368 ಕರ್ಣಾಟಕ ಕವಿಚರಿತೆ. [17 ನೆಯ ಚಿಕಿತ್ಸೆ ಮುಂತಾದ ವಿಷಯಗಳು ಹೇಳಿವೆ. ಈ ಗ್ರಂಥವು ಲಾಲಿತ್ಯಾದಿಗುಣ ಗಳಿಂದ ಕೂಡಿ ಚಾಮರಾಜನ ಯಶೋರೂಪವಾಗಿದೆ ಎಂದು ಕವಿ ಇಪದ್ಯ ಗಳಲ್ಲಿ ಹೇಳುತ್ತಾನೆ-- ಲೀಲಾಮಾತ್ರದೆ ರಾಮಚಂದ್ರಕವಿ ನಾನೀವಾಜಿಶಾಸ್ನಾರ್ಧಮಂ | ಮೇಲಾರೈದು ಸುವಾಕ್ಯರೂಪಮನಿರಲ್ಯಾ ಚಂದ್ರತಾರಾಂಬರಂ || ಲಾಲಿತ್ಯಾನ್ವಿತಸುಪ್ರಯೋಗರಚನಾವ್ಯಾಪಾರಮಾಗೀಜಗ | ಜ್ಞಾಲಕ್ಕೆ ಹಿತಾರ್ಧಮಾಗುಸಿರಿದೆ ಕರ್ಣಾಟಭಾಷೋಕ್ತಿಯಿಂ || ಮೈ ಶೂರಾಧಿಪಚಾಮರಾಜನ ಯಶಸ್ಸ೦ಪೂರ್ಣಚಂದ್ರ ನೆಗ | ಸಾಕ್ಷಾಯಶಾಸ್ತ್ರರೂಪಮನೆ ತಾಳೆಲ್ಲಾಗಳುಂ ಭೂಮಿಯೊಳ್ | ದೇಶಾಧೀಶಚಕೋರಜಾಲದ ಮನಕ್ಕಾನಂದನಂ ಕೊಟ್ಟು ಸ | ಶಾಲಿಪ್ರಕರಕ್ಕೆ ಹರ್ಷಚಯಮಂ ಪ್ರಖ್ಯಾತವಾಗೊಪ್ಪುಗುಂ || ಅಧ್ಯಾಯಗಳ ಅಂತ್ಯದಲ್ಲಿ ಈಗದ್ಯವಿದೆ-- ಇದು ಸಮಸ್ತ ಜಗದ್ವಿಖ್ಯಾತಮಪ್ಪ ಬಿರುದೆಂತೆಂಬರಗಂಡ ಕಟಾರಿಯಸಾಳ್ವ ವೈರಿಗಜಗಂಡಭೇರುಂಡ ಚಾಮುಂಡೀ ವರಪ್ರಸಾದನಾದ ಮೈಶೂರನರಸರಾಜೇಂದ್ರನಂ ದನಚಾಮರಾಜಭೋವರವೋತ್ಸಾಹಿತನಾದ ರಾಮಚಂದ್ರಕವಿವಿರಚಿತ ಮಪ್ಪ ಅಶ್ವ ಶಾಸ್ತ್ರದೊಳ್. ಈ ಗ್ರಂಥದಿಂದ ಸ್ವಲ್ಪ ಭಾಗವನ್ನು ತೆಗೆದು ಬರೆಯುತ್ತೇವೆ-- ಐದುವರ್ಷದ ಕುದುರೆಗೆ ಪರಾಕ್ರಮವು ಮಣಿತವು ಸಾಧಿಸಿ ತಿದ್ದಿದ ಕುಣಿ ತವು ಕಾಲ ಬೇಗವು ಉಂಟಹುದು. 5 ಧಾರೆಗಳಿಂದ ತಿದ್ದುವಡೆ ಇದು 5 ಧಾರೆ ಗಳು ಆವುವೆಂದಡೆ -ಆಸ್ಕಂದಿತ, ದೌಲತಕ, ರೇಚಿತ, ವಲ್ಗಿತ, ಪ್ಲುತ್. ಕುದುರೆಯ ಕೊರಳನು ಎಡಬಲಕೆ ತಿರುಗಿಸಿ ನಡೆಯಿಸುವುದು ಅಸ್ಕಂದಿತವೆನಿಸಿಕೊಂಬುದು. ಮೇಲಣ ರಾವುತನ ಭಾರವನು ಸಡ್ಡೆ ಮಾಡದೆ ಇದ್ದ ಸತ್ವದಿಂದ ಹಾಲತ ನಡೆಯಲದು ರೌರಿತ ಕವೆನಿಸಿಕೊಂಬುದು ನೆಟ್ಟಗೆ ನಿಲ್ಲದೆ ಓಡುವುದು ರೇಚಿತವೆನಿಸಿಕೊಂಬುದು ಅಡ್ಡಲಾಗಿ ಮಣಿತವ ತೋರಿಸುವುದು ವಲ್ಲಿ ತವೆನಿಸಿಕೊಂಬುದು, ಕುಪ್ಪಳಿಸಿ ಕುಪ್ಪಳಿಸಿ ಹಾಕ್ ಯೋಡುವುದು ಪ್ಲುತವೆನಿಸಿಕೊಂಬುದು.
**** ಪದ್ಮಣಪಂಡಿತ. 1627
ಈತನು ಹಯಸಾರಸಮುಚ್ಚಯವನ್ನು ಬರೆದಿದ್ದಾನೆ. ಇವನು ಜೈನಕವಿ; ಇವನ ತಂದೆ ಕನಕಪುರದ ದೇವರಸನು; ತಾಯಿ ಗುಮ್ಮಂಬೆ.