389 ಶತದಾನ] ಸಹಜಾನಂದ ಕನ್ನಡ ಎರಡು ಭಾಷೆಗಳಲ್ಲಿಯೂ ದೊಡ್ಡ ಕವಿಯಾಗಿದ್ದಂತ ತಿಳಿಯು ತದೆ, ಕನ್ನಡದಲ್ಲಿ ಅವ ಗ್ರಂಥಗಳನ್ನು ಬರೆದಿದ್ದಾನೆಯೋ ತಿಳಿಯದು' ರಾಚವಟ್ಟಿ ಯಾರಾಧ್ಯ, ಸು 1650. ಈತನನ್ನು ನಿದ್ದನಂಜೇಶನು ( ಸು. 1650) ಕರ್ಣಾಟಕಕವಿತ್ವ ಕೋವಿದಎಂದೂ ಇವನ ಕೃಪೆಯಿಂದ ತನ್ನ ರಾಘವಾಂಕಚಾರಿತ್ರವು ಪೂರ್ತಿ ಯಾಯಿತೆಂದೂ ಈ ಪದ್ಯಭಾಗದಲ್ಲಿ ಹೇಳುತ್ತಾನೆ ಕರ್ನಾಟಕಕವಿತ್ವ ಕೋವಿದ ಪಂಚವಣ್ಣಗೆ ರು ಸಿದ್ದ ನಂಜೇಶಾಂಘ್ರಕಮಲ ಮಧುಪ ರಾಚವಟ್ಟಿ ಯಾರಾದ್ಧನ ಕೃಪೆಯಿಂ ಗ್ರಂಧ ಪೂರ್ಣವಾಯಿತು. ಈತನೂ ನಿದ್ದನಂಜೇಶನ ಶಿಷ್ಯನೆಂದು ಇದರಿಂದ ತಿಳಿಯುತ್ತದೆ, ಆವ ಗ್ರಂಥವನ್ನು ಬರೆದಿರಬಹುದೋ ತಿಳಿಯದು, ಸಹಜಾನಂದ ಸು. 1650. ಇತನು ಭಕ್ತಿರಸಾಯನವನ್ನು ಬರೆದಿದ್ದಾನೆ, ಇವನು ಬ್ರಾಹ್ಮಣ ಕವಿ. ಇವನ ಗುರು ಪರಮಹಂಸಪರಿವ್ರಾಜಕಾಚಾರ ಸಬ್ಸಿನಾನಂದ ಅನುಭವಾಮೃತವನ್ನು ಬರೆದ ರಂಗನಾಥನ ಗುರುವಾದ ಸಹಜಾನಂದನು ಇವನೇ ಎಂದು ತೋರುತ್ತದೆ. ಈ ಸಚ್ಚಿದಾನಂದನು ಶೃಂಗೇರಿಯಲ್ಲಿ 1622 ರಿಂದ 166 3 ರವರೆಗೆ ಸ್ವಾಮಿಯಾಗಿದ್ದ ಸಚ್ಚಿದಾನಂದಭಾರತಿಯಾ ಗಿದ್ದರೂ ಇರಬಹುದು. ಹೀಗಿದ್ದ ಪಕ್ಷದಲ್ಲಿ ಕವಿಯ ಕಾಲವು ಸುಮಾರು 3650 ಆಗಬಹುದು. ಇವನ ಗ್ರಂಥ ಭಕ್ತಿರಸಾಯನ ಇದು ಭಾಮಿನೀಪಟ್ಟದಿಯಲ್ಲಿ ಬರೆದಿದೆ; ಪದ್ಯ 108, ಪ್ರತಿಪದ್ಯವೂ “ರಕ್ಷಿಸು ಭುವನಸಂಕುಲವ” ಎಂದು ಮುಗಿಯುತ್ತದೆ. ಈ ಗ್ರಂಥವು ಶಿವಸ್ತುತಿರೂಪವಾಗಿಯೂ ನೀತಿಬೋಧಕವಾಗಿಯೂ ಇದೆ. ಗ್ರಂಥಾನ ಶಾರದಲ್ಲಿ ಶಿವಸ್ತುತಿ ಇದೆ, ಕೊನೆಯಲ್ಲಿ ಈಗದ್ಯವಿದೆ:-
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೭೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.