ಈ ಪುಟವನ್ನು ಪರಿಶೀಲಿಸಲಾಗಿದೆ

360

               ಕರ್ಣಾಟಕ ಕವಿಚರಿತೆ.
                                [17ನೆಯ

ಇವನ ಗ್ರಂಥಗಳಲ್ಲಿ

        I  ವಾಲ್ಮೀಕಿರಾಮಾಯಣಟೀಕೆ                    
ಇದು ವಾಲ್ಮೀಕಿರಾಮಾಯಣಕ್ಕೆ ಗದ್ಯರೂಪವಾದ ಕನ್ನಡವ್ಯಾಖ್ಯಾನ. 

ಇದಕ್ಕೆ ಚಾಮರಾಜೋಕ್ತಿವಿಲಾಸ ಎಂದು ಹೆಸರು. ಗ್ರಂಥಾದಿಯಲ್ಲಿ ವಿಷ್ವಕ್ಸೇನಸ್ತುತಿಯೂ ಗಣೇಶಸ್ತುತಿಯೂ ಇವೆ. ಬಳಿಕ ಕವಿ ಗ್ರಂಥವನ್ನು ಹೀಗೆ ಆರಂಭಿಸಿದ್ದಾನೆ_

      ಶ್ರೀಮದಶರಣ್ಯಶರಣ್ಯನಹ ಆರ್ತತ್ರಾಣಪರಾಯಣನಹ ಅಂಬುಜಾಕ್ಷಹ ಯೋಗಿಧ್ಯೇಯಪಾದಾರವಿಂದನಹ ಅವಾಬ್ಮಾನಸಗೋಚರನಹ  ಶ್ರೀಲಕ್ಷ್ಮೀಕುಚಕಲಶ ಕುಂಕುಮಾಂಕಿತವಕ್ಷಸ್ಥಲನಹ ಶ್ರೀಮನ್ನಾರಾಯಣನ ಶ್ರೀಚರಣಾರವಿಂದಂಗಳಲ್ಲಿ ನಿರತಿ ಶಯಭಕ್ತಿಯುಕ್ತನಾದ ವಾಲ್ಮೀಕಿಮುನೀಶ್ವರನಿಂದ ಪ್ರಣೀತವಾದ ಶ್ಲೋಕೈಕಶ್ರವ ಣತಾಮ್ಮಾತ್ರದಿಂದ ಸಮಸ್ತ ಕಲಿಕಲ್ಮ ಷಾಪನೋದನಪಟುತರಮಾದ ಧರ್ಮಧ೯ಕಾಮ ಮೋಕ್ಷಗಳೆಂಬ ಚತುರ್ವಿಧಪುರುಷಾಧ೯ ಸಾಧನಮಾದ ಪಂಚಮವೇದವೆನಿಸಿಕೊಳ್ಳುವ ಶ್ರೀಮದ್ರಾಮಾಯಣದಲ್ಲಿ ಆದಿಕಾಲವೃತ್ತಾಂತವದೆಂತೆನೆ.
   ಕಾಂಡಗಳ ಅಂತ್ಯದಲ್ಲಿ ಈ ಗದ್ಯವಿದೆ_
   ಇಂತು ಉತ್ತಮಕ್ಷತ್ರಿಯಕುಲೋದ್ಭವ ಬಿರುದೆಂತೆಂಬರಗಂಡ ಗಜಬೇಂಟೆಕಾರ ಸಮಸ್ತಶತ್ರುಸಂಘಜೀಮೂತಜಂಝಮಾರುತ ಪ್ರತ್ಯರ್ಧಿಸೃಧ್ವೀಪತಿವನದಾವಾನಲ ಸಮಸ್ತ ವಿದ್ವಜ್ವನಸಮುದಾಯಕಲ್ಪಭೂಜಾತ ಆಶ್ರಿತಜನಸುರಧೇನು ಕಾಮಿನೀಜನ ನೂತನಪಂಚಬಾಣ ಚೌಷಷ್ಟಿ ಕಲಾಪ್ರವೀಣ ಮಹಿಷಾಸುರಪುರವರಾಧೀಶ ಚಾಮರಾಜ ವಂಶೋದ್ಧಾರಕ ತಿಮ್ಮರಾಜತನೂಜನರಸರಾಜಗರ್ಭದುಗ್ಧ ಸಿಂಧುಸುಧಾಕರ ಶ್ರೀಲಕ್ಷ್ಮೀಕಾಂತಪಾದಾರವಿಂದದ್ವಂದ್ವ ನಿಷ್ಯಂದಾನಂದಮಕರಂದಬಿಂದುಸಂದೋಹಾ ಸ್ವಾದನನಿರ್ಮಲೀಕೃತಾಂತಃಕರಣ ತ್ರಿಣಯಣೇಶ್ವರಸದದ್ಭಕ್ತಿಯುಕ್ತ ಮಹಾಬಲಾಚಲ ವಾಸಶ್ರೀಚಾಮುಂಡಿಕಾಂಬಾಸದ್ಭಕ್ತಿಮಂಡಿತರಾದ ಶ್ರೀಚಾಮರಾಜಒಡೆಯರವರಿಂದ ಲೋಕೋಪಕಾರಾರ್ಧವಾಗಿ ಬುಧಜನಸಮ್ಮತಿಯಿಂದ ಕರ್ಣಾಟಕಭಾಷಾವಚನರಚನೆಯಾದ ಶ್ರೀಚಾಮರಾಜೋಕ್ತಿ ವಿಲಾಸವೆಂಬ ಕನ್ನಡರಾಮಾಯಣದಲ್ಲಿ.
      ಗ್ರಂಥಾರಂಭದಲ್ಲಿರುವ ಕೆಲವು ಶ್ಲೋಕಗಳಿಂದ ಈ ಟೀಕೆಯನ್ನು

I ವಾಲ್ಮೀಕಿಮುನಿನಾ ಪ್ರೋಕ್ತಶ್ರೀಮದ್ರಾಮಾಯಣಸ್ಯ ಚ |

 ಕರ್ಣಾಟಭಾಷಯಾ ಟೇಕಾಂ ಕಾರಯಿರ್ಷ್ಯ ನೃವೋತ್ತಮಃ || 
 ಲೋಕಾನಾಮುಪಕಾರಾಯ ವಿರೂಪಾಕ್ಷೇಣ ಧೀಮತಾ |    
 ವಿದುಷಾ ಕೃತರ್ವಾ ಸಮ್ಯಕ್ ಪ್ರತಿಜ್ಞಾಂ ಚಾಮಭೂಪತಿಃ ||