ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಭಾರತಿನಂಜ 373 ನರ್ತಕಿ ಮೊಗದೊಳು ಹಾವ ವಿಲಾಸ ನೇತ್ರಂಗಳೊ | ಳೊಗೆದುದು ಭಾವ ಚಿತ್ರ ದೊಳು | ಸೊಗಸುವ ಭ್ರೂಮಧ್ಯದೊಳಗೆ ವಿಭ್ರಮಗಳು | ಮಿಗೆ ರಂಜಿಸಿತು ನರ್ತಕಿಯಾ | ಗೊಮ್ಮಟೇಶ್ವರ ಕುರುಳ್ಗಳು ಮನಸಿಜಮೃಗವ ಪಿಡಿಯಲಿಕ್ಕಿ | ದುರುಳ್ಗಳೆಂಬಂತಾಜಿನನ | ಸಿರದೊಳಗೊಪ್ಪಿದುನಾಸಿರಿಮೊಗದಾ | ವರೆಗೆರಮವ ತುಂಬಿಯಂತೆ ||


ಭಾರತಿ ನಂಜ, 1648 ಇವನು ಕಂರೀರವನರಸರಾಜವಿಜಯವನ್ನು ಬರೆದಿದ್ದಾನೆ. ಈ ಗ್ರಂಥದ ಒಂದು ಪ್ರತಿಯ ಕೊನೆಯಲ್ಲಿರುವ ಸ್ವಸ್ತಿಶ್ರೀವಿಜಯಾಭ್ಯುದಯ ಶಾಲಿವಾಹನಶಕ1570ಸಂದ ಸರ್ವಧಾರಿಸಂವತ್ಸ ರದ ಜ್ಯೇಷ್ಠ ಶುದ್ಧ 11 ಚಂದ್ರವಾರದಲ್ಲಿ ಶ್ರೀಮನ್ಮಹಾದೇವದೇವೋತ್ತ ಮನಾದೆ ಶ್ರೀ ಲಕ್ಷ್ಮಿನರಸಿಂಹನು ಕಂಠೀರವನರಸರಾಜೇಂದ್ರನಿಗೆ ಆಯುರಾರೋಗ್ಯೈ ಶ್ವರಾಭಿ ವೃದ್ಧಿ ಅಷ್ಟ ಪುತ್ರ ಬಹುಧನವನು ಕೊಟ್ಟು ರಕ್ಷಿಸಲಿ ಎಂದು ರಂಗನಾಧಸ್ವಾಮಿಯ ಕೃಪೆಯಿಂದ ಶ್ರೀನಿವಾಸಪಂಡಿತರ ಮಗ ಗೋವಿಂದವೈದ್ಯನು ಕಂರೀರವವಿಜಯವನು ವಿರಚಿಸಿ ಆಚಂದ್ರಾರ್ಕ ಪರಿಯಂತ ಭೂಮಿಯೊಳಿರಲಿ ಎಂದು ಭಾರತಿನಂಜನ ಮುಖ ವಾಗಿ ವಾಚಿಸಿ ರಾಜಾಸ್ಥಾನದಲಿ ವಿಸ್ತಾರಪಡಿಸಿದುದು. ಎಂಬ ಗದ್ಯದಿಂದ ಗ್ರಂಧವು 1648ರಲ್ಲಿ ಹುಟ್ಟತೆಂದೂ ಗ್ರಂಧಕರ್ತನು ಗೋವಿಂದವೈದ್ಯನೆಂದೂ ವ್ಯಕ್ತವಾಗುತ್ತದೆ. ಮೈಸೂರುರಾಜರಲ್ಲಿ ಪ್ರಸಿ ದ್ಧನಾದ ಕಂಠೀರವನರಸರಾಜನ (1638-1659 ) ದಿಗ್ವಿಜಯವು ಈ ಗ್ರಂಥದಲ್ಲಿ ವರ್ಣಿತವಾಗಿದೆ. ದಳವಾಯಿ ನಂಜರಾಜೇಂದ್ರನು “ತನ್ನೊಡೆ ಯನ ಶೌರ್ಯಾದೇರುಗೆಯ” ಚರಿತೆಯಾಗಿ ರಚಿಸು ಎಂದು ಹೇಳಲು ಅವನ ಇಷ್ವಾನುಸಾರವಾಗಿ ಈ ಗ್ರಂಧವನ್ನು ರಚಿಸಿದಂತೆ ಕವಿ ಹೇಳುತ್ತಾನೆ; « ಛಂದಸ್ಸು ಗಣ ಲಕ್ಷ್ಯಲಕ್ಷಣಗಳ ಮುದದಿಂದ ತಿಳಿದು ಇಂದುಧರನ ಕೃಪೆಯಲಿ ಪೇರುದೆ” ಎನ್ನುತ್ತಾನೆ. ಪೂರ್ವಕವಿಗಳಲ್ಲಿ ವಾಲ್ಮೀಕಿವ್ಯಾಸರನ್ನು ಸ್ಮರಿಸಿದ್ದಾನೆ. ಇವನ ಗ್ರಂಥ