ಕರ್ಣಾಟಕ ಕವಿಚರಿತೆ [17 ನೆಯ ಊಟ ನೆಲ್ಲಿ ಯಕಾಯಿ ಮಾಗಳಿಬೇರೆಳದಪ್ಪ | ಬೆಲ್ಲವತ್ತದಕಾಯಿ ಕಳಲೆ | ಚಳ್ಳೆಯಕಾಯರ ಮಾದಲ ಪಾಪಟಿ | ಯೆಲ್ಲವನು ಬಡಿಸಿದರು | ವಿಷಯಾಸಕ್ತಿ ನರೆ ತುಂಬಿ ದಂತ ಸಡಿಲವಾಗಿ ತನು ತಗ್ಗಿ | ಹಿರಿಯರೆಂದೆನಿಸಿ ಕಾತರಿಸಿ | ತರುಣಿಯರೊಳು ಸುಖಪಡುವೆನೆಂಬುದು ಲೋಕ | ಪರಿಹಾಸಕಲ್ಲವೆ ದಿಟದಿ|| ಆದಿಯವ್ವ, ಸು, 1650 ಈತನು ಧನ್ಯಕುಮಾರಚರಿತೆಯನ್ನು ಬರೆದಿದ್ದಾನೆ. ಇವನು ಜೈನಕವಿ; ಇವನ ತಂದೆ ಶ್ರುತಯತಿಶಿಷ್ಯನಾದ ಮುನಿಯಣ್ಣ, ತಾಯಿ ದೇವರಸಿ, ಅಣ್ಣಂದಿರು ಬ್ರಹ್ಮ, ಚಂದ್ರ, ವಿಜಯಪ್ಪ, ತುಳುದೇಶದ ಗೇರುಸೊಪ್ಪೆಯ ದೊರೆ ಭೈರವರಾಯನ ಗುರುವಾದ ವೀರಸೇನನ ಆಜ್ಞಾ ನುಸಾರವಾಗಿ ಈ ಗ್ರಂಥವನ್ನು ಬರೆದಂತೆ ಹೇಳುತ್ತಾನೆ. ಚಂದ್ರಕೀರ್ತಿಯ ಮಗನಾದ ಪ್ರಭೇಂದುಮುನಿ ಕವಿಯ ಗುರುವಾಗಿದ್ದಂತೆ ತೋರುತ್ತದೆ. ಈ ಕವಿ ಸುಮಾರು 1650 ರಲ್ಲಿ ಇದ್ದಿರಬಹುದು. ಇವನ ಗ್ರಂಥ ಧನ್ಯಕುಮಾರಚರಿತೆ ಇದು ಸಾಂಗತ್ಯದಲ್ಲಿ ಬರೆದಿದೆ; ಒಟ್ಟು ಸುಮಾರು 410 ಪದ್ಯಗ ಳಿವೆ; ಅಲ್ಲಲ್ಲಿ ಕೆಲವು ವೃತ್ತಗಳೂ ಇವೆ. ಕಥೆಯ ಸಾರಾಂಶ-ಅವಂತಿಯನಾಡಿನ ಭೋಗಾವತಿಯೆಂಬ ಪುರವನ್ನು ಆಳುತ್ತಿದ್ದ ಪಶುಪಾಲನೆಂಬ ದೊರೆಗೂ ಅವನ ಹೆಂಡತಿ ಪದ್ಮಾಕ್ಷಿಗೂ ಅಕೃತಪುಣ್ಯ ನೆಂಬ ಒಬ್ಬ ಮಗನು ಹುಟ್ಟಿ ದನು, ಇವನು ಹುಟ್ಟಿದಂದಿನಿಂದ ತಾಯಿತಂದೆಗಳಿಗೆ ಮಹಾದಾರಿದ್ರ್ಯವು ಪ್ರಾಪ್ತವಾಗಿ ತಂದೆ ಸಾಯಲು ಅಕೃತಪುಣ್ಯನು ಭಿಕ್ಷಾಟನಮಾ ಡಿಕೊಂಡು ಜೀವಿಸುತ್ತಿದ್ದನು ಬಂಧುಗಳ ಅನಾದರಣೆಯನ್ನು ಸಹಿಸಲಾರದೆ ಮತ್ತೊಂದೂರಿಗೆ ಹೋಗಿ ಬಲಭದ್ರನೆಂಬ ವೈಶ್ಯನ ಮನೆಯಲ್ಲಿ ಸೇವಕನಾಗಿರಲು, ಆ ವೈ ಶ್ಯನ ಮಕ್ಕಳು ಇವನಿಗೆ ಅನುಚಿತಕಾರ್ಯಗಳನ್ನು ಮಾಡುವಂತೆ ಹಿಂಸೆಪಡಿಸಿದುದರಿಂದ ಈ ಹಿಂಸೆಯನ್ನು ತಡೆಯಲಾರದೆ ಸಮಿಾಪದಲ್ಲಿದ್ದ ಋಷ್ಯಾಶ್ರಮಕ್ಕೆ ಹೋಗಿ ಮುನಿ
ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೪೯೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.