ಶತಮಾನ) ಮಾಧವದೇವ 413 ಸೇವಾನಿರತನಾಗಿದ್ದು ಮೃತನಾದನು. ಬಳಿಕ ಅದೇಬಲಭದ್ರನಿಗೆ ಧನ್ಯಕುಮಾರನೆಂಬ ಮಗನಾಗಿ ಜನಿಸಿ ಅಸಾಧಾರಣವಾದ ಐಶ್ವರ್ಯವನ್ನೂ ಖ್ಯಾತಿಯನ್ನೂ ಪಡೆದು ತನ್ನ ವಂಶವನ್ನು ಉದ್ಧರಿಸಿದನು. ಗ್ರಂಥಾವತಾರದಲ್ಲಿ ಜಿನಸ್ತುತಿ ಇದೆ. ಬಳಿಕ ಕವಿ ಸಿದ್ಧಾದಿಗಳು, ಪಂಡಿತಮುನಿ, ದೇಸಿಯಗಣದ ಚಂದ್ರಕೀರ್ತಿಯ ಮಗನಾದ ಪ್ರಭೇಂದು ಮುನಿ ಇವರುಗಳನ್ನು ಹೊಗಳಿದ್ದಾನೆ. ಈಗ್ರಂಥದಿಂದ ಒಂದೆರಡು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ. ಮೂಕುತಿ ಅರುಣೋದಯಕೆ ಮೂಕುತಿಮುತ್ತು ಕೆಂಪಾಗಿ | ಅರಲುಗಣ್ಣಾಲಿಕಪ್ಪಿಂದ | ಕರಿದೊಂದುಕಡೆಯ ತೋಱಲು ಮುಗ್ಧೆಯೊರ್ವಳು !ಗುರುಗಂಜಿಯೆಂದುಬಿಸುಟಳು | ಸೂಳೆಗೇರಿ ವಿನಯವೊಬ್ಬನಕೂಡೆ ನಯನವೊಬ್ಬನಕೂಡೆ | ಮನವೊಬ್ಬನೊಳಿರುತಿಹುದು | ಧನವಿತ್ತಡವನೆ ಮನ್ಮಧನೆಂಬೀವೇಶ್ಯಾ ! ಬನದ ಕೇರಿಯ ಪೊಱಮಟ್ಟ | ಸಜ್ಜನರು ಕರಗೆ ಚಿನ್ನದ ಕಾಂತಿಯರೆಯೆ ಚಂದನಗಂಧ | ಪರಿಮಳ ಪಿರಿದಾಗುವಂತೆ || ಧರೆಯೊಳು ಸುಜನರು ಕೆಲರು ದುಃಖವ ಮಾಡೆ | ವರಗುಣಗಳನು ತಪ್ಪುವರೇ ||
ಮಾಧವದೇವ ಸು 1650 ಈತನು ನರಪಿಂಗಲಿಯನ್ನು ಒರೆದಿದ್ದಾನೆ. ಇವನು ಜೈನಕವಿ; ಇವನಿಗೆ ಅರ್ಹದ್ಧಾಸ ಎಂಬ ಹೆಸರೂ ಇದ್ದಂತೆ ತೋರುತ್ತದೆ. ತನ್ನ ವಿಷಯವನ್ನು ಈ ಪದ್ಯಗಳಲ್ಲಿ ಹೇಳಿಕೊಂಡಿದ್ದಾನೆ... ಪರಮಜಿನೇಂದ್ರನ ಪಾದಾಂ | ಬುರುಹಾಂಕಿತನರ್ಧಿಯಿಂದ ಮಾಧವದೇವಂ | ಧರೆಗಱಿವಂತುಟು ನರಪಿ೦ | ಗಲಿಯಂ ತಾಂ ಪೇಲ್ದಿ ಪೊಚ್ಚಪೊಸಗನ್ನಡದಿಂ || ಯಂತ್ರದೊಳಂ ಮಂತ್ರದೊಳಂ | ತಂತ್ರದೊಳಂ ಗೇಯರಸಸಭಾಮಂಡಲದೊಳ್! ಸಂತತ ಶಕುನವಿಚಾರಮ | ನೆಂತುಂ ನೆಱಿ ಪೇಟಿಬಲ್ಲ ಮಾಧವದೇವಂ | ಇವನು ಸುಮಾರು 1650 ರಲ್ಲಿ ಇದ್ದಿರಬಹುದೆಂದು ತೋರುತ್ತದೆ.