ ನಿಂದ ಮದುಂಬಿ | ನಡೆವ ಪೊಂಬಾಣಿಯರಲದ ಮೊಗ್ಗೆ ತಳರದೊಳೆರೆ ಸರಿಯದೆಳೆಯ ಸಾವು || ಕುಡಿವರಿಯದಿರ್ಪ ಲತೆ ಕಾಯದ ಸುಮಂ ಸಿಂಹ | ಕಡಗದಾನೆಯ ಕುಂಭಮೆಂಬಿವವಯವಮಾಗೆ | ಬಿಡದೆ ಮಲೋಕಮೋಹಿನಿಯರಾಗಿರಿತನುಜೆಯೆಡಒಂದೊಳಿಟ್ಟಣಿಸಿದರ್ ||


                 ಹುಚ್ಚಣ್ಣ 1587 
    ಇವನು ಗುಬ್ಬಿಯಮ್ಮಲ್ಲಣ್ಣನ (ಸು. 1475) ಗಣಭಾಸ್ಯರತ್ನಮಾಲೆ ಯನ್ನು ಶಕ 1509 ನೆಯ ವ್ಯಯಸಂವತ್ಸರದಲ್ಲಿ (1587) ಪ್ರತಿಮಾಡಿದಂತೆ ಈ ಪದ್ಯದಲ್ಲಿ ಹೇಳಿದ್ದಾನೆ.

ಧರಣಿಯೊಳು ಶಾಲಿವಾಹನಶಕಾಬ್ದಂ ಶೂನ್ಯ | ಸುರಸರಣಿಬಾಣಶಶಿಸಂಖ್ಯಾಗತಂ ಸಂದ | ಕರಮೆಸೆವ ವ್ಯಯವತ್ಸರದ ಮಾಘಶುದ್ದ ದ್ವಾದಶಿಭಾನುವಾರದಲ್ಲಿ | ಗೆರೆಗೊಡನಹಳ್ಳಿಯುದ್ಧಂಡಯ್ಯನಾಮಗಂ || ಸುರುಚಿರದ ಗಣಭಾಷ್ಯರತ್ನ ಮಾಲೆಯನೊಲಿದು | ಗುರುಭಕ್ತಿ ಹುಟ್ಟಣ್ಣ ಬರೆದನು.

     ಅಲ್ಲದೆ ತಾನು ಗುರುಶಾಂತನ ಉಪದೇಶದಿಂದ ಸುಜ್ಞಾನಿಯಾದಂತೆ 

ಈ ಪದ್ಯದಲ್ಲಿ ಹೇಳುತ್ತಾನೆ- ಕ್ಷಿತಿಯೊಳಗೆ ಪರುಷಮಂ ಲೋಹ ಸೋಂಕಲ್‌ ಸ್ವರ್ಣ | ಮತಿಶಯದೊಳಪ್ಪುದಲ್ಲದೆ ಪರುಷಮಾಗದ | ಪ್ರತಿಮಗುರು ಸುಜ್ಞಾನಮೂರ್ತಿದೇವರ ಹಸ್ತಕಮಲ ಪರುಷಂ ಸೋಂಕಲು || ಏತತಸುಜ್ಞಾನಿಯಾಗುತ್ತೆ ಶಿವಶರಣಸಂ | ತತಿಗೆ ಬೇಡಿತನಿತ್ತು ಶಿವಶಾಸ್ತ್ರಗೋಷ್ಠಿ ಯೊಳ್ | ಸತತಪರಮಾನಂದದಿಂದಿರ್ಪ ಗುರುಶಾಂತಶಿಷ್ಯನೇಂ ಕೃತಪುಣ್ಯನೋ ||