ಈ ಪುಟವನ್ನು ಪರಿಶೀಲಿಸಲಾಗಿದೆ

 ಶತಮಾನ] ಮಲ್ಲಿಕಾರ್ಜುನ ಕವಿ 313

     ಈತನು ವೀರಶೈವನು; ಗೆರೆಗೊಡನಹಳ್ಳಿಯ ಉದ್ದಂಡಯ್ಯನ ಮಗನು, ಗುರುಶಾಂತದೇವರ ಶಿಷ್ಯನು; ಐಶ್ವರೈವಂತನಾಗಿಯೂ ಶಿವಶಾಸ್ತ್ರ ಗೋಷ್ಟೀಪ್ರವಣನಾಗಿಯೂ ಇದ್ದಂತೆ ತಿಳಿಯುತ್ತದೆ. ಮೇಗಣ ಪದ್ಯಗಳನ್ನು ನೋಡಿದರೆ ಇವನು ಕವಿಯಾಗಿದ್ದಂತೆ ತೋರುತ್ತದೆ. ಆವ ಗ್ರಂಥಗಳನ್ನು ಬರೆದಿದ್ದಾನೆಯೋ ತಿಳಿಯದು.
                ______________
          ಇಮ್ಮಡಿವುರಿಗೆಯನ್ವಾವಿ ಸು. 1590 
   ಈತನು ಶಿವಲಿಂಗನಾಂದ್ಯವನ್ನು ಬರೆದಿದ್ದಾನೆ. ಇವನು ವೀರಶೈವ ಕವಿ, ಮಹಾಂತಸ್ವಾಮಿಯ (ಸು. 1560) ಕಾಲವಾದಮೇಲೆ ಮುರಿಗೆಯ ಮಠದ ಪಟ್ಟಕ್ಕೆ ಬಂದಂತೆ ತೋರುತ್ತದೆ. ಇವನ ಕಾಲವು ಸುಮಾರು 1590 ಆಗಬಹುದು.
     ಇವನ ನಾಂದ್ಯದಲ್ಲಿ 25 ಪದ್ಯಗಳಿವೆ; ಭಾಮಿನೀಪಟ್ಪದಿ 11, ವಾರ್ಧಕ 14. ಇವು ಸಂಧಿಗಳ ಆದಿಯ ನಾಂದೀಪದ್ಯಗಳಾಗಿರಬಹುದು. ಒಂದೆರಡನ್ನು ಉದಾಹರಿಸುತ್ತೇವೆ—-

ಮಡಿಯ ಗಂಗೆಯ ಮಡುವಿನರುಗಿನ | ಕಡುಚೆಲುವಪೆಯನು ನಿರೀಕ್ಷಿಸಿ | ಯೊಡನೆ ತಾವರೆಯಂಕುರವದೆಂದಿರದೆ ಒಕೈಯ || ಕಡುತವಕದಿಂ ನೀಡಿಯದ ನೂಳ | ಗಡಗಿದಾವೊಲನೋಡಿಯಾಲದ | ಬುಡದೊಳಿರೆ ಕಂಡಂಜುವಣುಗನ | ನಗುವ ಮೃಡನೆ ಜಯಾ || ಮುಡಿಯೊಳಿಪ೯ವಳಾರು ಪೇನೆ | ಮಡದಿ ಜಲ ಮೊಗವೇನು ತಾವರೆ | ಕುಡಿತೆಗಂಗಳಿವೇನು ಮೀಂಗಳು ಪುರ್ಬುಗಳಿವೇನು || ತಡೆಯದುಸಿರೈ ತೆರೆಗಳಾ ಬಲು | ಮುಡಿಯದೇನಳಿವಿಂಡು ವೊಲೆಗಳ | ಪೊಡರದೇನೆಣೆವಕ್ಕಿಯೆಂದಗಸುತೆಯ ನೆರೆದಭವಾ ||

            ಮಲ್ಲಿಕಾರ್ಜುನಕವಿ, `593 
  ಇವನು ಶಂಕರಕವಿಕೃತ ಬಸವಪುರಾಣ ಗುರುರಾಜಕೃತಪಂಡಿತಾ ರಾಧ್ಯಚಾರಿತ್ರ ಇವಕ್ಕೆ ಕನ್ನಡವ್ಯಾಖ್ಯಾನವನ್ನು ಬರೆದಿದ್ದಾನೆ. ಈತನ