ಈ ಪುಟವನ್ನು ಪರಿಶೀಲಿಸಲಾಗಿಲ್ಲ.
434 ಕರ್ಣಾಟಕ ಕವಿಚರಿತೆ. [17ನೆಯ
ಗುರುಚರಣಭಕ್ತಿ ಸುಸ್ಥಿರ | ಸಿರಿಯಿದು ಗುರುಭಕ್ತಿವನಧಿವರ್ಧನರಜನೀ | ಕರವಿದು ದುರ್ಗತಿತಮಭಾ | ಸ್ಕರನಿದು ನಿರಯಾದ್ರಿಕುಲಿಶಧರನೀಚರಿತ೦ || ಕೊಳನಂ ಹಂಸೆಯ ನೈದಿಲ | ನಳಿನವ ಶುಕಪಿಕಮಯೂರತತಿಯಂ ಮಂದಾ | ನಿಲನಂ ನೆಲನಂ ವರ್ಣಿಪ | ಗಲಭೆಯ ಕೃತಿಯಲ್ಲಮಾಶಶರಣಚರಿತ್ರಂ |
ಗ್ರಂಥಾವತಾರದಲ್ಲಿ ಸ್ವಗುರುರಾಮನಾಧಸ್ತುತಿ ಇದೆ. ಬಳಿಕ ಕವಿ ಮುದ್ರಾಪುರದ ಪ್ರಸನ್ನರಾಮೇಶ್ವರ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ, ಸರಸ್ವತಿ ಇವರುಗಳನ್ನು ಸ್ಮರಿಸಿ ಅನಂತರ ಬಸವನೇ ಮೊದಲಾದ ಪುರಾತನರನ್ನು ಸ್ತುತಿಸಿದ್ದಾನೆ ಈ ಗ್ರಂಧದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ
ಸಮುದ್ರ
ಗಿರಿಶಂಗೊಲ್ದು ವಿಭೂಷಣಕ್ಕೆ ಶಶಿಯಂ ರೈತ್ಯರಿಗಂ ಪ್ರೇಮದಿಂ | ಸಿರಿಯಂ ಕೌಸ್ತುಭಮಂ ಸುರರ್ಗ್ಗೆ ಸುಧೆಯಂ ದೇವೆಂದ್ರಗೈಶ್ವರ್ಯಮಂ || ಹರುಷಂ ಕೈಮಿಗಲಿತ್ತುದೊಂದು ಘನದಿಂ ಮತ್ತಂ ಧರಾಚಕ್ರದೊಂ | ದಿರವು೦ ತನ್ನೊಳಗೆಂಬ ತೇಜದೂರವಿಂದೊಪ್ಪಿತ್ತು ರತ್ನಾಕರಂ ||
ಜೂಜು ಡಾಳಿಸಿ ಹಾಸಂಗಿಗಳಂ | ಹೇಳಿದ ದಾಯವನೆ ಹಾಯ್ಕಿ ಹೆಚ್ಚಿಸಿ ಗುಣಮಂ | ಸೋಲದೆ ಸಮವೆನಲಾಡುವ | ಲೀಲೆಯ ನೆತ್ತದಲಿ ಜೂಜುಗಾರರ್ ಮೆರೆದರ್
ಶರಣಭಕ್ತಿ
ಪುರಮಂ ವನಮಂ ಲತೆಯಂ | ತರುಣಿಯರಂ ಗಿರಿಯ ಕರಿಯ ಶರಧಿಯ ಪೊಗಳು | ತ್ತಿರದೆ ಶಿವಶರಣರೆಲ್ಲರ | ಚರಣವ ನೆನೆ ಮನವೆ ಬೇಡಿಕೊಂಬೆ೦ ನಿನ್ನ೦ ||
ಬ್ರಹ್ಮರಾಕ್ಷಸ
ಏರುವ ರೋಮ ಕಾರಿರುಳ ಕಾರುವ ಕಾಯವತೀವಭೀತಿಯಂ | ಬೀರುವ ಕೋರೆದಾಡೆಗಳು ಕೆಂಪಡರ್ದಕ್ಷಿಗಳುಬ್ಬಿದಾನನಂ || ತೋರಿತುಮಿಾಸೆ ಜುಂಜುದಲೆಯಂಜಿಸುತಿರ್ಪ ಕರಾಸಿಯುಗ್ರದಾ | ಕಾರದ ಬ್ರಹ್ಮರಾಕ್ಷಸನು ಕಾನನದಲ್ಲಿರೆ ಕಂಡೆನುರ್ವಿಪಾ !
- ಬಸವ, ಅಲ್ಲಮ, ಅಕ್ಕ, ಮಡಿವಾಳ, ಚೆನ್ನ ಬಸವ, ಸಿದ್ಧರಾಮ, ಮು ಸುಟಿಯಚೌಡ, ಉದ್ಭಟ, ಹಲಾಯುಧ, ಕೇಶಿರಾಜ, ದಾಸ.