ಈ ಪುಟವನ್ನು ಪರಿಶೀಲಿಸಲಾಗಿಲ್ಲ.
394 ಕರ್ಣಾಟಕ ಕವಿಚರಿತ [16 ನೆಯ
ಸುರಿವಾಕೆನ್ನೀರ್ ಸರಿಯಾ | ಗಿರೆ ಶಬರಂ ಚಂಡಮಾರುತಂಗೆಣೆಯಾದಂ || ಶಂಖ ತಾಯಂ ಕುಂಭೋದ್ಭವಂ ತಾಂ ಕುಡಿದನಱುದಬಾವಾರ್ಭಕಂ ಪಾಣ್ಬೆಯಕ್ಕ°| ಕಾಯಂ ಬೆಳ್ಪಾಯ್ತು ಮತ್ಸೋ ದರನು ರುಜೆಯುತಂ ಗಂಡರಿಲ್ಲಾ ದರೇವೆಂ || ಬಾಯಂ ಕಚ್ಚುತ್ತಿವಃ ತಮ್ಮಡಿ ಪರವಧುವಂ ಬಾಧಿಸಂ ಭಾಳನೇತ್ರಾ | ಸಾಯಲ್ಕಾೞ್ಂ ಕೃಪಾಸಾಗರನೆ ಮೊರೆಯೋ ಎಂಬಂತೆ ಕೂಗಿತ್ತು ಶಂಖಂ || ಜೈನವೀರಶೈವವಾದ ಜಱೆವುದು ಮತಮೇ ದೈವವ | ಧರೆಗೀಜೆನನಿಂದಲಧಿಕದೈವಗಳೊಳವೇ | ಹರನಾದೊಡೆ ಸಂಸಾರಿಯ | ಅರುಹಂ ಸಂಸಾರರಹಿತನಿವಗವ ಸರಿಯೇ|| ಎನೆ ಕೋಪ ಕೊನರೆ ಕೇಳೆಲೊ | ಜಿನ ಪೆಣ್ಣು ಱುದನಿತಕಾಯ್ತೆ ದೇವತ್ವಂ ಭೀ| ಷ್ಮನಹನುಮರುಱುಯರೇ ವಧು | ವನು ಶಿವಗವರೆಣೆಯ ಮರುಳೆ ತಿಳಿಯದೆ ನುಡಿವೈ || ಗೆಲ್ಲಂ ನಮಗೆಲ್ಲಂ ಜಿನ | ನಲ್ಲದೆ ಶಿವನಿಲ್ಲವೆಂದು ವಾದಿಸೆ ಜೈನರ್ ! ಕಲ್ಲಯನೆಂಬಾಶರಣಂ | ಹಲ್ಲಂ ಮುಱುವಲ್ಲಿ ಜಿನ್ನ ನೆಲ್ಲಿರ್ದನೊ ಪೇಱ್ | _ _ _ _ _ ಸಂಪಾದನೆಯಸಿದ ವೀರಣಾಚಾರ್‍ಯ ಸು, 160) ಈತನು ಆಚರಣೆಯಸಂಬಂಧದ ವಚನ, ಲಿಂಗಸ್ತೋತ್ರದ ವಚನ, ಮಿತ್ರಸ್ತೋತ್ರ, ಸರ್ವಜ್ಞಮೂರ್ತಿಯ ತ್ರಿವಿಧಿ, ಪಾದಸ್ತೋತ್ರ ಇವುಗಳನ್ನು ಸೇರಿಸಿದುದಾಗಿ ತಿಳಿಯುತ್ತದೆ; ಎಂದರ ಈ ಗ್ರಂಥಗಳು ಏತಕ್ಕೃತವಲ್ಲ; ಇತರಗ್ರಂಥಗಳಿಂದ ಆರಿಸಿ ಜೋಡಿಸಿದ ವಚನಗಳನ್ನೂ ಪದಗಳನ್ನೂ ಒಳಕೊಂಡಿವೆ. ಇವನು ವೀರಶೈವಕವಿ, ಸಂಸ್ಕೃತದಲ್ಲಿ ಈತನು ಬರೆದಿರುವ ಅನಾದಿ ವೀರಶೈವಾಚಾರಸಂಗ್ರಹದಲ್ಲಿ ಇವನಿಗೆ ವೀರಮಾಹೇಶ್ವರಾಚಾರ್‍ಯವರ್‍ಯ, ವ್ರೀ __________________________________ 1 “ಪ್ರಸನ್ನ ಶಂಕರಲಿಂಗ ಎಂದು ಮ ಗಿವ 120 ಕಂದಗಳುಳ್ಳ ಒಂದು ಗ್ರಂಥವು ಏತತ್ಕೃತವೆಂದು ಕೆಲವರು ಪ್ರಕಟಿಸಿದ್ದಾರೆ. ಆವ ಆಧಾರದಿಂದಲೋ ತಿಳಿಯದು, ಈ ಗ್ರಂಥದಲ್ಲಿ ಬೇರೆ ಈ ಕವಿಯ ಹೆಸರು ಹೇಳಿಲ್ಲ ಅಲ್ಲದೆ ನಾವುನೋ ಡಿದ ಈ ಗ್ರಂಥದ ಓಲೆಯ ಪ್ರತಿಗಳಲ್ಲಿ ಗ್ರಂಥಕ್ಕೆ ಶಂಕರದೇವರ ಕಂದ ಎಂಬ ಹೆಸರು ಹೇಳಿದೆ. ಆದುದರಿಂದ ಈ ಗ್ರಂಥವು ಶಂಕರಶತಕವನ್ನು ಬರೆದ ಶಂಕರದೇವನಿಂದ ರಚಿ ತವಾಗಿರಬಹುದೆಂದು ನಮಗೆ ತೋರುತ್ತದೆ,