ಈ ಪುಟವನ್ನು ಪರಿಶೀಲಿಸಲಾಗಿಲ್ಲ.

398 ಕರ್ಣಾಟಕ ಕಚರಿತೆ [17 ನೆಯ ಮುರಿಗಯಶಾಂತವೀರೇಶನ ವ್ರಛುಲಿಂಗಕಂದದ ಟೀಕೆ. ಇದರಿಂದ ಒಂದುಕಂದದ ಟೀಕೆಯನ್ನು ತೆಗೆದು ಬರೆಯುತ್ತೇವೆ... ರವಿಗಂಗಾಪಿಂಗಲೆಯಾ | ಸವಿಗದಿರನ ಜಗುನೆಯಿಾಡೆಯನಲಕಸತಿಯ | ಗೃ೯ವನಿಸುಷುಮ್ನೆಯ ಸಂಗಮ | ದವಗಡದುರುಗಿರಿಯ ರಾಜಲಿಂಗಪ್ರಭುವೇ || ಟೀಕೆ| ರವಿ, ಸೂರ್ಯನು, ಗಂಗಾ, ಗಂಗೆಗಳು ಸಂಬಂಧವಾಗಿರ್ದಂಧ, ಪಿಂಗ ಲೆಯ, ಪಿಂಗಳಾನಾಡಿಯ, ಸವಿಗದಿರನ, ಚಂದ್ರನ ಸಂಬಂಧವಾದ, ಜಗುನೆಯು, ಯಮುನಾನದಿಗಳನುಳ್ಳ, ಈಡೆಯ, ಎಡದನಾಡಿಯ, ಅನಲ, ಅಗ್ನಿ, ಕಸತಿಯರ್ಗೆ, ಸರಸ್ವತಿಯೆಂಬ ನದಿಗಳಿಗೆ, ಅವನಿ, ಸ್ಥಾನವಾದಂಧ ಸುಷುಮ್ಮೆ ಯ, ಸುಷುಮ್ನಾ ನಾಡಿ ಗಳ, ಸಂಗಮದ, ಕೂಡಲಸಂಗಮವೆಂಬಂಧ, ಅವಗಡದ, ದುರ್ಘಟವಾದಂಧ. ಉರು, ವಿಶಾಲವಾದ, ಗಿರಿಯ, ಕೈಲಾಸಗಿರಿಯನುಳ್ಳ ಶೃಂಗಾಟಚಕ್ರದಲ್ಲಿ, ಭ್ರು ಕುಟಿ ಭ್ರೂಮಧ್ಯ ಕೂರ್ಚ ಶೃಂಗಾಟಕಚತುಃಪಧವೆಂದರೆ, ಪರಾಯನಾಮಂಗಳು. ರಾಜ, ಪ್ರಕಾಶಿಸುತಿರ್ದಂಧ, ಲಿಂಗಪ್ರಭುವೆ, ಎಲೆ ಇಸ್ಟ ಲಿಂಗದೇವನೆ, ಪಾಲಿಪುದು ರಕ್ಷಿಸುವುದು, ಕೊನೆಯಲ್ಲಿ ಈ ಗದ್ಯವಿದೆ ್ರೀಮತ್ಸರ್ವಜ್ಞತ್ವಾದಿಷಟ್ಛಕ್ತಿಷಡಂಗಸಂಯೋಗಷಟ್ಗ್ಥ ಲಬ್ರ ಹ್ಮಜ್ಞಾನಪಾ ರಂಗತ ವರ್ಣಾಶ್ರಮಾತೀತ ವೀರಮಾಹೇಶ್ವರಾಚಾರಯ್ ಸಿದ್ದಲಿಂಗಾಖ್ಯಸ್ವಾಮಿಗಳ ಜ್ಞಾ ನೋಪದೇಶಪಾತ್ರನಾದ ಬಾಲೇಂದುಪುರದ ಹರೀಶ್ವರಶಾಂತವೀರೇಶ್ವರಕರಸರಸಿಜಾತ ಶ್ರೀವೀರಮಾಹೇಶ್ವರಪರ್ವತಶಿವಯೋಗಿ ವಿರಚಿತಾ. ಕರಸ್ಥಲದ ನಾಗಲಿಂಗನದಿಯ ಟೀಕೆ | ಇದರಿಂದ ಒಂದು ತ್ರಿಪದಿಯ ಟೀಕೆಯನ್ನು ತೆಗೆದು ಬರೆಯುತ್ತೇವೆ. ಎಂಟುಮೊನೆಯಮೇಲೆಯೇಱಿ ದುರ್ಗವ ಮೂಱ | ದಾಂಟಿ ಅರಣ್ಯವ ಸುಡುತಲಿ | ದಾಂಟಿ ಅರಣ್ಯವ ಸುಡುತಲಿ ನರಿನಾಯ | ಬೆಂಟೆಯನಾಡಿ ಮೆಱಿದುದು || - ಟೀಕೆ|| ಎಂಟುಮೊನೆಯಮೇಲೆ, ಅಷ್ಟಾವರಣಾಷ್ಟಾವಧಾನದಲ್ಲಿ ಏಱಿ, ಕ್ರಿಯಾಜ್ಞಾನಾಚರಣೆಯಿಂದಾರೋಹಿಸಿ ದುರ್ಗವ ಮೂಱ ದಾಂಟಿ, ತನುತ್ರಯಮಲ ತ್ರಯಂಗಳೆಂಬ ಗಿರಿಗಡಹಗಳನು ದೀಕ್ಷಾ ತ್ರಯಂಗಳಿಂ ನಷ್ಟವಮಾಡಿ ಲಿಂಗತ್ರಯಂ ಗಳ ಸಂಬಂಧಿಸಿ ತ್ರಿವಿದಪದಾರ್ಧವನು ಗುರುಲಿಂಗಜಂಗಮಕ್ಕೆ ಸಮರ್ಪಿಸಿ ಪ್ರಸಾದ ತ್ರಯವ ಮಾಡಿ ಲಂಘಿಸಿ ಎಂಬುದರ್ಧ, ಅರಣ್ಯವ, ಭವಾಟವಿಯನು, ಸುಡುತಲಿ,