ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾ] ನಸಂಗನಬಸವೇಶ್ವರ 828
ರಶೈವಪಟ್ಸ್ಥಲಮಾರ್ಗಸ್ಥಾಪನಾಗ್ರಗಣ್ಯ ಎಂಬ ವಿಶೇಷಣಗಳು ಹೇಳಿವೆ. ಇವನು ಎಳಮಲೆಯಗುರುಶಾಂತಗೇವನ(ಸು 1565) ಶಿಷ್ಯನೆಂದು ತಿಳಿವುದ ರಿಂದ ಇವನ ಕಾಲವು ಸುಮಾರು 1600 ಆಗಬಹುದು ಸಂಪಾದನೆಯ ಪರ್ವತೇಶ್ವರನ ಚತುರಾಚಾಪುರಾಣದಲ್ಲಿ (1698) ಈತನು “ಜೞೆದು ಶೈವವ ವೀರಶೈವವಂ ಸ್ಥಾಪಿಸಿದಂ” ಎಂದು ಹೇಳಿದೆ ಇವನಿಂದ ಸಂಕಲಿತವಾದ ಗ್ರಂಥಗಳೊಳಗೆ ಆಚರಣೆಯಸಂಬಂ ಧದ ವಚನವು 275 ವಚನಗಳನ್ನೂ ಲಿಂಗಸ್ತೋತ್ರದ ವಚನವು 108 ವಚ ನಗಳನ್ನೂ ಒಳಗೊಂಡಿವೆ, ಮಿಶ್ರಸ್ತೋತ್ರದಲ್ಲಿ ಸಾಂಗತ್ಯದಲ್ಲಿ ಬರೆದ 111 ಪದ್ಯಗಳಿವೆ. ಸರ್ವಜ್ಞಮೂರ್ತಿಯ ತ್ರಿವಿಧಿಯಲ್ಲಿ ಆ ಕವಿಯ ಗ್ರಂಥ ದಿಂದ ತ್ರಿಪದಿಗಳು ಆರಿಸಲ್ಪಟ್ಟಿವೆ. ಈ ಸರ್ವಜ್ಞ ಮೂರ್ತಿ ಅಂಬಲೂರಲ್ಲಿ ಹುಟ್ಟಿದ ಸರ್ವಜ್ಞನೇ ಆಗಿದ್ದರೂ ಇರಬಹುದು. ಈತನ ಪಾದಸ್ತೋತ್ರವು ನಮಗೆ ದೊರೆತಿಲ್ಲ. ಮಿಶ್ರಸ್ತೋತ್ರದ ಆರಂಭದಲ್ಲಿ ಈ ಪದ್ಯವಿದೆ____ ನಂದಿಕೇಶ್ವರಭೃಂಗಿ ಸ್ಕಂದಮುಖ್ಯಾಮರರು | ಬಂದೆನ್ನ ಹೃತ್ಕ ಮಲದೊಳು || ನಿಂದು ನಿಮ್ಮಯ ಭೃತ್ಯನೆಂದು ಕೃತಿಯೊಳು ತ | ಪ್ಪೊಂದಿಲ್ಲವೆನೆ ನಡೆಸುವುದು || _______
ಸಂಗನಬಸವೇಶ್ವರ ಸು 1600 ಈತನು ರಥೋದ್ದ ರಣೆವಾಚ್ಯವನ್ನು ಬರೆದಿದ್ದಾನೆ. ಇವನು ವೀಲ ರಶೈವಕವಿ, ತನಗೆ ಹಿಂದೆ ಈ ಆಗ ಮಗಳನ್ನು ಜಕ್ಕಣಾಚಾರ್‍ಯ, ಮಾಯಿ ದೇವಪ್ರಭು, ಕೆರೆಯಪದ್ಮರಸ, ಗುಬ್ಬಿಯ ಮಲ್ಲಣಾರ್‍ಯ, ಪಾಲ್ಕುರಿಕೆಸೋಮ, ಸೋಮಶಂಭು ಮೊದಲಾದವರು ಸಂಗ್ರಹಿಸಿದರು ಎಂದು ಹೇಳುತ್ತಾನೆ. ಇದರಿಂದ ಕವಿ ಗುಬ್ಬಿಯಮಲ್ಲಣಾರ್‍ಯನ (1530) ಕಾಲಕ್ಕಿಂತ ಈಚೆಯವನು ಎಂಬುದು ವ್ಯಕ್ತವಾಗುತ್ತದೆ; ಸುಮಾರು 1600ರಲ್ಲಿ ಇದ್ದಿರಬಹುದು. ತನ್ನ ಗ್ರಂಥದವಿಷಯವಾಗಿ ಹೀಗೆ ಬರೆದಿದ್ದಾನೆ.. ಪೂರ್ವಪುರಾತನರ ಪ್ರಸಾದವಾಕ್ಯದಿಂದಾದ ಉದ್ಧರಣೆಪಟಲವನು ರಧೋದ್ಧ
ರಣೆವಾಚ್ಯ ವನು ಶ್ರುತಿಸ್ಮೃತ್ಯುಪನಿಷದಾಗಮಪುರಾಣವಚನಾರ್ಧಂಗಳಿಂ ವೃತ್ತಂಗಳೆಂ
ರಾರ್ಧಿಕದಿಂ ಕೆಲವು ಗ್ರಂಥಂಗಳಿಂ ನಿರೂಪಿಸಿದೆವು.