ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಚಾಮರಾಜ, 358 ಜಡತೆ ಜಲದಿಯಹಿತತ್ವ ಗಾರುಡದಲ್ಲಿ | ಹಿಡಿತ ಚಾಮರಛತ್ರದಲ್ಲಿ | ಮಡಿ ವಸ್ತ್ರದಿ ಧರ್ಮಚ್ಯುತಿ ಬಾಣದಿ.... | ನಡುವೆಯೇನಿಲ್ಲ ನಾಡೊಳಗೆ|| 2 ಹಾಡುಗಳು ಇವು ಗುಮ್ಮಟೇಶ್ವರ, ತ್ಯಾಗದಬ್ರಹ್ಮ, ಬೆಟ್ಟದಬ್ರಹ್ಮ, ಕಂಬದ ಯಕ್ಷಿ ಇವರುಗಳ ಸ್ತುತಿರೂಪವಾಗಿವೆ. ಇವುಗಳಲ್ಲಿ ಒಂದನ್ನು ಉದ್ಧರಿಸಿ ಬರೆಯುತ್ತೇವೆ ಪಲ್ಲವಿ|| ಎಂದೆಂದೂ ಪಾಲಿಸೋ ನೀಯೆನ್ನ | ತಂದೆ ಗುಮ್ಮಟನಾಧ ತ್ರಿಜಗವಿನೂತ|| ಮನುಕುಲಾಂಬುಜಮಿತ್ರ ಮಂಗಲವೆತ್ತ ಸುಗಾತ್ರ | ಮುನಿಜನವನವಸಂತ | ಚಂದನಸಿತಘನ | ಇಂದುವಿಂದ ಶಾಂತ ಸಂಸಾರವನಧಿಗದ ನಿಶ್ಚಿಂತ |1|| ದುರಿತಗೋಧೂಮಘರಟ್ಟ ದುರ್ಮಾರ್ಗತ್ರಿಪುರಸುಟ್ಟ j ಪರಮಭವ್ಯರಬಂಧು | ಶಾಶ್ವತಸೌಖ್ಯ ವರವೀವಕರುಣಾಸಿಂಧು | ನಿರ್ಮಲಬೋಧಧರನೆಸುಮನಸೆಂದು |2|| ಭೂತಳಕುನ್ನತವೆಂದು | ಬೆಳ್ಗುಳಾದ್ರಿಯಲಿ ನಿಂದು | ? ಸಂಶಯಜಸವತೊಟ್ಟಾ | ಪಂಚಬಾಣನಿಗೋತುಮತಿಯನೆಕೊಟ್ಟಾ | ಚಕ್ರಿಯಧರೆಖ್ಯಾತಿಸೆಗೆಲಿದದಿಟ್ಟಾ ||3| ಚಾಮರಾಜ, 1617-1637 ಈತನು ವಾಲ್ಮೀಕಿರಾಮಾಯಣಟೀಕೆಯನ್ನೂ ಬ್ರಹ್ಮೊತ್ತರಖಂಡ ಟೀಕೆಯನ್ನೂ ಬರೆದಿದ್ದಾನೆ. ಇವನು ಮೈಸೂರುರಾಜರಲ್ಲಿ ಒಬ್ಬನು, ಗ್ರಂ ಧಾಂತ್ಯಗದ್ಯಗಳಲ್ಲಿ “ ನರಸರಾಜಗರ್ಭದುಗ್ದ ಸಿಂಧುಸುಧಾಕರ, ನರಸರಾಜ ಭೂವರತನೂಭವ” ಎಂದು ಹೇಳಿಕೊಂಡಿರುವುದರಿಂದ ಈತನು 16I7ರಿಂದ 1637 ರ ವರೆಗೆ ಆಳಿದ ಚಾಮರಾಜನೆಂದು ವ್ಯಕ್ತವಾಗುತ್ತದೆ. ಈತನ ತಂದೆಯಾದ ನರಸರಾಜನು ರಾಜನೃಪನ ಮಗನು, ರಾಮಾಯಣಟೀಕೆ ಯಲ್ಲಿ “ತಿಮ್ಮರಾಜತನೂಜ” ಎಂಬ ವಿಶೇಷಣವು ನರಸರಾಜನಿಗೆ ಉಕ್ತ ವಾಗಿರುವುದನ್ನು ನೋಡಿದರೆ ರಾಜನೃಪನ ನಿಜವಾದ ಹೆಸರು ತಿಮ್ಮರಾಜ ಎಂದು ತೋರುತ್ತದೆ. ಆದರೆ ನಮಗೆ ತಿಳಿದಮಟ್ಟಿಗೆ ಶಾಸನಗಳಲ್ಲಿಯಾ ಗಲಿ ಗ್ರಂಥಗಳಲ್ಲಿಯಾಗಲಿ ಈ ಹೆಸರು ಹೇಳಿಲ್ಲ. ಈ ಕವಿಗೆ ಬಿರುದೆಂತೆಂಬರಗಂಡ, ಗಜಬೇಂಟೆಕಾರ, ಚೌಷಷ್ಟಿ, ಕಲಾಪ್ರವೀಣ ಎಂಬ ಬಿರುದುಗಳು ಇದ್ದಂತೆ ತಿಳಿಯುತ್ತದೆ.