ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕವಿಚರಿತೆ [17 ನೆಯ ಇವನ ಗ್ರಂಥ. ನರಪಿಂಗಲಿ ಇದು ಕಂದದಲ್ಲಿ ಬರೆದಿದೆ. ಇದರಲ್ಲಿ ಶಕುನಶಾಸ್ತ್ರಕ್ಕೆ ಸಂಬಂಧ ಪಟ್ಟ ವಿಷಯಗಳು ಹೇಳಿವೆ. ಇದರಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ ಕಾಗೆಯ ಗೂಗೆಯ ಶಕುನನು | ನೇಗೆಯ್ದುಂ ನೋಡಬೇಡ ನೋಡಂತರದೊಳ್ | ಮೂಗಂಬಧಿರಂಗಱಿಯಲ್ | ಬೇಗಂ ಬರ್ಪಂತೆ ಪೇಲ್ದಿ ನರಪಿಂಗಲಿಯಂ | ತಾರೆತಿಧಿವಾರವೇಳೆಯ | ನೋರಂತಿರೆ ನೋಡಬೇಡ ಕೋಟಲೆಯಿಂದಂ | ಮಾರುತಗತಿಪದಮೆಂತೆನೆ | ಸಾರಮಿದಂ ನೋಡಿಕೊಳ್ಳಿ ನರಪಿಂಗಲಿಯೊಳ್ || ಉತ್ತಮನೆ ಬಂದು ನುಡಿದೊಡೆ (ಯುತ್ತಮ ಮಧ್ಯಮನೆ ಬಂದು ನುಡಿದೊಡೆ ಮಧ್ಯಂ! ಮತ್ತೆ ಕನಿಷ್ಠ॰ ನುಡಿದೊಡೆ |ಮೃತ್ಯುವೆ ಪ್ರತ್ಯಕ್ಷವಾಗಿ ನುಡಿದಂತಕ್ಕುಂ | ಗುಣಚಂದ್ರ, ಸು. 650 ಈತನು ಛಂದಸ್ಸಾರವನ್ನು ಬರೆದಿದ್ದಾನೆ. ಇವನು ಜೈನಕವಿ. ಇವನ ವಿಷಯವಾಗಿ ಈ ಗ್ರಂಥದಿಂದ ಇನ್ನಾವ ಅಂಶವೂ ತಿಳಿವುದಿಲ್ಲ. ಕೇದಾರಭಟ್ಟನ ವೃತ್ತರತ್ನಾಕರವನ್ನು ಬಹಳ ಮಟ್ಟಗೆ ಅನುಸರಿಸಿದ್ದಾನೆ. ಇವನು ಸುಮಾರು 1650 ರಲ್ಲಿ ಇದ್ದಿರಬಹುದು. ಇವನ ಗ್ರಂಥ. ಛಂದಸ್ಸಾರ ಇದು (1) ಸಂಜ್ಞಾ ಪ್ರಕರಣ (2) ಮಾತ್ರಾಛ೦ದೋಲಕ್ಷಣ, (3) ಸಮವೃತ್ತ ಪ್ರಕರಣ, (4) ಸಂಕೀರ್ಣ ಪ್ರಕರಣ, (5) ತಾಳವೃತ್ತಾದಿ ಎಂಬ 5 ಅಧ್ಯಾಯಗಳಾಗಿ ಭಾಗಿಸಲ್ಪಟ್ಟಿದೆ. ಸಂಕೀರ್ಣಪ್ರಕರಣದಲ್ಲಿ ದಂಡಕ, ಪೋಡಕಮಾತ್ರಾದ್ವಿಪಾದ, ಪೋಡಕಮಾತ್ರಾಚತುಷ್ದಾದ, ಪಾದ ಪಾದಭಿನ್ನಪಾತ್ರದ್ವಿಪಾದಿ, ಅರ್ಧಸಮವೃತ್ತ, ವಿಷಮವೃತ್ತ, ಪ್ರಸ್ತಾರ, ನಷ್ಟ, ಉದ್ದಿಷ್ಟ, ಲಗಕ್ರಿಯೆ, ಸಂಖ್ಯಾನ ಈ ಅಂಶಗಳು ಹೇಳಿವೆ. ಆರಂಭದಲ್ಲಿ ಜಿನಸ್ತುತಿಯಿದೆ, ಅಧ್ಯಾಯಗಳ ಕೊನೆಯಲ್ಲಿ ಈ ಗದ್ಯವಿದೆ ಇತಿ ಶ್ರೀಮದನುಪಮನಿತ್ಯನಿರಂಜನಪರಮಾತ್ಮಾ ರ್ಹದಾರಾಧನಾಪರಮಾನಂದ ಬಂಧುರ ಗುಣಚಂದ್ರವಿರಚಿತಛಂದಸ್ಸಾ ರದೊಳ್. ಈ ಗ್ರಂಥದಿಂದ ಕೆಲವುಭಾಗವನ್ನು ತೆಗೆದು ಬಿರೆಯುತ್ತೇವೆ