ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಶತಮಾನ) ಪರ್ವತಶಿವಯೋಗಿ, ೩೯೭
ಕೈಲಾಸ ತಳತಳಿಸುವೆಳಮುತ್ತುಗಳ ರಾಶಿಯೋ ಸಮು | ಜ್ಜಳಪ ಸತ್ಕುಲಿಶದೊಟ್ಟಿಲೋ ಮಾಱಿ ಮಂದೈಸಿ | ಬಳೆದು ಬೆಳ್ವಳಿಪ ಬೆಳ್ದಿಂಗಳೋಬ್ಬುಳಿಯೊ ಲೋಕದೊಳು ಪರ್ಬಿದ ಪುಣ್ಯದ | ಗೆಳಸೊ ಪೀಯೂಷ ಭಾಸ್ಕರರಶ್ಮಿಯಿಂದ ಕಾ | ಯದುಳುಗಟ್ಟಿಗೊಂಡ ಬಗೆಯೋ ಶಾರದಾಭ್ರಸಂ | ಕುಳವನುಱಿ ಮಿದಿದು ಮುದ್ದೆಯನಾಗಿಸಿದನಜನೆನಲ್-ಬೆಳ್ಳಿ ವೆಟ್ಟೆಸೆದುದು! ಸ್ತ್ರೀಯರು ರಸವೆ ರಂಜಿಸುವಂತೆ ಚೆಲ್ವೆ ಚೈತನ್ಯವಾಂ | ತೆಸೆವಂತೆ ಚೋದ್ಯಮೇ ಹೃದ್ಯಮಪ್ಪಂತೆ ಭಾ | ವಿಸಲಲಂಕಾರಮಾಕಾರಮಾಂತಂತೆ ಕಲರುತಿಯೆ ಮಾತಾಡುವಂತೆ || ಒಸೆದು ಚಾತುವ್ಯ ಮೇ ಚಾರುತನವೆತ್ತು ಶೋ | ಭಿಸುವಂತೆ ಕಲೆಯ ಕಾಲ್ಗಳೆದು ನಡೆವಂತೆ ಸವಿ | ಯೊಸೆದು ಸಾಲಿಡುವಂತೆ ವನಿತೆಯರ್ ನಡೆತಂದರುಪವನಕೆ ವಹಿಲದಿಂದ || ಪರ್ವತಶಿವಯೋಗಿ ಸು. 1650. ಈತನು ಬಸವೇಶ್ವರದೇವರ ವಚನಸಾರಾರ್ಥ, ಮುರಿಗೆಯ ಶಾಂತ ವೀರೇಶನ ಪ್ರಭುಲಿಂದಕಂದದ ಟೀಕೆ, ಕರಸ್ಥಲದ ನಾಗಲಿಂಗತ್ರಿಪದಿಯ ಟೀಕೆ, ಗುರುಸ್ತೋತ್ರತ್ರಿಪದಿಯ ಟೀಕೆ, ಚೆನ್ನಬಸವನ ಕರಣಹಸುಗೆಯ ಟೀಕೆ, ಚೆನ್ನಬಸವನ ಮಿಶ್ರಾ ರ್ಪಣದ ಟೀಕೆ ಇವುಗಳನ್ನು ಬರೆದಿದ್ದಾನೆ.
ಇವನು ವೀರಶೈವಕವಿ; 'ಸಿದ್ದಲಿಂಗಾಖ್ಯಸ್ವಾಮಿಗಳ ಜ್ಞಾನೋಪದೇಶ ಪಾತ್ರನು, ಬಾಲೇಂದುಪುರದ ಹರೀಶ್ವರಶಾಂತವೀರೇಶ್ವರಕರಸರಸಿಜಜಾ ತನು”ಎಂದು ಹೇಳಿಕೊಂಡಿದ್ದಾನೆ, ಮುರಿಗೆಯ ಶಾಂತವೀರೇಶನ(ಸು 1530) ಗ್ರಂಥಕ್ಕೆ ಇವನು ಟೀಕೆಯನ್ನು ಬರೆದಿರುವುದರಿಂದ ಅವನ ಕಾಲಕ್ಕಿಂತ ಈಚೆಯವನು ಎಂಬುದು ಸ್ಪಷ್ಟವಾಗಿದೆ. ಇವನ ಕಾಲವು ಸುಮಾರು 165೧ ಆಗಬಹುದೆಂದು ತೋರುತ್ತದೆ.
ಇವನ ಟೀಕೆಗಳಲ್ಲಿ