ಈ ಪುಟವನ್ನು ಪರಿಶೀಲಿಸಲಾಗಿಲ್ಲ.

372 ಕರ್ಣಾಟಕ ಕವಿಚರಿತೆ. [17 ನೆಯ ಆ ಪಾಂಡ್ಯರಾಜನ ವಂಶದಲ್ಲಿ ವೀರನರಸಿಂಹಬಂಗರಾಜೇಂದ್ರನು ಹುಟ್ಟಿದನು; ಅವನ ಹೆಂಡತಿ ಗುಮ್ಮಟಾಂಬೆ; ಮಗ ಇಮ್ಮಡಿಭೈರವರಾಯ, ಇವನ ಹೆಂಡತಿ ಮಲ್ಲಿ ದೇವಿ; ಮಕ್ಕಳು ಭುವನೈಕವಿರೆ ಪಾಂಡ್ಯೇಂದ್ರ, ಚಂದ್ರಶೇಖರ, ಅರಿರಾಯರಗಂಡರ ದಾವಣಿ ಇಮ್ಮಡಿಭೈರವರಾಯ, ಪಟ್ಟಪೊಂಬುಚ್ಚ ಪುರವರಾಧೀಶ್ವರನಾದ ಈ ಇಮ್ಮಡಿ ಭೈರವರಾಯನು 1646ರಲ್ಲಿ ಗೊಮ್ಮಟೇಶ್ವರನಿಗೆ ಪುನಃ ಪ್ರತಿಷ್ಠೆ, ಪೂಜೆ, ಅಭಿಷೇಕ ಮುಂತಾದುವನ್ನು ಮಾಡಿಸಿದನು

ಗ್ರಂಥಾವತಾರದಲ್ಲಿ ನೇಮಿಜಿನಸ್ತುತಿ ಇದೆ. ಬಳಿಕ ಕವಿ ಬಾಹು ಬಲಿ, ಚಂದ್ರನಾಥ, ನಿದ್ಧಾದಿಗಳು, ಯಕ್ಷಯಕ್ಷಿಯರು, ಬೆಟ್ಟದಬ್ರಹ್ಮ, ಭೈರವರಾಯನ ಕುಲದೇವತೆಯಾದ ಪೊಂಬುಚ್ಚದಪದ್ಮ್ಂಬೆ, ಸರಸ್ವತಿ ಇವರುಗಳನ್ನು ಹೊಗಳಿ ಮಹೇಂದ್ರಕೀರ್ತಿಯಿಂದ ಶ್ರುತಸಾಗರನವರೆಗೆ ಗುರುಗಳನ್ನು ಸ್ಮರಿಸಿದ್ದಾನೆ. ಸಂಧಿಗಳ ಕೊನೆಯಲ್ಲಿ - ಇದು ಶ್ರುತಸಾಗರಮುನಿರಾಯನ ಶಿಷ್ಯ | ಚದುರಚಂದ್ರಮ ವಿರಚಿಸಿದ |

ಮದನಾರಿಗುಮ್ಮಟಿಚರಿತೆಯೊಳ್ | ಎಂದಿದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ ದುರ್ಜನರು

ಗೋವಿನ ಮೊಲೆಯ ಪಾಲನು ಬಿಟ್ಟು ರಕ್ತವ | ಸೇವಿಪ ಜಿಗುಳೆಗಳಂತೆ | ಭಾವರಸವ ಬಿಟ್ಟು ದೋಷವನಯಿಸುವ | ಗಾವಿಲರಿಗೆ ಗತಿಯುಂಟೇ |

ತೆಂಗು ತಲೆಯೊಳಮೃತಕುಂಭಗಳ ವೊತ್ತು ತಮ್ಮನು | ಸಲಹಿದವರ ಸಂತತಿಯ | ಸಲಹಬೇಕೆಂದು ಸಜ್ಜನಕುಲವನು ಪೋಲ್ತಾ | ನೆಲದೊಳು ತೆಂಗುಗಳಿಹುವು |! ಊಟ ತುಪ್ಪದೊಳಗೆ ಹದವರಿದು ಕಾಳಿಸಿ ಕಮ್ಮ | ನಪ್ಪ ಹಪ್ಪಳಸಂಡಗೆಗಳ | ಒಪ್ಪದೊಳಗೆಯಿಕ್ಕಿ ಪಳಿದ್ಯವ ಒಡಿಸಲು | ಚಪ್ಪರಿದುಣುತಿರ್ದರಾಗ ||

_1 ಮಹೇಂದ್ರಕೀರ್ತಿ, ಪನಸೋಗೆಯ ಸಿಂಹಾಸನಾಧೀಶ ದೇವಕೀರ್ತಿ, ಶಿಷ್ಯ ಮಲಧಾರಿಲಲಿತಕೀರ್ತಿ, ತದ್ವಂಶಜ ಅಭಿನವಲಲಿತಕೀರ್ತಿ, ವಿದ್ಯಾನಂದ, ಶ್ರುತ ಸಾಗರ, ಕಾಣೂರ್ಗಣದ ಭಾನುಕೀರ್ತಿ, ಬಲ್ಲಾಳರಾಯಜೀವರಕ್ಷಕ ಚಾರುಕೀರ್ತಿ, ವೀರಸೇನ, ಲಲಿತವರ್ಣಿ