333 ಶಮನ ಪಾಯಣ್ಣವ್ರತಿ, ಪಟ್ಟಣದವನೆಂದು ತಿಳಿವುದರಿಂದ ಏತತ್ಕವಿಭಿನನೆಂದು ತೋರುತ್ತದೆ. ಇವನ ಕಾಲವು ಸುನೂರು 1600 ಆಗಿರಬಹುದು. ಆವನ ಗ್ರಂಥ ಸಂಯಕ್ತಕೌಮುದಿ ಇದು ಸಾಂಗತ್ಯದಲ್ಲಿ ಬರೆದಿದೆ; ಸಂಧಿ 18, ಪದ್ಯ 1989 ದಾನ, ಪೂಜೆ, ಶೀಲ, ಉಪವಾಸ, ಈ ನಾಲ್ಕೂ ಮುಕ್ತಿಪಥ; ಇವೇ ಸಂಯಕ್ತ; ಈ ಸಂಯಕ್ಷ್ಯದಿಂದ ಸದ್ಗತಿಯನ್ನು ಪಡೆದವರ ಕಥೆಗಳನ್ನು ಕವಿ ಈ ಗ್ರಂಥದಲ್ಲಿ ವಿವರಿಸಿದ್ದಾನೆ. ಈ ಗ್ರಂಥದ ವಿಷಯವಾಗಿ ಹೀಗೆ ಹೇಳಿದ್ದಾನೆ.. ಇದು ಭವ್ಯ ಜನಚಿತ್ರ ಕುವಲಯಚಂದ್ರಮ | ವಿದು ಸಜ್ಜನರ ಕರ್ಣಾಭರಣ | ಇದು ಮುಕ್ತಿಸತಿಯ ರಾವೆನಿಸುವ ವಿತರಣ | ವಿದು ಕೇಳ್ದರ ಪಾಪಹರಣ || ನಾರಿಕೇಳದ ಫಲದಂತೆ ಈಕವಿತೆಯು | ತೋಟದು ರಮ್ಯ ಕೆಲರಿಗೆ || ಸಾರಕದಳಿಪಣ್ಣಿನಂತೆ ಗೂಢಾರ್ಧ ವು | ತೋಯಿ ತೋಟದೆಯಿರಬೇಕು | ಗ್ರಂಥಾವತಾರದಲ್ಲಿ ಸುಪಾರ್ಶ್ವಸ್ತುತಿ ಇದೆ. ಬಳಿಕ ಕವಿ ಸಿದ್ಧಾದಿಗಳು, ಭುಜಬಲಿ, ಗಣಧರರು, ಸರಸ್ವತಿ, ಶಾಸನದೇವಿಯರು ಇವರುಗಳನ್ನು ಸ್ತುತಿಸಿದ್ದಾನೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ ಸ್ತ್ರೀಯರು ನಡು ಸಿಂಹ ಧನು ಪುರ್ಬು ಕುಚ ಕುಂಭ ಮಾನಾಕ್ಷಿ ಮಡದಿ ಮಕರಪತ್ರದಿಂದ ಸಡಗರದಿಂ ನಿಡುಹಸ್ತದಿಂದಲಿ ಕನ್ನೆ | ಬೆಡಗಿಂದೊಪ್ಪಿದಳ್ ರಾಸಿಯಂತೆ | ಹರಿಯ ಅಂಗವು ಕಪ್ಪು ಹರನ ಕೊರಳು ಕಪ್ಪು | ಉರಗನ ಹೆಡೆಯೊಳು ಕಪ್ಪು | ವರವಾಣಿಹಸ್ತದ ವೀಣೆ ತಾ ಕಡುಕಪ್ಪು | ಕಪ್ಪಿಂದ ಕೊಟಿತೆಯೇನಮ್ಮ || ಹೆಣ್ಣಿಗಾಗಿ ಕರಿ ತುಂಗಳ ಕಾದನು | ಹೆಣ್ಣಿನಿಂದಜನು ಕೆಟ್ಟ | ಹೆಣ್ಣಿನ ಮೋಹದಿ ಹರನರೆಹಣ್ಣಾದ ) ಹೆಣ್ಣಿಗಾದನು ಕೋಟಿ ಸುರಪ || ನೀತಿ ಮಕ್ಕಳನೋದಿಸಿ ಚಿಕ್ಕಂದು ಪರದರು | ಗಕ್ಕನೆ ಕುಲವಿದ್ಯೆ ಗಳನು | ಅಕ್ಕಂ ಕಲಿಸದೆ ಮುದ್ದಿಸಿದರೆ ಮುಂದೆ | ಸೊಕ್ಕಿಯಿಾತೆ ಅದಿ ಕೆಡುವರು || ಸಿರಿ ಸಂಜೆಗೆಂಪು ಸೋದರರೆಲ್ಲ ಮಂಜಿನ | ನೆರವಿ ಸ್ತ್ರೀಯರು ದೇಶಕೋಶ! ಮರುತನಿದಿರುದೀಪ ಯವ್ವನ ಸುರಧನು | ಮಿಂಚು ಭಾವಿಸಲು ಬಂಧುಗಳು |
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.