ಈ ಪುಟವನ್ನು ಪರಿಶೀಲಿಸಲಾಗಿಲ್ಲ.

334 ಕರ್ಣಾಟಕ ಕವಿಚರಿತೆ. [16 ನೆಯ ಅಣ್ಣಾಜಿ, ಸು, 1600 ಈತನು ಸೌಂದರವಿಳಾಸವನ್ನು ಬರೆದಿದ್ದಾನೆ. ಇವನು ವೀರಶೈವ ಕವಿ; ಇವನ ಪಿತಾಮಹನು ವೀರೇಂದ್ರನು, ತಂದೆ ಅಯ್ಯಣಭೂಪನು. “ಅಣ್ಣಾಜಿರಾಜೇಂದ್ರನು” ಎಂದು ಹೇಳಿಕೊಂಡಿರುವುದರಿಂದಲೂ ತಂದೆಯ ಹೆಸರಿನಿಂದಲೂ ಈತನು ಆವುದೋ ಒಂದು ರಾಜವಂಶಕ್ಕೆ ಸೇರಿದವನೆಂದು ತೋರುತ್ತದೆ. ಶಂಕರೇಶನ ಅನುಗ್ರಹದಿಂದಲೂ ಆಜ್ಞೆಯಿಂದಲೂ ತನ್ನ ಗ್ರಂಥವನ್ನು ಬರೆದುದಾಗಿ ಹೇಳುತ್ತಾನೆ. ಈ ಶಂಕರೇಶನು ಆರೋ ತಿಳಿ ಯದು, ಪೂರ್ವಕವಿಗಳ ಗೋಷ್ಠಿಯಲ್ಲಿ ಇವನು ಪಾಲ್ಕುರಿಕೆ ಸೋಮನ ಜತೆಯಲ್ಲಿ ಹೇಳಿರುವ ಮಲುಹಣನು ಗುಬ್ಬಿಯ ಮಲ್ಲಣಾರಯ (1530) ನಾಗಿ ರಬಹುದೆಂದು ತೋರುತ್ತದೆ. ಹಾಗಿದ್ದ ಪಕ್ಷದಲ್ಲಿ ಈತನ ಕಾಲವು ಸು ಮಾರು 1600 ಆಗಬಹುದು, ಪೂರ್ವಕವಿಗಳನ್ನು ಈ ಪದ್ಯಗಳಲ್ಲಿ ಸ್ಮರಿಸಿದ್ದಾನೆಕೆಳಯಪದ್ಮರಸ ಹಂಪೆಯ ಹರೀಶ್ವರನು ಪಾ | ಲ್ಕು ಅ'ಕೆಸೋಮಾರಾಧ್ಯ ಮಲುಹಣನು ಮೊದಲಾಗಿ | ಹರನ ಕವಿತಾಸ್ತೋತ್ರಸೂತ್ರದಿಂ ನಟಿಸಿಯಾನಂದಿಸಿದ ಶಂಕರೇಶ | ಹರುಷದಿಂದೆನಗೆ ತಮ್ಮ ಯ ಕರುಣಶರಧಿಯೊಳು | ತೆರೆ ಮಸಗೆ ಸಿಡಿದ ಸೀಕರಬಿಂದುವಂಳದಂ | ಧರಿಸೆನಲು ಶಿರದೊಳಾಂತಾನದಳಿ ಮಹಿಮೆಯಿಂದೀಕೃತಿಯನೊಲಿದು ಪೇ• !! ಬಾಣ ಮಾಯೊರ ಭವಭೂತಿ ಶ್ರೀಹರ್ಷ ಕ | ಟ್ಟಾಣಿ ಕವಿಯಾಧನಂಜಯ ದಂಡಿ ಶಾರದೆಯ | ಪ್ರಾಣಕವಿ ಕಾಳಿದಾಸನು ರುದ್ರಭಟ್ಟನಗ್ಗಳ ನೇಮಿಚಂದ್ರ ಕಂತಿ| ಕ್ಟೋಣಿಯೊಳು ಕವಿರಾಜಮಕುಟಮಣಿ ಶ್ರೀನಾಧ || ಮಾಣದಿವರೆಲ್ಲರಂ ಬಲದಂದು ಕೃತಿವೇವಿ - ತನ್ನ ಗುಣಾದಿಗಳನ್ನು ಈ ಪದ್ಯಗಳಲ್ಲಿ ಹೇಳಿಕೊಂಡಿದ್ದಾನೆ. ಧೀರನತ್ಯಧಿಕವಿತರಣಗುಣದಿ ಮೆರೆವ ಮಂ | ದಾರ ಮದವತಿಯರ ಮುಖೇಂದುಮಂಡಲದಮೃತ | ಚಾರುಕಿರಣದ ರುಚಿಯ ಸೇವಿಪ ಚಕೋರ ಲಲನಾಜನಕಪೋಲ ಯುಗದಿ || ಸಾರತರಮಾದ ಮೃಗಮದದ ಮಕರಿಕೆ ಚಿತ್ರ | ೨