ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ సూర్య 369

ಅಧ್ಯಾಯಾ೦ತ್ಯಗದ್ಯಗಳಿಂದ ಈ ಗ್ರಂಥವು ಮೈಸೂರು ದೊರೆಯಾದ ಚಾಮರಾಜನ (1617-1637) ಆಜ್ಞಾನುಸಾರವಾಗಿ ಹುಟ್ಟಿದಂತೆಯೂ ಈ ಕಾರಣದಿಂದ ಇದಕ್ಕೆ ಚಾಮರಾಜೀಯ ಎಂಬ ಹೆಸರು ಬಂದಂತೆಯೂ ತಿಳಿಯುತ್ತದೆ. ಈ ಗ್ರಂಥವನ್ನು ಕವಿ ಶಕ 1549 (ನವಜಲಧಿಬಾಣಚಂದ್ರ) ಪ್ರಭವದಲ್ಲಿ-ಎಂದರೆ 1627 ರಲ್ಲಿ-ಮುಗಿಸಿದಂತೆಹೇಳುತ್ತಾನೆ. ತನ್ನ ಗುಣಾದಿಗಳನ್ನು ಈ ಪದ್ಯಗಳಲ್ಲಿ ಹೇಳಿಕೊಂಡಿದ್ದಾನೆ- ವರವಿದ್ವಜ್ಜನಮಂಡನ​| ಕರ ಪದ್ಮಣಪಂಡಿತಾರಯ​ ವೈದ್ಯಸುವಂಶಾಂ | ಒರಸುರಯ​ರನಶ್ವಶಾಸ್ತ್ರಮ | ನೊರೆದಂ ಕರ್ಣಾಟಕಂದಪದ್ಯಗಳಿಂದಂ || ಆದೇಪರಸಸುತಂ ಸ್ಯಾ | ದ್ವಾದಮತಾಚಾರನಮ​ಲಗುಣನಿಧಿಯಾಯು ! ವೇದಬುಧನಮಲ​ಜಿನಪತಿ | ಪಾದಾರ್ಚಾಸಕ್ತ ಪದ್ಮ​ಣಂ ಭಿಷಗಗ್ರ್ಯ್ಂ | ಇವನ ಗ್ರಂಧ

                               ಹಯಸಾರಸಮುಚ್ಚಯ 

ಇದು ಕಂದದಲ್ಲಿ ಬರೆದಿದೆ ; ಅಧ್ಯಾಯ 20, ಗ್ರಂಧಸಂಖ್ಯೆ 8000 ಇದರಲ್ಲಿ ಕುದುರೆಗಳ ಆಕೃತಿ, ಲಿಂಗ, ಭೇಷ​ಜ ಇವು ನಿರೂಪಿಸಲ್ಪಟ್ಟಿವೆ, ಗ್ರಂಧಾವತಾರದಲ್ಲಿ ಜಿನಸ್ತುತಿ ಇದೆ. ಅಧ್ಯಾಯಾಂತ್ಯದಲ್ಲಿ ಈ ಗದ್ಯವಿದೆ.. ಇದು ಶ್ರೀಮದ್ರಾಜಾಧಿರಾಜ ರಾಜಾಕುಲತಿಲಕ ರಾಜಶಿಖಾಮಣಿ ಶ್ರೀಮಚ್ಚಾ ಮರಾಜಭೂಪಾಲಕಾರಿತ ಹಯಸಾರಸಮುಚ್ಚಯಾಭಿಧಾನ ಚಾಮರಾಜೇಯ ಗ್ರಂಧಮೆಂಬ ಹಯಶಾಸ್ತ್ರದೊಳ್. ಈ ಗ್ರಂಥದಿಂದ ಒಂದು ಪದ್ಯವನ್ನು ತೆಗೆದು ಬರೆಯುತ್ತೇವೆ-

                                       ಜಿನಸ್ತುತಿ 

ಶ್ರೀಮದ್ಗೀರ್ವಾಣಚಕ್ರೇಶ್ವರಮಕುಟತಟಪ್ರೋಲ್ಲ​​ಸತ್ಪದ್ಮರಾಗೋ | ದ್ದಾಮವ್ರೋದ್ಭಾಸಮಾನಾರುಣಚರಣಸರೋಜಂ ಸುನಾಸೀರವೈರಿ | ಸ್ತೋಮಾಬ್ದಕ್ರೂರಜಂಝನಿಲನಗಣಿತಸದ್ಬಕ್ತವಾರಾಶಿಚಂದ್ರಂ || ಶ್ಯಾಮಾಂಗಜ್ಯೋತಿ ಲಕ್ಷ್ಮೀರಮಣನೆಮಗೆ ಸಂಸಿದ್ಧಿಯಂ ಮಾಣಿ, ದೇವಂ |

                                     ಸೂರ್ ಸು 1640 

ಇವನು ಕವಿಕಂಠಹಾರವನ್ನು ಬರೆದಿದ್ದಾನೆ. ಈತನು ಬ್ರಾಹ್ಮಣ ಕ​ವಿ ; ಸೂರ್ಯಶಕ್ತನಾದ ಕರಣಿಕ ತಿಮ್ಮ​ಮಂತ್ರಿಯ ಮಗನು. ಬೇಲೂರು